ಕೊನೆಗಾಲ
ಹದಿನಾರನೆ ವಯಸ್ಸಿಗೆ ಅಪ್ಪ ಸತ್ತರು ಸ್ವಲ್ಪವು ಎದೆ ಗುಂದಲಿಲ್ಲ. ಎಲ್ಲವನ್ನು ನಿಭಾಯಿಸುವ ಶಕ್ತಿ ಶ್ರೀನಿವಾಸ ರಾಯರಲ್ಲಿ ಇತ್ತು. ಈ ಮಾತು ಊರಲ್ಲೂ ತುಂಬಾ ಜನರ ಬಾಯಲ್ಲಿ ಕೇಳಿ ಬಂದಿತ್ತು.
ರಾಯರು ಕಲಿತದ್ದು ಎಳನೆ ಕ್ಲಾಸ್. ಆದರೆ ವ್ಯವಹಾರದಲ್ಲಿ ಅತಿ ಬುದ್ದಿವಂತರು. ಅಪ್ಪ ಸತ್ತ ಮಾರನೆ ವರ್ಷಕ್ಕೆ ಕಾರು ತೆಗೆದುಕೊಂಡರು. ಇಡೀ ಊರಿಗೆ ನಾಲ್ಕು ಕಾರು ಇತ್ತು. ಅದರಲ್ಲಿ ಇವರದ್ದು ಒಂದು. ಆಗಿನ ಕಾಲದಲ್ಲಿ ಅತಿ ಅಣ್ಣ ವಯಸ್ಸಿಗೆ ಕಾರು ತೆಗೆದುಕೊಂಡ ಹೆಗ್ಗಳಿಕೆ. ಇನ್ನು ನೆಂಟರಿಷ್ಟರಲ್ಲಿ ಕೆಲವರಂತು ಮೋಟರ್ ಶ್ರೀನಿವಾಸ ಎಂದೆ ಹಿಂದಿನಿಂದ ಹೇಳಿದ್ದು ಇದೆ. ತಮ್ಮ ಯಜಮಾನಿಕೆಯಲ್ಲಿ ಮನೆಯನ್ನು ಚನ್ನಾಗೆ ಸ್ವಲ್ಪ ಅದ್ದೂರಿಯಾಗಿ ನಿಭಾಯಿಸುತ್ತಿದ್ದರು.
ಶ್ರೀನಿವಾಸರಿಗೆ ಹೆಣ್ಣು ಸಿಗುವುದು ದೊಡ್ಡ ವಿಷಯವಲ್ಲ. ಅವರ ದೂರದ ನೆಂಟರಲ್ಲೆ ರಾಯರ ತಾಯಿ ಒಂದು ಗುಣವಂತೆ,ರೂಪವಂತೆಯನ್ನು ಹುಡುಕಿದರು. ಸುಶೀಲಾ ಇವರ ಮನೆಗೆ ತಕ್ಕ ಹುಡುಗಿ. ಚನ್ನಾಗಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು.
ರಾಯರು ಎಷ್ಟೇ ಅದ್ದೂರಿಯಾಗಿದ್ದರು ಅಪ್ಪ-ಮಾಡಿದ ಆಸ್ತಿಯನ್ನು ಬೆಳೆಸಿದರು ಹೊರತು ಕಳೆದವರಲ್ಲ. ಮನೆಗೆ ಯಾರೆ ಬರಲಿ ಬಡವ, ಶ್ರೀಮಂತ ಎಂದು ನೋಡದೆ ಬಂದವರಿಗೆ ಆದರಾತಿಧ್ಯ ಸಮಾನವಾಗಿ ಮಾಡುತ್ತಿದ್ದರು. ಇವರಿಗೆ ಸರಿಯಾದ ಇವರ ಹೆಂಡತಿ ಸುಶೀಲಾ. ಸ್ವಲ್ಪವು ದ್ವನಿ ಎತ್ತದೆ ತಾನಾಯಿತು ತನ್ನ ಮನೆ ಕೆಲಸವಾಯಿತು ಅಂತ ಇದ್ದವಳು.
ಒಮ್ಮೆ ಶ್ರೀನಿವಾಸ ರಾಯರ ತಾಯಿಗೆ ತಾನು ಇದ್ದಾಗಲೆ ಗಂಡನ ಅಸ್ತಿಯನ್ನು ಗಂಗಾ ನದಿಯಲ್ಲಿ ಬಿಡಬೇಕು ಎಂಬ ಆಸೆಯಾಯಿತು. ಇದನ್ನು ಮಗನ ಹತ್ತಿರ ಹೇಳಿದ್ದೆ ರಾಯರು ತಾಯಿಯನ್ನು ಕಾಶಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರು. ವಯಸ್ಸಾದ ತಾಯಿಗೆ ತುಂಬಾ ಸಮಯ ಟ್ರೀನಿನಲ್ಲಿ ಕುಳಿತುಕೊಂಡು ಪ್ರಯಾಣಿಸುವುದು ಕಷ್ಟವೆಂದು ಊರಿನಿಂದ ಗೋವಾದ ವರೆಗೆ ಕಾರಿನಲ್ಲಿ ಹೋಗಿ ಅಲ್ಲಿಂದ ಕಾಶಿಗೆ ವಿಮಾನದ ಮೇಲೆ ಕರೆದುಕೊಂಡು ಹೋದರು. ಆಗಿನ ಕಾಲದಲ್ಲಿ ವಿಮಾನ ಪ್ರಯಾಣ ಅತಿ ವಿರಳವಾಗಿತ್ತು. ಅಲ್ಲದೆ ಅತಿ ದುಬಾರಿಯಾಗಿತ್ತು. ರಾಯರು ತಾಯಿಯನ್ನು ವಿಮಾನದ ಮೇಲೆ ಕಾಶಿಗೆ ಕರೆದುಕೊಂಡು ಹೋಗಿದ್ದು ಊರಲ್ಲಿ ದೊಡ್ಡ ಸುದ್ದಿ ಆಗಿತ್ತು. ಇನ್ನು ಮನೆಗೆ ಬಂದ ಮೇಲೆ ಗಂಗಾ ಸಮಾರಾಧನೆ ತುಂಬಾ ಅದ್ದೂರಿಯಾಗಿ ಮಾಡಿದ್ದರು. ಈಗಿನ ಕಾಲದಲ್ಲು ಊರಲ್ಲಿ ರಾಯರು ತಾಯಿಯನ್ನು ಕಾಶಿಗೆ ಕರೆದುಕೊಂಡು ಹೋದಂತೆ ಎಂದು ಹೇಳುವುದುಂಟು. ಇದು ರಾಯರ ಯಜಮಾನಿಕೆಯ ಅದ್ದೂರಿತನದ ಒಂದು ಉದಾರಣೆಯಷ್ಟೆ. ಇದರ ಜೊತೆ ರಾಯರು ಮತ್ತು ಅವರ ಹೆಂಡತಿ ತಾಯಿಯನ್ನು ಕೊನೆಯ ತನಕ ಗೌರವ ಮತ್ತು ಪ್ರೀತಿಯಿಂದ ನೋಡಿಕೊಂಡರು. ಇನ್ನು ಇವರು ಅನೇಕ ದೇವರ ಕೆಲಸ ಅನ್ನ ಸಂತರ್ಪಣೆ ಮಾಡಿದ್ದಾರೆ. ಇವುಗಳ ಹೊರತಾಗಿ ಅನೇಕ ಶಾಲೆ, ದೇವಸ್ಥಾನಗಳ ಜೀರ್ಣೋದ್ದಾರ ಮಾಡಿದ್ದಾರೆ.
