Friday, August 24, 2018

ಲಂಚ್ ಬಾಕ್ಸ್ ಗಾಗಿ ಕಲರ್ ಕಲರ್ ರೈಸ್ ಐಟಮ್ .


                      ಲಂಚ್ ಬಾಕ್ಸ್ ಗಾಗಿ ಕಲರ್ ಕಲರ್ ರೈಸ್ ಐಟಮ್  


  ಎಲ್ಲಾ ಮಹಿಳೆಯರ  ಒಂದು ಸಮಸ್ಯೆಯೆಂದರೆ ನಾಳೆಯ ಲಂಚ್ ಬಾಕ್ಸ್ ಗೆ ಏನ್ ಮಾಡ್ಲಿ ಅಂತ? ಬೆಳಗಿನ  ಅವಸರದಲ್ಲಿ ಫಟಾ- ಫಟ್ ಆಗುವ ಐಟಮ್ ಗಳೆ ಒಳ್ಳೆದು. ಅದು ಅಲ್ಲದೆ ಮಧ್ಯಾನ್ನ “ ತುತ್ತು ಅನ್ನ ತಿಂದರೆ ಹೊಟ್ಟೆಗೆ ತಂಪು ಮತ್ತು ಆರೋಗ್ಯಕ್ಕು ಒಳ್ಳೆದು “ ಅಂತ ಅಜ್ಜಿ ಹೇಳಿದ ನೆನಪಿಗೆ ಬೇಗ-ಬೇಗ ಆಗುವಂತಹ ಕೆಲವು ರೈಸ್ ಐಟಮ್ ಗಳನ್ನು ಕೆಳಗೆ ಲಗುತ್ತಿಸಿದ್ದೆನೆ
                          
ಟೊಮೆಟೊ ಬಾತ್  

ಬೇಕಾಗುವ ಸಾಮಗ್ರಿಃ
ಟೊಮೆಟೊ 2, ಶಾ ಜೀರಿಗೆ ಅರ್ಧ ಚಮಚ, ಸೊಂಪ್ ಅರ್ಧ ಚಮಚ, ಬೆಳ್ಳುಳ್ಳಿ 4 ರಿಂದ 5 ಎಸಳು, ಅರ್ಧ ಇಂಚು ಶುಂಠಿ,  ಸಣ್ಣಗೆ ಹೆಚ್ಚಿದ ಈರುಳ್ಳಿ ಒಂದು ಕಪ್, ಕೊತ್ತುಂಬರಿ ಸೊಪ್ಪು,  ಉಪ್ಪು, ಅಚ್ಚ ಖಾರದ ಪುಡಿ, ಇಂಗು ಸ್ವಲ್ಪ,ಅರ್ಧ ಚಮಚ ಗರಂ ಮಸಾಲಾ,  1 ಕಪ್ ಅಕ್ಕಿ, ತುಪ್ಪ ಒಂದು ಚಮಚ, ನೀರು

ತಯಾರಿಸುವ ವಿಧಾನಃ
ಮೊದಲು ಟೊಮೆಟೊವನ್ನು ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಸೊಂಪು ಹಾಕಿ ರುಬ್ಬಿಕೊಳ್ಳಿ. ಈಗ ಅದೆ ಜಾರಿಗೆ ಬೇಯಿಸಿದ ಟೊಮೆಟೊ, ಖಾರಕ್ಕೆ ತಕ್ಕಷ್ಟು ಅಚ್ಚ ಖಾರದ ಪುಡಿ, ಗರಂ ಮಸಾಲ ಹಾಕಿ ರುಬ್ಬಿ ಕೊಳ್ಳಿ.
ಕುಕ್ಕರಿಗೆ ಸ್ವಲ್ಪ ಎಣ್ಣೆ ಹಾಕಿ ಇದಕ್ಕೆ ಶಾ ಜೀರಿಗೆ ಹಾಕಿ. ಹಾಗೆ ಸ್ವಲ್ಪ ಇಂಗು ಹಾಕಿ. ನಂತರ ಈರುಳ್ಳಿ ಹಾಕಿ ಚನ್ನಾಗಿ ಫ್ರೈ ಮಾಡಿ. ಈಗ ರುಬ್ಬಿದ ಮಸಾಲಾ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವ ವರೆಗೆ ಫ್ರೈ ಮಾಡಿ. ಈಗ ತೊಳೆದ ಅಕ್ಕಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ಎರಡು ಕಪ್ ನೀರು ಹಾಕಿ ಕುಕ್ಕರ್  ಅನ್ನು ಮೂರು ವಿಸಲ್ ಕೂಗಿಸಿ. ತಣ್ಣಗಾದ ಮೇಲೆ ಲಿಡ್ ತೆಗೆದು ಕುತ್ತುಂಬರಿ ಸೊಪ್ಪು ಮತ್ತು ತುಪ್ಪ ಹಾಕಿ   ಒಮ್ಮೆ ಚನ್ನಾಗಿ ಕೈಯಾಡಿಸಿ. 