ಇನ್ನು ಊರಿನಲ್ಲಿ ರಾಯರನ್ನು ತುಂಬಾ ಗೌರವದಿಂದ ನೋಡುತ್ತಿದ್ದರು. ಅವರ ಮಾತನ್ನು ಯಾರು ತೆಗೆದು ಹಾಕುತ್ತಿರಲಿಲ್ಲ. ಇನ್ನು ಅಣ್ಣ-ತಮ್ಮಂದಿರ ಪಾಲಾಗುವಾಗಲು ಅವರನ್ನೇ ಪಂಚರನ್ನಾಗಿ ಕರೆಯುತ್ತಿದ್ದರು. ರಾಯರು ಯಾರ ಪರವು ನಿಲ್ಲದೆ ನ್ಯಾಯವಾಗಿ ಅವರವರ ಪಾಲನ್ನು ಕೊಡಿಸುತ್ತಿದ್ದರು. ತನ್ನ ಎಷ್ಟೆ ಹತ್ತಿರದವರಾದರು ನ್ಯಾಯದ ವಿಷಯಕ್ಕೆ ಬಂದರೆ ಯಾವುದನ್ನು ಲೆಕ್ಕಿಸುತ್ತಿರಲಿಲ್ಲ. ಈ ಸ್ವಭಾವವೆ ಇವರ ಮುಂದಿನ ಜೀವನಕ್ಕೆ ಮುಳ್ಳಾಗುವುದು ಎಂದು ಊಹಿಸಿರಲಿಲ್ಲ.
ರಾಯರಿಗೆ ನಾಲ್ಕು ಮಕ್ಕಳು. ಎರಡು ಗಂಡು ಮತ್ತು ಎರಡು ಹೆಣ್ಣು. ರಾಯರು ಹೆಣ್ಣು ಮಕ್ಕಳನ್ನು ಹತ್ತನೆಯ ಕ್ಲಾಸಿನ ವರೆಗೆ ಓದಿಸಿದರು. ದೂರದ ಪೇಟೆಗೆ ಕಾಲೇಜಿಗೆ ಕಳಿಸುವ ಮನಸ್ಸು ರಾಯರು ಮಾಡಲಿಲ್ಲ. ಇನ್ನು ಹೆಣ್ಣು ಮಕ್ಕಳಾಗಲಿ ಮುಂದಿನ ಓದಿನ ಬಗ್ಗೆ ಅಷ್ಟಾಗಿ ಆಸಕ್ತಿ ತೋರಲಿಲ್ಲ, ತಾಯಿಯ ಜೊತೆ ಅಚ್ಚು ಕಟ್ಟಾಗಿ ಮನೆ ಕೆಲಸ ಮಾಡಿಕೊಂಡಿದ್ದರು. ಸಣ್ಣ ವಯಸ್ಸಿಗೆ ರಾಯರು ಚನ್ನಾಗಿಯೆ ಹಣ್ಣು ಮಕ್ಕಳ ಮದುವೆಯನ್ನು ಒಳ್ಳೆ ಕಡೆ ಮಾಡಿಕೊಟ್ಟರು.
ಇನ್ನು ಗಂಡು ಮಕ್ಕಳ ವಿಷಯಕ್ಕೆ ಬಂದರೆ ಗೊವಿಂದ ಮತ್ತು ಗೋಪಾಲ ಇಬ್ಬರು ಕಾಲೇಜಿಗೆ ಹೋಗಿ ಒಂದು ಡಿಗ್ರಿ ಸಂಪಾದಿಸಿದ್ದರು. ಆದರೆ ನೌಕರಿಗೆ ಹೋಗುವಷ್ಟು ಬುದ್ದಿವಂತರಲ್ಲ. ಬೇಕಾದಷ್ಟು ಜಮೀನು ಇರುವ ಕಾರಣ ರಾಯರಿಗು ಮಕ್ಕಳನ್ನು ಹೊರಗೆ ಕಳಿಸುವ ಆಸೆ ಎನು ಇರಲಿಲ್ಲ. ಮನೆಯಲ್ಲಿ ಇರುವ ಜಮೀನು ನೋಡಿಕೊಂಡು ಹೋದರೆ ಸಾಕು ಎಂದೆ ಇತ್ತು. ಇವರಿಗೆ ಮನೆಯಲ್ಲಿ ಇದ್ದ ಜಮೀನನ್ನು ಬಿಟ್ಟು ಹೊರಗೆ ನೌಕರಿಗೆ ಹೋಗುವುದು ವಯಕ್ತಿಕವಾಗಿ ಇಷ್ಟ ಆಗುತ್ತಿರಲಿಲ್ಲ. ಆದರೆ ಇದನ್ನು ತಮ್ಮ ಮಕ್ಕಳ ಮೇಲೆ ಹೇರಲಿಲ್ಲ.