ಕರಿ ಬೇವಿನ ಅನ್ನ 

ಬೇಕಾಗುವ ಸಾಮಗ್ರಿಃ
1 ಕಪ್ ಅನ್ನ, ಅರ್ಧ ಕಪ್ ಕರಿಬೇವಿನ ಸೊಪ್ಪು, ಅರ್ಧ ಕಪ್ ತೆಂಗಿನ ತುರಿ,  ಸ್ವಲ್ಪ ಇಂಗು, ಸ್ವಲ್ಪ ಅರಿಶಿಣ, ಖಾರಕ್ಕೆ ತಕ್ಕಷ್ಟು ಬ್ಯಾಡಗಿ ಮೆಣಸು,  5 ರಿಂದ 6 ಎಸಳು ಬೆಳ್ಳುಳ್ಳಿ, ಹುಣಸೆ ಹಣ್ಣು,  ಉದ್ದಿನ ಬೇಳೆ ಅರ್ಧ ಚಮಚ, ಅರ್ಧ ಚಮಚ ಸಾಸಿವೆ,   ಎಣ್ಣೆ, ಸಣ್ಣಗೆ ಹೆಚ್ಚಿದ  ಈರುಳ್ಳಿ ಒಂದು, ಸಣ್ಣಗೆ ಹೆಚ್ಚಿದ ಟೊಮೆಟೊ ಒಂದು, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು)

ತಯಾರಿಸುವ ವಿಧಾನಃ      
ಮೊದಲು ಮಿಕ್ಸಿ ಜಾರಿಗೆ ತೆಂಗಿನ ತುರಿ, ಬ್ಯಾಡಗಿ ಮೆಣಸು, ಹುಣಸೆಹಣ್ಣು, ಕರಿಬೇವು, ಅರಿಶಿಣ,ಬೆಳ್ಳುಳ್ಳಿ,ಹಾಕಿ ಡ್ರೈ ಆಗಿ ರುಬ್ಬಿಕೊಳ್ಳಿ. ಈಗ ಒಂದು ಬಾಣೆಲೆಗೆ ಎಣ್ಣೆ ಹಾಕಿ ಇದಕ್ಕೆ ಉದ್ದಿನ ಬೇಳೆ, ಸಾಸಿವೆ, ಹಾಕಿ. ಇದು ಚಟ ಪಟ ಅನ್ನು ವಾಗ ಇಂಗು ಹಾಕಿ. ಈಗ ಈರುಳ್ಳಿ ಹಾಕಿ ಚನ್ನಾಗಿ ಪ್ರೈ ಮಾಡಿ. ಇದು ಪ್ರೈ ಆದ ಮೇಲೆ ಟೊಮೆಟೊ ಹಾಕಿ. ಇದು ಚನ್ನಾಗಿ ಪ್ರೈ ಆಗಲಿ. (ಈಗ ಬೇಕಿದ್ದರೆ ಸಣ್ಣಗೆ ಹೆಚ್ಚಿದ ಬೇರೆ ತರಕಾರಿಗಳನ್ನು ಹಾಕಬಹುದು.) ಈಗ ರುಬ್ಬಿದ ಮಸಾಲೆ ಹಾಕಿ. ಇದನ್ನು ಹಸಿ ವಾಸನೆ ಹೋಗುವ ವರೆಗೆ ಚನ್ನಾಗಿ ಪ್ರೈ ಮಾಡಿ. ಈಗ ಮೊದಲೆ ಮಾಡಿಟ್ಟ ಅನ್ನ ಹಾಕಿ  ಮಿಕ್ಸ್ ಮಾಡಿ. ಈಗ ಸ್ವಲ್ಪ ತುಪ್ಪ ಹಾಕಿ ಒಮ್ಮೆ ಚನ್ನಾಗಿ ಕೈಯಾಡಿಸಿ. 


ಶೇಂಗಾ (ಕಡ್ಲೆ ಬೀಜ) ಅನ್ನಃ

ಬೇಕಾಗುವ ಸಾಮಗ್ರಿಃ
ಅನ್ನ ಒಂದು ಕಪ್, ಸ್ವಲ್ಪ ಹುರಿದು ಸಿಪ್ಪೆ ತೆಗೆದ ಶೇಂಗಾ ಅರ್ಧ ಕಪ್, ಎಣ್ಣೆ, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, 1 ಚಮಚ ಉದ್ದಿನ ಬೇಳೆ,  1ಚಮಚ ಕಡ್ಲೆ ಬೇಳೆ, 1 ಚಮಚ ಜೀರಿಗೆ, 1ಚಮಚ ಸಾಸಿವೆ, 1ಚಮಚ ಎಳ್ಳು, 5ರಿಂದ 6 ಬ್ಯಾಡಗಿ ಮೆಣಸು, ಕಾಲು ಕಪ್ ತೆಂಗಿನ ತುರಿ, 5 ರಿಂದ  6ಎಸಳು ಕರಿಬೇವು, ಚಿಟಿಕೆ ಇಂಗು, 2ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, (ಬೇಕಿದ್ದರೆ ಬೆಳ್ಳುಳ್ಳಿ 4 ರಿಂದ 5 ಎಸಳು ಹಾಕಬಹುದು.)

ತಯಾರಿಸುವ ವಿಧಾನಃ
ಮೊದಲು ಅನ್ನವನ್ನು ಉದುರುದುರಾಗಿ ಮಾಡಿ ಇಡಿ. ನಂತರ ಒಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ನಂತರ ಕಾಲು ಕಪ್ ಶೇಂಗಾ, ಉದ್ದಿನ ಬೇಳೆ, ಕಡ್ಲೆ ಬೇಳೆ,ಜೀರಿಗೆ, ಸಾಸಿವೆ, ಎಳ್ಳು, ಬ್ಯಾಡಗಿ ಮೆಣಸು,( ಬೇಕಿದ್ದರೆ ಬೆಳ್ಳುಳ್ಳಿ) ತೆಂಗಿನ ತುರಿ ಎಲ್ಲಾ ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ. ಈಗ ಇದನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಿ.
ಇನ್ನೊಮ್ಮೆ ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಕಾಲು ಕಪ್(ಉಳಿದ) ಶೇಂಗಾ, ಹೆಚ್ಚಿದ ಈರುಳ್ಳಿ, ಕರಿಬೇವು, ಇಂಗು ಎಲ್ಲಾ ಒಂದಾದ ಮೇಲೆ ಒಂದು ಹಾಕಿ ಹಾಕಿ ಫ್ರೈ ಮಾಡಿ.ಈಗ ಇದಕ್ಕೆ ಮೊದಲೆ ಮಾಡಿಟ್ಟ ಅನ್ನ ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಮೇಲಿಂದ ತುಪ್ಪ ಹಾಕಿ ಚನ್ನಾಗಿ ಕೈಯಾಡಿಸಿ ಸರ್ವ ಮಾಡಿ.


ಕುತ್ತುಂಬರಿ ಸೊಪ್ಪಿನ ಅನ್ನಃ

ಬೇಕಾಗುವ ಸಾಮಗ್ರಿಃ      
ಅನ್ನ 1 ಕಪ್,  ಈರುಳ್ಳಿ 1, ಲವಂಗ 4, ಚಕ್ಕೆ 2, ಹಸಿಮೆಣಸು 2, ಕುತ್ತುಂಬರಿ ಸೊಪ್ಪು 1 ಹಿಡಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್ 1 ಚಮಚ, ಗೊಡಂಬಿ ಅರ್ಧ ಭಾಗ ಮಾಡಿದ್ದು ಅರ್ಧ  ಕಪ್, ಟೊಮೆಟೊ 1, ಹಸಿ ಬಟಾಣಿ ಸ್ವಲ್ಪ, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು) ಎಣ್ಣೆ, ಉಪ್ಪು,ತುಪ್ಪ

ತಯಾರಿಸುವ ವಿಧಾನಃ
ಮೊದಲು ಅನ್ನವನ್ನು ಸ್ವಲ್ಪ ಉದುರುದುರಾಗಿ ಮಾಡಿಟ್ಟುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಹೆಚ್ಚಿದ ಈರುಳ್ಳಿ, ಲವಂಗ,ಚಕ್ಕೆ, ಹಸಿಮೆಣಸು, ಕುತ್ತುಂಬರಿಸೊಪ್ಪು, ಎಲ್ಲಾ ಹಾಕಿ ರುಬ್ಬಿಕೊಳ್ಳಿ.
ಒಂದು ಬಾಣೆಲೆಗೆ ಎಣ್ಣೆ ಹಾಕಿ ಶುಂಟಿ ಬೆಳ್ಳುಳ್ಳಿ ಪೆಸ್ಟ, ಹೆಚ್ಚಿದ ಈರುಳ್ಳಿ ಹಾಕಿ ಪ್ರೈ ಮಾಡಿ. ಈಗ ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಪ್ರೈ ಮಾಡಿ. ಈಗ ಬಟಾಣಿ (ಬೇಯಿಸಿದ್ದು) ಹಾಕಿ.(ಬೇಕಿದ್ದರೆ ಬೇರೆ ತರಕಾರಿಗಳನ್ನು ಹಾಕಬಹುದು.) ಈಗ ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಪ್ರೈ ಮಾಡಿ. ಈಗ ಮೊದಲೆ ಮಾಡಿಟ್ಟ ಅನ್ನ ಮಿಕ್ಸ್ ಮಾಡಿ ಚನ್ನಾಗಿ ಕೈಯಾಡಿಸಿ. ಈಗ ತುಪ್ಪದಲ್ಲಿ ಗೊಡಂಬಿಯನ್ನು ಹೊಂಬಣ್ಣ ಬರುವ ವರೆಗೆ ಪ್ರೈ ಮಾಡಿ ಅನ್ನದ ಮೇಲೆ ಹಾಕಿ.