ರಾಯರು ವಯಸ್ಸಿಗೆ ಬಂದ ಗೋವಿಂದನ ಮದುವೆ ಮಾಡಲು ನಿಶ್ಚಯಿಸಿದರು. ಅಕ್ಕ-ಭಾವಂದಿರ ಅನುಗ್ರಹದಿಂದ ಗೊವಿಂದನಿಗೆ ಮದುವೆ ಆಯಿತು. ಅತ್ತೆಗೆ ತಕ್ಕ ಸೊಸೆ ಅನ್ನೊ ಹಾಗೆ ಗೊವಿಂದನ ಹೆಂಡತಿ ಸರೋಜಾ ಚನ್ನಾಗೆ ಸಂಸಾರ ಮಾಡಿಕೊಂಡು ಹೋಗುವವಳೆ. ಇವರು ನಡೆಸಿಕೊಂಡು ಬಂದ ನೇಮ ನಿಷ್ಠೆಯಲ್ಲಿ ತಾನು ಭಾಗಿ ಆಗಿ ಅತ್ತೆಯಿಂದ ಮನೆಯ ಸಂಪ್ರಧಾಯವನ್ನು ಚನ್ನಾಗಿ ಕಲಿತಳು.
ರಾಯರ ಮೂರು ಮಕ್ಕಳು ನೆಲೆ ಕಂಡರು. ದಿನಕ್ಕು-ದಿನಕ್ಕು ಜಮೀನನ್ನು ತುಂಬಾ ಚನ್ನಾಗಿಯೆ ಬೆಳೆಸಿದರು. ಮನೆಯಲ್ಲಿ ಬೆಳ್ಳಿ-ಬಂಗಾರ ಎಲ್ಲಾ ಯತೆಶ್ಚವಾಗಿಯೆ ಮಾಡಿಸಿದರು. ರಾಯರ ಮನೆಯಲ್ಲಿ ಎನಿಲ್ಲ ಅನ್ನೊ ಮಾತೆ ಇಲ್ಲ. ತಮಗೆ ಸಿಕ್ಕ ಹದಿನಾರನೆ ವಯಸ್ಸಿನ ಯಜಮಾನಿಕೆ ಮಕ್ಕಳಿಗೆ ಕೊಡದೆ ತಾವೆ ನಿಭಾಯಿಸುತ್ತಿದ್ದರು. ಇನ್ನೇನು ಕೊನೆಯ ಮಗ ಶ್ರೀದರನ ಮದುವೆ ಮಾಡಿ ಹಾಯಾಗಿ ಇರುವೆ ಎಂದು ಹೇಳಿಕೊಳ್ಳುತ್ತಿದ್ದರು.
ರಾಯರು ಹೇಳಿದಂತೆ ಕೊನೆಯ ಮಗ ಶ್ರೀದರನ ಮದುವೆ ಮಾಡುವ ತಯಾರಿ ನಡೆಸಿದರು. ಅವನಿಗೆ ಜಾತಕ ತೆಗೆದುಕೊಳ್ಳಲು ಶುರು ಮಾಡಿದರು. ಆಗಷ್ಟೆ ಸಮಾಜದಲ್ಲಿ ಹೆಣ್ಣು ಮಕ್ಕಳ ಅಭಾವ ಅದರಲ್ಲು ಮನೆಯಲ್ಲಿ ಇರುವ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದು ಸ್ವಲ್ಪ ಕಷ್ಟ ಇತ್ತು. ಇನ್ನು ರಾಯರ ಮನೆ ಒಳ್ಳೆ ಸಂಸ್ಥಾನದ ತರವೆ. ಕೂಡು ಕುಟುಂಬ ಜೊತೆಗೆ ಬಂದು ಹೋಗುವವರು, ನೇಮ- ನಿಷ್ಠೆ, ಸಂಪ್ರಧಾಯವಾಗಿ ನವರಾತ್ರಿ. ಗಣೇಶನ ಹಬ್ಬ ಎಲ್ಲಾ ಮಾಡುತ್ತಿದ್ದರು. ಅತ್ತೆ ಮಾವ ಇದ್ದರೆ ರಾಹು-ಕೇತು ಅಂತ ಹೆಸರಿಟ್ಟ ಕಾಲದಲ್ಲಿ ಈ ಸಂಪ್ರಧಾಯ ಮತ್ತು ಕೂಡು ಕುಟುಂಬದಲ್ಲಿ ಇದ್ದ ಶ್ರೀದರನಿಗೆ ಜಾತಕ ಬರುವುದೆ ವಿರಳ. ಇನ್ನು ಬಂದ ಒಂದೆರಡು ಜಾತಕವು ಯಾವುದು ಸರಿ ಹೊಂದಲಿಲ್ಲ.
ಶ್ರೀದರನ ಮದುವೆ ರಾಯರಿಗೆ ಸ್ವಲ್ಪ ಯೋಚನೆಯೆ ಆಯಿತು. ಹೆಣ್ಣು ಮಕ್ಕಳ ಮದುವೆ ಹೂವು ಎತ್ತಂತೆ ಆಯಿತು. ದೊಡ್ಡ ಮಗನ ಮದುವೆಯು ಸಲೀಸಾಗಿ ಮುಗಿಸಿದ ರಾಯರಿಗೆ ಶ್ರೀದರನಿಗೆ ಒಂದು ಹೆಣ್ಣು ಸಿಕ್ಕರೆ ಸಾಕೆನಿಸಿತು. ಸ್ವಲ್ಪ ಮೆದು ಸ್ವಾಭಾವ ಆದ ಶ್ರೀದರ. ವಯಸ್ಸಿಗೆ ಸಹಜ ಆಸೆ ಅನ್ನೊ ಹಾಗೆ ತನ್ನ ವಾರಗೆಯವರ ಮದುವೆ ಆಗ್ತಾ ಇರುವಾಗ ತನಗು ಒಂದು ಹೆಣ್ಣು ಸಿಗಲಿ ಅಂತ ಇತ್ತು. ಆದರೆ ಇದನ್ನು ಎಲ್ಲು ತೊರಿಸಿಕೊಳ್ಳದೆ ತನ್ನ ಪಾಡಿಗೆ ಜಮೀನು ಮನೆ ಅಂತ ಕೆಲಸ ಮಾಡುತ್ತಿದ್ದ,
ರಾಯರು ಎಲ್ಲರ ಹತ್ತಿರ ಮಗನ ಮದುವೆ ಮಾಡೋ ವಿಚಾರ ಹೇಳಿಕೊಳ್ಳುತ್ತಿದ್ದರು. ಇದರ ಪರಿಣಾಮ ಶ್ರೀದರನಿಗೆ ಒಂದು ಹೆಣ್ಣು ಗೊತ್ತಾಯಿತು. ಶ್ವೇತಾ ಹೆಸರಿಗೆ ತಕ್ಕ ಹಾಗೆ ಬೆಳ್ಳಗೆ ನೋಡಲು ಚನ್ನಾಗಿಯೆ ಇದ್ದಳು. ಜಾತಕವು ಹೊಂದುತಿತ್ತು. ಆದರೆ ಹೆಣ್ಣಿನ ಮನೆಯವರು ಕಡು ಬಡವರು. ಇವರೆ ನಿಂತು ಮದುವೆ ಮಾಡಿಕೊಳ್ಳ ಬೇಕು. ಅದು ಅಲ್ಲದೆ ಅವಳಿಗೆ ಒಂದು ತಮ್ಮ ಇದ್ದ. ಕಲಿಯಲು ತುಂಬಾ ಜಾಣ. ಅವನಿಗೆ ಕಲಿಸುವ ತಾಕತ್ತು ಅಪ್ಪ-ಅಮ್ಮನಲ್ಲಿ ಇಲ್ಲ. ಮುದ್ದಿನ ತಮ್ಮ, ಇನ್ನು ಓದಲು ಜಾಣ, ಚನ್ನಾಗಿ ಓದಿ ಮುಂದೆ ಬಂದರೆ ಅಪ್ಪ-ಅಮ್ಮನಿಗು ಸಹಾಯ ಆಗುತ್ತದೆ ಎಂದು ಶ್ವೇತಾ ಮದುವೆಯ ಮುಂಚೆ ತನ್ನ ತಮ್ಮನ ಓದಿನ ಜವಾಬ್ದಾರಿ ತಗೆದುಕೊಂಡರೆ ತಾನು ಮದುವೆ ಆಗುವೆ ಎಂದು ವಧು ದಕ್ಷಿಣೆಯನ್ನು ಕೇಳಿದರು. ರಾಯರಿಗೆ ಅವಳ ತಮ್ಮನನ್ನು ಓದಿಸುವುದೆನು ದೊಡ್ಡ ವಿಷಯವಲ್ಲ. ಎಷ್ಟೋ ಜನರಿಗೆ ಸಹಾಯ ಮಾಡಿದ ಕೈ. ಇನ್ನು ಮಗನ ಮದುವೆ ಆಗುವುದೆಂದರೆ ಮನೆಯಲ್ಲಿ ಯಾರಲ್ಲಿಯು ಕೇಳದೆ ಒಪ್ಪಿಗೆ ನೀಡಿದರು. ಅಂತು ಶ್ರೀದರನ ಮದುವೆ ಶ್ವೇತಾಳ ಜೊತೆ ಆಯಿತು. ಮುದ್ದಾದ ಹೆಂಡತಿ ತನಗೆ ಸಿಕ್ಕಳೆಂದು ಶ್ರೀದರ ಬಾರಿ ಖುಷಿಯಲ್ಲಿ ಇದ್ದ.
ತುಂಬಾ ಪ್ರೀತಿಸುವ ಗಂಡ, ದೊಡ್ಡ ಮನೆ, ಯಾವುದಕ್ಕು ಕೊರತೆ ಇಲ್ಲದೆ ಸೊಂಪಾಗಿ ಇದ್ದಳು. ದಿನ ನಿತ್ಯವು ಚನ್ನಾಗಿಯೆ ಅಲಂಕಾರ ಮಾಡಿಕೊಂಡಿರುತ್ತಿದ್ದಳು. ಶ್ರೀದರನು ಪೇಟೆಗೆ ಹೋದಾಗಲೆಲ್ಲ ಹೆಂಡತಿಗೆ ಏನಾದರು ತಂದು ಕೊಡುತ್ತಿದ್ದ. “ಹಂಚು ಕಾಣದವಳು ಕಂಚು ಕಂಡಂತೆ” ಅನ್ನೊ ಗಾದೆ ನಿಜವಾಯಿತು. ಅಷ್ಟಾಗಿ ಮನೆಗೆಲಸದಲ್ಲಿ ಸಹಾಯ ಮಾಡುತ್ತಿರಲಿಲ್ಲ. ಸುಶೀಲಮ್ಮ ಗಟ್ಟಿ ಇದ್ದರು. ಅಬ್ಯಾಸ ಬಲ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರು. ಮೊದಲಿನಿಂದಲು ಯಾರಿಗು ಏನು ಹೇಳದ ಸ್ವಭಾವ ಇನ್ನು ಸೊಸೆಯಂದಿರಿಗೆ ಹೇಳುತ್ತಾರೆಯೆ?