Saturday, August 18, 2018

ಕಾಲೇಜಿನಲ್ಲಿ ನೋಡಿದ ಮೊದಲ ಹುಡುಗ.


                              ಕಾಲೇಜಿನಲ್ಲಿ ನೋಡಿದ ಮೊದಲ ಹುಡುಗ.

ಹಾಸ್ಟೇಲಿನಿಂದ ಕಾಲೇಜಿಗೆ ಸ್ವಲ್ಪ ಅಳುಕುತ್ತಲೆ ಬರೋ ಸುಮಳಿಗೆ ಏನೋ ಮನಸ್ಸಿನಲ್ಲಿ ಸ್ವಲ್ಪ ದುಗುಡ ಶುರು ಆಗಿರತ್ತೆ. ಅಪ್ಪ ಉರಿನಿಂದ ಬರೋವಾಗ ಹೇಳಿದ್ದ ಮಾತೆ ಅವಳ ಕಿವಿಯಲ್ಲಿ ಗುಂಯ್ ಗುಡುತ್ತಾ ಇತ್ತು. ಸುಮಾಳ ಒತ್ತಾಯದ ಮೇರೆಗೆ ಪುತ್ತೂರಿನಿಂದ ಬೆಂಗಳೂರಿಗೆ ಇಂಜಿನಿಯರ್  ಓದಲು ಕಳಿಸಿದ ಸೀತಾರಾಮನವರಿಗೆ ಮಗಳ ಮೇಲೆ ಅತಿಯಾದ ನಂಬಿಕೆ. ಆ ನಂಬಿಕೆಗೆ ತಕ್ಕವಾಗಿರೋ ಸುಮಾ. ಅವಳ ನಡೆ ನುಡಿ ನೋಡಿದ ಒಂದೇ ನೋಟಕ್ಕೆ ಅವಳು ಹಳ್ಳಿಯಿಂದ ಬಂದವಳು  ಮತ್ತು ಮುಗ್ದೆ ಅಂತ ತಿಳಿಯವಹುದು.
ಕಾಲೇಜ್ ಗೆ ಗಡಬಿಡಿಯಿಂದ ಬಂದು ನೋಟಿಸ್ ಬೋರ್ಡ್ ನೋಡ್ತಾ ಇರೋ ಸುಮಾಳಿಗೆ, ತನ್ನ ಡಿಪಾರ್ಟಮೆನ್ಟ ಗೆ ಹೇಗೆ ಹೋಗ ಬೇಕು ಅನ್ನೋ ಯೋಚನೆಯಲ್ಲಿ ಇರೋವಾಗ ತಕ್ಷಣ ಹಿಂದಿನಿಂದ ಯಾರೋ” ಹಲೋ” ಅಂತ ಹೇಳಿದಂತಾಯಿತು. ತಿರುಗಿ ನೋಡಿದರೆ ಅವಳದೆ ವಯಸ್ಸಿನ ಒಬ್ಬ ತರುಣ. ತುಂಬಾ ಡಿಸೆಂಟ್ ಆಗಿ ಡ್ರೇಸ್ ಮಾಡಿದ್ದ. ಮುಖದಲ್ಲಿದ್ದ ಕನ್ನಡಕ ಅವನ ನೋಟ ನೋಡಿದವರು ಯಾರೆ ಆಗಲಿ ಒಳ್ಳೆ ಅಭಿಪ್ರಾಯ ಬರುವುದರಲ್ಲಿ ಸಂಶಯವಿಲ್ಲ. ಸುಮಾ ಏನು ಅಂತ ಹೇಳುವಷ್ಟರಲ್ಲೆ “ನಾನು ಫಸ್ಟ ಯಿಯರ್ ಬಿ.ಯಿ. ಬನ್ನಿ ಮೇಲ್ಗಡೆ ಕಾರ್ನರ್ ಕ್ಲಾಸ್ ನಲ್ಲಿ ಫಸ್ಟ ಡೇ ವೇಲ್ ಕಮ್ ಫಂಕ್ಶನ್ ಮಾಡ್ತಾ ಇದ್ದಾರೆ. ನಮ್ಮ ಕ್ಲಾಸ್ ನವರೆಲ್ಲಾ ಅಲ್ಲೇ ಇರೋದು. ಬನ್ನಿ ನಾನ್ ಕರ್ಕೊಂಡು ಹೋಗ್ತಿನಿ.” ಅಂತ ತುಂಬಾ ವಿನಯವಾಗಿ ಹೇಳಿದಾಗ ಸುಮಾಳಿಗೆ ಏನು ಮಾಡಬೇಕು ಅಂತ ತೋಚದೆ ಅವನ ಜೊತೆ ಹೆಜ್ಜೆ ಹಾಕಿದಳು. ಏನು ಮಾತಾಡದೆ ತಲೆ ತಗ್ಗಿಸಿ ಹೋಗ್ತಾ ಇರೋ ಸುಮಾಳ ನೋಡಿ, “ನಾನು ಚಿಕ್ಕಮಂಗಳೂರಿನಿಂದ ಬಂದಿರೋದು. ಇಲ್ಲೇ ಬಾಯ್ಸ್ ಹಾಸ್ಟೇಲ್ ನಲ್ಲಿ ಇರೋದು. ಬೆಂಗಳೂರು, ಇಷ್ಟು ದೊಡ್ಡ ಕಾಲೇಜ್ ನನ್ಗೆ ಹೊಸದು. ಅಂದ ಹಾಗೆ ನಿಮ್ಮ ಊರು ಯಾವುದು? ನೀವು ಇರೋದು ಹಾಸ್ಟೇಲ್ ನಲ್ಲಾ?” ಒಂದೇ ಉಸುರಿಗೆ ಇವನು ಆಡಿದ ಮಾತಿಗೆ ತನ್ನಂತೆ ಹಳ್ಳಿಯಿಂದ ಬಂದ ಇವನ ಮೇಲೆ ಒಂದೇ ಬಾರಿ ನಂಬಿಕೆ ಬಂದು..”ಹೌದು ನಾನು ಇರೋದು ಹಾಸ್ಟೆಲ್ ನಲ್ಲೆ. ನಮ್ದು ಪುತ್ತೂರು,ವಿವೇಕಾನಂದ ಪಿಯು ಕಾಲೇಜ್. ನಿನ್ನೆನೇ ಊರಿನಿಂದ ಬಂದಿರೋದು”. ಅಂತ ತುಂಬಾ ವಿನಯವಾಗಿ ಸುಮಾ ಹೇಳಿದಕ್ಕೆ ಇವನು ಸುಮ್ಮನೆ ನಕ್ಕಿದ. ಅಷ್ಟರಲ್ಲೆ ಇಬ್ಬರು ಕ್ಲಾಸ್ ಒಳಗೆ ಬಂದರು. ಅಲ್ಲಿ ಕೆಲವು ಹುಡುಗಿಯರು ಮತ್ತು ಕೆಲವು ಹುಡುಗರು ಇದ್ದರು. ಯಾವ ಫಂಕ್ಶನ್ ಇಲ್ಲದೆ ಇರೋದು ನೋಡಿ ಸಂಶಯದಿಂದ ನೋಡಿದ ಸುಮಾಳಿಗೆ ಒಮ್ಮೆಲೆ “ಹನ್ನೇರಡು ತೋಳ ಹಳ್ಳಕ್ಕೆ ಬಿತ್ತು” ಅಂತ ಸಾಮೂಹಿಕವಾಗಿ ಕೂಗಿದ್ದು ಕೇಳಿ ಏನು ಅಂತಲೆ ಅರ್ಥ ಆಗದೆ ಅಲ್ಲಿ ಇದ್ದ ಹುಡುಗಿಯರನ್ನು ನೋಡಿ ಅವರ ಹತ್ತಿರ ಹೋಗಿ ನಿಂತಳು. ಗುಂಪಿನಲ್ಲಿದ್ದ ಯಾರೋ ಒಬ್ಬ “ಪರವಾಗಿಲ್ಲಮ್ಮಾ…ನೀನ್ ಹೇಳಿದ್ ಹಾಗೆ ಹನ್ನೇರಡು ಹುಡುಗಿರನ್ನಾ ಯಾಮಾರಿಸಿದೆ.” ಅಂತ ಹೇಳೋದಕ್ಕು ಎಲ್ಲಾ ಗೊಳ್ಳೆಂದು ನಗೋದಕ್ಕು ಸರಿಯಾಯಿತು. ಅಲ್ಲಿದ್ದ ಹುಡುಗಿಯರು ಮುಖ ಮುಖ ನೋಡುತ್ತಾ ಸರಸರನೇ ಅಲ್ಲಿಂದ ಬಂದರು.
ಸುಮಾಳಿಗೆ ಅವನು ಮಾಡಿದ ರ್ಯಾಗಿಂಗ್ ಅಂತ ತಿಳಿದು ತನ್ನ ಊರು ಕಾಲೇಜ್ ಎಲ್ಲಾ ಹೇಳಿದಕ್ಕೆ ತುಂಬಾ ಬೇಸರ ಆಯಿತು. ಅವನ ಸರಳ ನಡೆ-ನುಡಿ ನೋಡಿ ಯಾಮಾರಿದೆ ಅಂತ ತಿಳಿದು, ಇನ್ನು ಹುಷಾರಾಗಿ ಇರಬೇಕು ಇದು ತನ್ಗೆ ಒಂದು ದೊಡ್ಡ ಪಾಠ ಅಂತ ಮನಸ್ಸಿನಲ್ಲೆ ಅಂದು ಕೊಂಡಳು.