ಇದೆ ಸಮಯದಲ್ಲಿ ರಾಯರ ಹಿರಿ ಮಗಳ ಮನೆಯಲ್ಲಿ ಅಣ್ಣ-ತಮ್ಮಂದಿರಿಬ್ಬರು ಪಾಲಾಗುವ ಸಮಸ್ಯೆ ಶುರು ಅಯಿತು. ಈ ವಿಷಯಕ್ಕೆ ರಾಯರನ್ನು ಪಂಚರನ್ನಾಗಿ ಕರೆದರು. ಎಷ್ಟೋ ಕಡೆ ನ್ಯಾಯಬದ್ದವಾಗಿ ಪಾಲು ಮಾಡಿದ ರಾಯರ ಮೇಲೆ ಎಲ್ಲರಿಗೂ ನಂಬಿಕೆ ಇತ್ತು. ರಾಯರು ಮಗಳ ಮನೆ ಎಂದು ನಂಬಿಕೆ ಕಳೆದುಕೊಳ್ಳದೆ,ಅಳಿಯನ ಪರ ವಹಿಸದೆ ನ್ಯಾಯವಾಗಿ ಪಾಲು ಮಾಡಿಸಿದರು. ಮೂಲ ಮನೆ ಅಳಿಯ ಮಗಳಿಗೆ ಬಂದರು, ಅವರ ತಮ್ಮನಿಗೆ ಮೂಲ ಮನೆಯ ಮೌಲ್ಯದ ಲೆಕ್ಕ ಹಾಕಿ ಬೇರೆ ಮನೆ ಮಾಡಲು ದೊಡ್ಡ ಮೊತ್ತದ ಹಣವನ್ನು ಕೊಡಲು ನಿಗದಿ ಮಾಡಿದರು. ಇದು ಅಳಿಯ-ಮಗಳಿಗೆ ಸ್ವಲ್ಪ ಕಹಿಯಾದರು ಏನು ಮಾತಾಡದೆ ಒಪ್ಪಿಕೊಂಡರು.
ಒಮ್ಮೆ ರಾಯರ ಹಿರಿ ಮಗಳು ತನ್ನ ತಂಗಿ ಮನೆಯಲ್ಲಿ ಈ ವಿಷಯವನ್ನು ಹೇಳಿಕೊಂಡಳು. ಇದೆ ಸರಿಯಾದ ಸಮಯವೆಂದು ರಾಯರ ಎರಡನೆ ಅಳಿಯ ಸ್ವಲ್ಪ ಹಣದ ದುರಾಸೆ ಮನುಷ್ಯ ಇವರ ತಲೆಯಲ್ಲಿ ಹುಳ ಬಿಟ್ಟ. ಸ್ವಲ್ಪ ಎಲ್ಲರ ತಲೆ ತಿರುಗಿಸುವ ಲೆಕ್ಕದಲ್ಲಿ, “ ಮಾವ ಯಾವಾಗಲು ನ್ಯಾಯದ ಪರ ಮಾತಾಡುವ ಮಾವ, ಈಗೀನ ಕಾಲದಲ್ಲಿ ಹೆಣ್ಣು ಮಕ್ಕಳಿಗು ಅಪ್ಪನ ಆಸ್ತಿಯ ಮೇಲೆ ಹಕ್ಕಿದೆ ಅನ್ನುವದು ಅರಿತಿಲ್ಲವಾ? ಹೆಣ್ಣು ಮಕ್ಕಳಿಗೆ ತಕ್ಕ ಮಟ್ಟಿಗೆ ಕಲಿಸಿ ಮದವೆ ಮಾಡಿದರು. ಅದು ಅಲ್ಲದೆ ಮನೆ ಸೊಸೆಯಂದಿರಿಗೆ ವರ್ಷ-ವರ್ಷ ಬಂಗಾರ ಮಾಡಿಸುತ್ತಾರೆ ಹೊರತು ಮನೆ ಹೆಣ್ಣು ಮಕ್ಕಳಿಗೆ ಮದುವೆಯಲ್ಲಿ ಕೊಟ್ಟ ಬಂಗಾರದ ಹೊರತು ಮತ್ತೇನು ಕಾಣೆ. ಇನ್ನು ಶ್ವೇತಾಳ ತಮ್ಮನ ಓದಿನ ಜವಾದ್ದಾರಿ ಇವರದ್ದೆ. ಯಾವಾಗಲಾದರು ನಮ್ಮ ಮಕ್ಕಳ ಬಗ್ಗೆ ಯೋಚಿಸಿದ್ದಾರ? ನಾವು ವರ್ಷಕ್ಕೆ ನಾಲ್ಕು ಊಟದ ಹೊರತು ಮತ್ತೇನು ತಂದಿರುವ ಧಾಕಲೆ ಇಲ್ಲ. ದಿನಕ್ಕು ದಿನಕ್ಕು ಆಸ್ತಿ ಮಾಡುತ್ತಿದ್ದಾರೆ ಹೊರತು ಹೆಣ್ಣು ಮಕ್ಕಳಿಗಾಗಿ ಏನಾದರು ಕೊಟ್ಟಿದ್ದಾರೆಯೇ? ಗೊವಿಂದ ಶ್ರೀದರನ ತರ ನೀವು ಅವರ ಮಕ್ಕಳಲ್ಲವೆ? ನಾನು ನನ್ನ ಮಗನಿಗೆ ಎಷ್ಟು ಕೊಡುತ್ತೇನೊ ಅಷ್ಟೇ ನನ್ನ ಮಗಳಿಗು ಕೊಡುತ್ತೇನೆ. ಮಗನ ತರ ಅವಳು ಅವಳು ನನ್ನ ಮಗಳೆ. ಮಗಳು ಎಂದು ಅವಳನ್ನು ತಾತ್ಸಾರ ಮಾಡುವುದಿಲ್ಲ. ಅದು ಅಲ್ಲದೆ ಮೇಲಿಂದ ಕೋರ್ಟ ಹೆಣ್ಣು ಮಕ್ಕಳಿಗು ಸಮಾನವಾದ ಹಕ್ಕನ್ನು ನೀಡಿದೆ” ಎಂದು ಎಲ್ಲರ ಮನಸ್ಸಿಗೆ ನಾಟುವಂತೆ ಹೇಳಿದ. ಅದು ಅಲ್ಲದೆ ಶ್ವೇತಾಳ ಆಡಂಬರ ಜೀವನ ಇಬ್ಬರ ಹೆಣ್ಣು ಮಕ್ಕಳ ಕಣ್ಣು ಮುಂದೆ ಬಂದು ಹೋಯಿತು. ತಮ್ಮ ಪಾಲು ಅಲ್ಲಿ ಇದೆ ಅನ್ನುವುದು ತಲೆಯಲ್ಲಿ ಚನ್ನಾಗಿ ಕೂತಿತು.
ಇನ್ನು ಸೊಸೆಯಂದಿರ ಮದ್ಯ ಯಾಕೋ ಹೊಂದಾಣಿಕೆಯೆ ಇಲ್ಲದಂತಾಯಿತು. ಒಮ್ಮೆ ಸೊಸೆಯಂದಿರ ಜಗಳ ವಿಪರಿತಕ್ಕೆ ಹೋಯಿತು. ನಮ್ಮ ಪಾಲು ನಮಗೆ ಕೊಟ್ಟರೆ ನಾವು ಜವಾಬ್ದಾರಿಯಿಂದ ಮನೆ ಮಾಡಿಕೊಂಡು ಹೋಗುತ್ತೇವೆ ಅನ್ನೋ ಮಾತು ಬಂತು. ಇನ್ನು ಎಷ್ಟು ವರ್ಷ ನೀವೆ ಯಜಮಾನಿಕೆ ಇಟ್ಟುಕೊಳ್ಳ ಬೇಕು ಅಂತ ಅಂದ್ಕೊಂಡಿದ್ದೀರಾ? ನಿಮ್ಮ ಮಕ್ಕಳು ಜವಾದ್ದಾರಿ ತಗೊಳೋದು ಬೇಡವೆ? ಎಂದು ಶ್ವೇತಾ ಸ್ವಲ್ಪ ಖಾರವಾಗಿಯೆ ಹೇಳಿದಳು. ಅದು ಅಲ್ಲದೆ ಎರಡು ಸೊಸೆಯಂದಿರು ಹೊಂದಾಣಿಕೆ ಇಲ್ಲದೆ ಯಾವಾಗಲು ಜಗಳ ಮಾಡುವುದು ನೋಡಿ ಬೆಸತ್ತ ರಾಯರಿಗೆ ಪಾಲು ಮಾಡುವುದು ಸೂಕ್ತ ಎಂದು ಪಾಲು ಮಾಡಲು ನಿರ್ಧಾರ ಮಾಡಿದರು. ಎಲ್ಲಾ ಕಾಗದ ಪತ್ರಗಳನ್ನು ತಯಾರಿಸಿ ಹೆಣ್ಣು ಮಕ್ಕಳನ್ನು ಕರೆಸಿದರು. ಪಾಲಾಗಲು ಅವರ ಸಹಿಯ ಅಗತ್ಯವಿತ್ತು.
ಅಪ್ಪ ಹೇಳಿಕಳುಸಿದ್ದೆ ಹೆಣ್ಣು ಮಕ್ಕಳು ತವರು ಮನೆಗೆ ಬಂದರು. ರಾಯರು ಮನೆಯಲ್ಲಿ ತಮ್ಮಂದಿರು ಪಾಲಾಗುವ ವಿಷಯ ತಿಳಿಸಿ, ಇವರಿಬ್ಬರು ಪಾಲಾಗಲು ನಿಮ್ಮ ಸಹಿಯ ಅಗತ್ಯವು ಇದೆ ನೀವು ಸಹಿ ಹಾಕಿ ಅಂದರು. ಆಗ ಇದೆ ಸಮಯಕ್ಕೆ ಕಾಯುತ್ತಿದ್ದ ಹಿರಿ ಮಗಳು,” ಯಾಕಪ್ಪ ನಮ್ಮ ಸಹಿ. ಇವರು ಪಾಲಾಗುವುದಕ್ಕು ನಮ್ಮ ಸಹಿಗು ಏನು ಸಂಭಂದ” ಎಂದು ಮುಗ್ದವಾಗಿ ಕೇಳಿದಳು. ರಾಯರು, “ಯಾಕಮ್ಮ ನೀವು ನನ್ನ ಮಕ್ಕಳಲ್ಲವಾ? ನಿಮಗೆ ಈ ಪಾಲಿನಲ್ಲಿ ಹಕ್ಕಿಲ್ಲ, ಇನ್ನು ಇದು ನಿಮ್ಮ ತಮ್ಮಂದಿರಿಗೆ ಸೇರಿದ್ದು ಎಂದು ಬರೆದುಕೊಡುವುದು” ಎಂದರು. ಆಗ ಹಿರಿ ಮಗಳು,” ಯಾಕಪ್ಪ ನಾವು ನಿಮ್ಮ ಮಕ್ಕಳು ಅಂದ ಮೇಲೆ ನಮಗೆ ಯಾಕೆ ಆಸ್ತಿಯ ಮೇಲೆ ಹಕ್ಕಿಲ್ಲ. ನಮ್ಮ ಮನೆಯಲ್ಲಿ ಎಷ್ಟು ನ್ಯಾಯವಾಗಿ ಹಿಸೆ ಮಾಡಿಸಿದಿರಿ. ನಿಮ್ಮ ದಯೆಯಿಂದ ನನ್ನ ಮೈದುನ ಹೊಸ ಮನೆ ಕಟ್ಟಿಕೊಂಡು ಆರಾಂ ಆಗಿ ಇದ್ದಾನೆ. ಯಾವಾಗಲು ನ್ಯಾಯ ಬದ್ದವಾಗಿ ಪಾಲು ಮಾಡುವ ನೀವು ಈಗ ನಿಮ್ಮ ಹೆಣ್ಣು ಮಕ್ಕಳಿಗೆ ನ್ಯಾಯವಾಗಿ ಪಾಲು ಕೊಡುವುದಿಲ್ಲವೆ?” ಎಂದು ವೄದುವಾಗಿ ಅಪ್ಪನನ್ನು ಪ್ರಶ್ನೀಸಿದಳು. ಇವಳ ಮಾತಿಗೆ ತಂಗಿಯು ಅಕ್ಕನ ಪರ ನಿಂತಳು. ಇದನ್ನು ಯಾರು ನೀರಿಕ್ಷಿಸಲಿಲ್ಲ. ಒಮ್ಮೆ ಎಲ್ಲಾ ತಬ್ಬಿಬ್ಬಾದರು.