ಸುಮಾಳಿಗೆ ಅವಳ ಸ್ವಭಾವಕ್ಕೆ ಹೊಂದುವ ಕವನ ಳ ಗೆಳೆತನ ವಾಯಿತು. ಇವಳು ಸುಮಾಳಿದ್ದ ಹಾಸ್ಟೇಲ್ ನಲ್ಲೆ ಇದ್ದು ಕಾಲೇಜಿಗೆ ಹೋಗುವವಳು. ಒಂದೇ ಬ್ರಾಂಚ್ ಆಗಿ ಇಬ್ಬರು ತಾವಾಗಿತು ತಮ್ಮ ಓದಾಯಿತು ಅಂತ ಇದ್ದರು.
ಸುಮಾಳಿಗೆ ರ್ಯಾಗಿಂಗ್ ಮಾಡಿದ ಹುಡುಗ ಯಾವಾಗದರು ತನ್ನ ಗೆಳೆಯರ ಗ್ರುಪ್ ನಲ್ಲಿ ಕಾಣಿಸುತ್ತಿದ್ದ. ಇವಳು ಅವನನ್ನು ಟೈಮ್ ಪಾಸ್ ಮಾಡೋಕೆ ಇಂಜಿನಿಯರ್ ಓದೋಕೆ  ಬಂದವನು ಅಂತ ಭಾವಿಸಿದ್ದಳು. ಅದು ಅಲ್ಲದೆ ಅವನು ಕಾಲೇಜ್ ಯುನಿಯನ್ ಲೀಡರ್ ಗಾಗಿ ಸ್ಪರ್ದ್ದಿಸಿದ್ದ. ಅವನ ನೋಡಿದರೆ ಮೈ ಉರಿಯುತ್ತಿತ್ತು. ಅವನನ್ನು ಕೆ.ಪಿ ಅಂತಲೆ ಅವನ ಪ್ರೆಂಡ್ಸ್ ಕರಿಯುತ್ತಿದ್ದರು. ಇವಳಿಗೆ ಅವನ ಹೆಸರು ತಿಳಿದುಕೊಳ್ಳೊ ಆಸಕ್ತಿ ಇರಲಿಲ್ಲ. ಕೆ.ಪಿ ನೋ ಕಪಿನೋ ಅವನ ಮುಖವನ್ನು ಅವಳು ಸರಿಯಾಗಿ ನೋಡುತ್ತಿರಲಿಲ್ಲ. ಕವನ ಸುಮಾಳ ಹತ್ತಿರ ಅವನ ಬಗ್ಗೆ ಏನಾದರು ಹೇಳೋದಾದ್ರೆ ಕೆ.ಪಿ.ಕ.ಪಿ ಅಂತನೆ ಹೇಳುತ್ತಿದ್ದಳು.
ತಂಮ್ಮ ಓದಿನಲ್ಲೆ ಮುಳುಗಿರೋ ಸುಮಾಳಿಗೆ ಒಂದು ವರ್ಷ ಹೋಗಿದ್ದೆ ತಿಳಿಯಲಿಲ್ಲ. ಅದು ಅಲ್ಲದೆ ಹೊಸ ಊರು. ಕಾಲೇಜ್, ಗೆ ಹೊಂದಿಕೊಂಡಿದ್ದಳು. ಕವನಳ ಬಿಟ್ಟು ಅವಳು ಬೇರೆ ಯಾರಲ್ಲು ಅಷ್ಟಾಗಿ ಬೆರೆಯುತ್ತಿರಲಿಲ್ಲ.ಕಾಲೇಜ್ ನಲ್ಲಿ ಫೈನಲ್ ಯಿಯರ್ ನವರ ಸೆನ್ಡ್ ಅಪ್ ಪಾರ್ಟಿ ಮತ್ತು ಗೇಟ್ ಟು ಗೇದರ್ ಯಾವುದಕ್ಕು ಮುಖ ಹಾಕದೆ ಸ್ಟಡಿ ಹಾಲೀಡೆ ಅಂತ ಊರಿಗೆ ಹೋಗಿ ತನ್ನ ಪಾಡಿಗೆ ತಾನು ಓದಿಕೊಂಡಳು. ಪ್ರತಿ ವರ್ಷದಲ್ಲು ಒಳ್ಳೆ ಅಂಕ ಪಡೆದು ಮನೆಯಲ್ಲಿ ಮತ್ತು ಅವರ ಬಂದು ಬಳಗದವರಿಗೆ ರೋಲ್ ಮಾಡೆಲ್ ಆಗಿದ್ದಳು. ಸೀತಾರಮನವರಿಗೆ ಮಗಳ ಬಗ್ಗೆ ಹೇಳಿಕೊಂಡಷ್ಟು ಕಮ್ಮಿನೆ. ಯಾರೇ ಸಿಗಲಿ ಮಗಳ ವಿಷಯ ಹೇಳದೆ ತಮ್ಮ ಮಾತು ಮುಗಿಸುವ ಹಾಗಿಲ್ಲ.
ಸುಮಾರವರ ಫೈನಲ್ ಯಿಯರ್ ಮುಗಿಯೋ ಹೊತ್ತಿಗೆ ಒಳ್ಳೆ ಒಳ್ಳೆ ಕಂಪನಿಗಳು ಬಂದು ಕ್ಯಾಂಪಸ್ ನಲ್ಲಿ ಕೆಲವು ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ತಮ್ಮ ಕಂಪನಿಯ ಕೆಲಸಕ್ಕೆ ನೇಮಿಸಿಕೊಂಡರು. ಅದರಲ್ಲಿ ಸುಮಾಳಿಗೂ ಒಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಇದು ಸುಮಾಳ ಬಹು ದಿನದ ಕನಸಾಗಿತ್ತು. ತಾನು ಪಟ್ಟ ಶ್ರಮಕ್ಕೆ ಸಿಕ್ಕ ಪ್ರತಿಫಲ ಅಂತ ಭಾವಿಸಿ ಕೆಲಸಕ್ಕೆ ಸೇರಿದಳು. ಇದಕ್ಕೆ ಅವಳ ಮನೆಯಲ್ಲು ಒಪ್ಪಿಗೆ ಸಿಕ್ಕಿತು. ಆದರೆ ಸೀತಾರಾಮನವರಿಗೆ ತನ್ನ ಮಗಳಿಗೆ ಅವಳಿಗಿಂತ ಸ್ವಲ್ಪ ಜಾಸ್ತಿ ಓದಿದ ಗಂಡು ಸಿಗಲಿ ಅನ್ನೋ ಆಸೆ ಇತ್ತು. ಅದರ ಅನ್ವೇಷಣೆಯಲ್ಲು ಇದ್ದರು. ಸುಮಾಳು ತನ್ನ ತಂದೆಯ ಮಾತಿಗೆ ಒಪ್ಪಿದಳು.
ಸುಮಾ ಕಂಪನಿ ಹತ್ತಿರವೇ ಒಂದು ಪಿ. ಜಿ. ಗೊತ್ತು ಮಾಡಿಕೊಂಡಳು. ಕಂಪನಿಯ ಮೊದಲು ಮೂರು ತಿಂಗಳು  ಟ್ರೆನಿಂಗ್  ಮುಗಿಸಿ ಅಲ್ಲೆ ಒಂದು ಪ್ರಾಜಕ್ಟಗೆ ಅವಳನ್ನು ನೇಮಿಸಲಾಯಿತು. ಅಲ್ಲಿ ಅವಳ ಕೆಲಸ ಸುತುತ್ರವಾಗಿ ನಡೆಯುತಿತ್ತು. ಏನಾದರು ಡೌಟ್ಸ್ ಇದ್ದರೆ ಅವಳ ಟೀಮ್ ಲೀಡ್ ಕಿಶೋರ್ ನಲ್ಲಿ ಕೇಳುತ್ತಿದ್ದಳು.  ಅವನು ಸದ್ಯ ಕಂಪನಿಯ ಕೆಲಸದ ನಿಮಿತ್ತ ಲಂಡನ್ ಗೆ ಹೋದ ಕಾರಣ ಇವಳು ಅವನನ್ನು ನೋಡಿರಲಿಲ್ಲ. ಆದರೆ ಎಷ್ಟೋ ಸಲ ಕೆಲಸದ ನಿಮಿತ್ತ ಚಾಟ್ ಮಾಡಿದ್ದಳು ಮತ್ತು ಪೋನ್ ನಲ್ಲಿ ಮಾತಾಡಿದ್ದಳು. ಕಿಶೋರ್ ಪ್ರಾಬ್ಲಮ್ ಬಗೆಹರಿಸುವದನ್ನು ನೋಡಿ ಅವನು ಒಳ್ಳೆ ಟ್ಯಾಲೆಂಟ್ ಇರೋ ಮನುಷ್ಯ ಅವನಿಂದ ಕಲಿಯೋದು ಬಹಳ ಇದೆ ಅಂತ ಭಾವಿಸಿದಳು. ಅಲ್ಲದೆ ಅವನ ಮೇಲೆ ಟೀಮ್ ನವರೆಲ್ಲಾ ಒಳ್ಳೆ ಅಭಿಪ್ರಾಯ ಇಟ್ಟಿದ್ದರು. ಸುಮರು ಒಂದು ತಿಂಗಳ ನಂತರ ಕಿಶೋರ್ ಲಂಡನ್ ನಿಂದ ವಾಪಸ್ ಆಗಿ ಬೆಂಗಳೂರಿನ ಕಂಪನಿಗೆ ಬಂದ.  ಸುಮಾಳಿಗೆ ಕಿಶೋರ್ ನ ಬೇಟಿ ಆಗೋ ಪ್ರಮೇಯ ಆಗಾಗ ಬರುತಿತ್ತು.  