ಅತ್ತಿಗೆಯರ ಮಾತಿಗೆ ಸೊಸೆಯಂದಿರ ಕಣ್ಣು ಕೆಂಪಾಯಿತು. ಅನುಕೂಲವಾಗಿ ಒಳ್ಳೆ ಮೆತ್ತಗಿದ್ದವರು ಈಗ ಸರಿಯಾದ ಸಮಯಕ್ಕೆ ತಮ್ಮ ಪಾಲಿನ ಬಗ್ಗೆ ಮಾತಾಡ್ತಾ ಇದ್ದಾರೆ ಎಂದು ಸಿಡಿಮಿಡಿಗೊಂಡರು. ತಮ್ಮಂದಿರಿಗು ಅಕ್ಕಂದಿರ ಈ ರೀತಿಯ ಮಾತು ಊಹಿಸಿರಲಿಲ್ಲ. ಆದರೆ ಕೋರ್ಟ ಹೇಳಿದ ಪ್ರಕಾರ ಹೆಣ್ಣು ಮಕ್ಕಳಿಗು ಸಮಾನ ಪಾಲಿದೆ. ಅವರು ಸಹಿ ಹಾಕಿದಂತು ಏನು ಮಾಡುವಂತಿಲ್ಲ. ಪಾಲಿಗೆ ಬಂದದ್ದು ಪಂಚಾಮ್ರುತ ಅಂದು ಸುಮ್ಮನಾದರು. ರಾಯರು ಇದನ್ನು ನೀರಿಕ್ಷಿಸಿರಲಿಲ್ಲ. ನ್ಯಾಯವಾಗಿ ಹೇಗೆ ಪಾಲು ಮಾಡಬೇಕೊ ಹಾಗೆ ಪಾಲು ಮಾಡುವ ನಿರ್ಧಾರ ಮಾಡಿದರು.
ರಾಯರು ಐದು ಪಾಲು ಮಾಡಿ ತಮ್ಮ ನಾಲ್ಕು ಮಕ್ಕಳಿಗು ಕಾಗದ ಪತ್ರ ಹಸ್ತಾಂತರಿಸಿದರು. ಇನ್ನು ಒಂದು ಪಾಲನ್ನು ತಾವು ಇಟ್ಟುಕೊಂಡು ತಮ್ಮ ಮರಣದ ನಂತರ ತಮ್ಮ ಜವಾದ್ದಾರಿ ಯಾರು ತೆಗೆದುಕೊಳ್ಳುತ್ತಾರೊ ಅವರಿಗೆ ಎಂದು ಹೇಳಿದರು. ಅದು ಅಲ್ಲದೆ ಅವರಿಗೆ ಮೂಲ ಮನೆ ಬಿಟ್ಟು ಬೇರೆ ಕಡೆ ಹೋಗುವ ಇಚ್ಚೆ ಇಲ್ಲವಾಗಿತ್ತು. ಗೋವಿಂದ ತೋಟದ ಇನ್ನೊಂದು ಬದಿಯಲ್ಲಿ ಇದ್ದ ಮನೆಗೆ ಹೋಗುವನಿದ್ದ. ಬೇರೆ ದಾರಿ ಇಲ್ಲದೆ ರಾಯರು ಮತ್ತು ಸುಶೀಲಮ್ಮ ಕಿರಿ ಮಗನ ಮನೆಯಲ್ಲಿ ಇರುವ ಸ್ಥಿತಿ ಬಂತು. ಅದರಲ್ಲು ಶ್ವೇತಾ ಮಾವನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಳು. ಅಲ್ಲದೆ ಅತ್ತೆಯ ಕೆಲಸವು ತಿಳಿದಿತ್ತು. ಸ್ವಲ್ಪ ಮೈಗಳ್ಳತನ ಇಲ್ಲದೆ ಕೆಲಸ ಮಾಡುವ ಅತ್ತೆ ಇವಳಿಗೆ ಬೇಕಿತ್ತು. ಇವೆಲ್ಲಾ ಕಾರಣದಿಂದ ಕಿರಿ ಮಗನ ಜೊತೆ ದಂಪತಿಗಳು ಇದ್ದರು.
ರಾಯರು ತಮ್ಮ ಹದಿನಾರು ವರ್ಷಕ್ಕೆ ಶುರುಮಾಡಿದ ಯಜಮಾನಿಕೆಯಿಂದ ನಿವೃತ್ತಿ ಹೊಂದಿದರು. ಆದರೆ ಸುಶೀಲಮ್ಮನಿಗೆ ನಿವೃತ್ತಿ ಇಲ್ಲದೆ ಇನ್ನು ಕೆಲಸ ಹೆಚ್ಚಾಯಿತು.ಶ್ವೇತಾಳಿಗೆ ಆದಷ್ಟು ಹಣ ಉಳಿಸಿ ಒಡವೆ- ವಸ್ತ್ರ ಮಾಡಿಕೊಳ್ಳುವ ಆಸೆ. ಮನೆ ಕೆಲಸದವಳು ಪೂರಾ ದಿನ ಇಲ್ಲೆ ಇದ್ದರೆ ದಂಡ ಎಂದು ತೋಟದ ಕೆಲಸಕ್ಕೆ ಕಳಿಸುತ್ತಿದ್ದಳು. ಇನ್ನುಳಿದ ಕೆಲಸ ಅತ್ತೆಯ ಬಳಿಯೆ ಮಾಡಿಸುತ್ತಿದ್ದಳು. ಇನ್ನು ರುಚಿ-ರುಚಿಯಾಗಿ ಎನಾದರು ಮಾಡಿದರು ತನ್ನ ಗಂಡ ಮಕ್ಕಳಿಗೆ ಹೊರತು ಪ್ರೀತಿಯಿಂದ ಅತ್ತೆ-ಮಾವನಿಗೆ ಕೊಡುವ ಪದ್ದತಿ ಅವಳಲ್ಲಿ ಇಲ್ಲ. ಕೆಲವೊಮ್ಮೆ ಖಾರವಾಗಿ ಅತ್ತೆ-ಮಾವನಿಗೆ ಏನಾದರು ಹೇಳುತ್ತಿದ್ದಳು.
ಮೊದಲಿನಿಂದಲು ನಡೆಸಿಕೊಂಡು ಬಂದ ಪದ್ದತಿ ಎಲ್ಲಾ ಕೈ ಬಿಟ್ಟಾಯಿತು. ಸುಶೀಲಮ್ಮ ಮತ್ತು ರಾಯರು ಮಾಡುವ ಹಾಗೆ ಆಧರಾತಿತ್ಯ ಮೂಲೆ ಗುಂಪಾಯಿತು. ಪಾಲು ತೆಗೆದುಕೊಂಡ ಸಿಟ್ಟಿಗೆ ಅತ್ತಿಗೆಯರನ್ನು ವರ್ಷಕ್ಕೊಮ್ಮೆ ಕರೆದರೆ ಹೆಚ್ಚು.
ದಿನಕ್ಕು ದಿನಕ್ಕು ಶ್ವೇತಾಳ ನಡುವಳಿಕೆ ವಿಸರೀತ ಆಯಿತು. ರಾಯರು ಮೊದಲಿನ ಶ್ರೀನಿವಾಸ ರಾಯರೆ ಅಲ್ಲವೆನೊ ಮಟ್ಟಿಗೆ ತಗ್ಗಿದರು. ಶ್ರೀದರ ತಾನಾಯಿತು ತನ್ನ ಜಮೀನಿನ ಕೆಲಸ ಆಯಿತು ಎಂದು ಶ್ವೇತಾಳಿಗೆ ಎನು ಹೇಳದೆ ತನ್ನ ಪಾಡಿಗೆ ಇದ್ದ. ಬೇರೆ ಹೋದ ಶ್ರೀದರ ತನ್ನ ಸಂಸಾರದಲ್ಲಿ ಮುಳುಗಿದ. ಇಲ್ಲಿ ಮೂಲೆ ಗುಂಪಾದವರು ರಾಯರು ಮತ್ತು ಸುಶೀಲಮ್ಮ. ಹತ್ತು ಜನಕ್ಕೆ ಅನ್ನ ಹಾಕಿದ ರಾಯರಿಗೆ ಸೊಸೆಯ ಹತ್ತಿರ ಹೇಳಿಸಿಕೊಳ್ಳುವ ಸ್ಥಿತಿ ಬಂತು. ರಾಯರು ಒಂದು ಮಾವಿನ ಹಣ್ಣು ತಿಂದರು ತನ್ನ ಮಕ್ಕಳಿಗಾಗಿ ತಂದಿದ್ದು ಎಂದು ಕೊಟಗುಡುವಳು. ಅವರು ಆಪ್ತರು ರಾಯರನ್ನು ಮಾತಾಡಿಸಲು ಬಂದರೆ ಯಾವ ಆದರಾತಿತ್ಯವು ಇಲ್ಲದೆ ಸಿಡಿಸಿಡಿ ಮಾಡುವಳು. ಸುಶೀಲಮ್ಮ ಒಂದು ಮನೆ ಕೆಲಸದವಳಾಗಿದ್ದಳು ಹೊರತು ಬಂದವರಿಗೆ ಒಂದು ಲೋಟ ಹಾಲು ಕೊಡುವ ಅಧಿಕಾರವು ಇಲ್ಲ.
ಸುಶೀಲಮ್ಮ ಗಂಡನ ಬಳಿ ಯಾವುದನ್ನು ಹೇಳದಿದ್ದರು ರಾಯರಿಗೆ ಹೆಂಡತಿಯ ಸ್ಥಿತಿ ಅರ್ಥ ಆಗಿತ್ತು. ಪೂರಾ ದಿನ ಕೆಲಸ ಮಾಡುವುದನ್ನು, ರಾಶಿ ಬಿದ್ದ ಪಾತ್ರೆಯನ್ನು ಇವಳು ಒಬ್ಬಳೆ ತೊಳೆಯುವುದನ್ನು ನೋಡಿ ಮರುಗಿದ್ದರು. ರಾಯರು ಒಮ್ಮೆ ತಾವು ತಿಂದ ಪ್ಲೇಟ್ ಅನ್ನು ಎತ್ತಿಕೊಂಡು ತೊಳೆಯಲು ಹೋದಾಗ ಹೆಂಡತಿ, “ ನೀವು ಯಾಕೆ ತಟ್ಟೆಯನ್ನು ಎತ್ತುತ್ತಿರಾ, ಅಲ್ಲೆ ಬಿಡಿ ನಾನು ತೊಳೆಯುತ್ತೇನೆ” ಅಂದಾಗ ರಾಯರು ಮರುಕದಲ್ಲಿ ನನ್ನ ಒಂದು ಪ್ಲೇಟ್ ತೊಳೆಯುವುದು ಕಮ್ಮಿ ಆದರೆ ನಿನಗೆ ಅದೆ ನಾನು ಮಾಡುವ ಉಪಕಾರ ಎಂದು ಹೇಳಿದರು. ಸುಶೀಲಮ್ಮನ ಕಣ್ಣಲ್ಲಿ ನೀರು ತಂಬಿತು.