ಅದು ಅಲ್ಲದೆ ಇಬ್ಬರದ್ದು ಒಂದೇ ಪ್ರಾಜಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಕಿಶೋರನನ್ನು ನೋಡಿದಾಗ ಇವನ ಎಲ್ಲೋ ನೋಡಿದ ನೆನಪು ಎಂದು ಭಾವಿಸಿದಳು. ಆದರೆ ಇದರ ಬಗ್ಗೆ ಅವಳು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಇತ್ತ ಕಿಶೋರ್ ಗೆ ಅವಳ ನೆನಪು ಚನ್ನಾಗಿಯೇ ಇತ್ತು. ಅವಳ ಬಯೋಡಾಟ ನೋಡಿದಗಲೇ ಇವಳು ಯಾರು ಅಂತ ಊಹಿಸಿದ್ದ.  ಆದರೆ ತಾನಾಗಿಯೇ ಏನು ಕೇಳಲು ಹೋಗಲಿಲ್ಲ. ಅವಳ ನಡೆ- ನುಡಿ ಗೆ ಅವನ ಮನಸ್ಸು ನಾಲ್ಕು ವರುಷದ ಹಿಂದೆ ಸೋತಿತ್ತು. ಈಗ ಪುನಃ ಆ ನೆನಪುಗಳಿಗೆ ಚಿಗುರು ಬಂದಿತ್ತು.
ಸುಮಾ ಕುಳಿತುಕೊಳ್ಳುವ ಪ್ಲೋರ್ ನಲ್ಲಿ  ಅವನು ಕುಳಿತುಕೊಳ್ಳುತ್ತಿದ್ದ. ಕಣ್ಣೆತ್ತಿದರೆ ಅವಳ ಮುಖವೆ ಅವನಿಗೆ ಕಾಣಿಸುತ್ತಿತ್ತು. ಇವನ ಕಣ್ಣು ಅಗಾಗ ಸುಮಾಳನ್ನು ನೋಡೋಕೆ ಬಯಸುತ್ತಿತ್ತು.  ಯಾವಾಗಲು ಕೆಲಸದಲ್ಲಿ ಮುಳುಗಿದ್ದ ಸುಮಾ ಅಷ್ಟಾಗಿ ಇದನ್ನು ಗಮನಿಸುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ ಆಗಿತ್ತು.  ಆದರೆ ಕಿಶೋರ್ ಇವಳ ಪೂರ ಬಯೋಡಾಟ ತಿಳಿದಿದ್ದ. ಅವಳ ಗಂಭಿರ ನಡೆ,ತನ್ನ  ಕೆಲಸದಲ್ಲಿನ  ಶ್ರದ್ದೆ, ಅದು ಅಲ್ಲದೆ ಎಲ್ಲ ಹುಡುಗಿಯರ ತರ ಚಲ್ ಚಲ್ ಅಗಿ ಇರದೆ ಇರೋ ಇವಳಿಗೆ ಕಿಶೋರ್ ಕ್ಲೀನ್ ಬೋಲ್ಡ್ ಆಗಿದ್ದ. ಸುಮಾ ಇವನಲ್ಲಿ ಎಷ್ಟು ಬೇಕೋ ಅಷ್ಟೇ ಮಾತಾಡ್ತಾ ಇದ್ದಳು.
ಒಮ್ಮೆ ಸುಮಾ ಅವಳ ಕಾಲೇಜ್ ಗೆಳತಿ ಕವನಾಳಿಗೆ ಪೋನ್ ಮಾಡಿ ಕಾಫಿ ಶಾಪ್ ನಲ್ಲಿ ಮೀಟ್ ಮಾಡೋಣ ತುಂಬಾ ದಿನ ಆಯ್ತು ಅಂತ ಈ ವೀಕ್ ಎಂಡ್ ಪ್ಲಾನ್ ಮಾಡಿದ್ದರು. ಹಾಗೆ ಇಬ್ಬರು ಗೆಳತಿಯರು ಸಿಕ್ಕಿ ಹರಟೆ ಶುರು ಮಾಡಿದರು. ಹೀಗೆ ಮಾತಾಡ್ತಾ ಕವನ ಕೇಳಿದ್ದಳು….
ಮತ್ತೇನ್  ಸುಮಿ ಹೇಗಿದೆ ಆಫೀಸ್  ಕೆಲಸ ಹೇಗ್ ನಡಿತಾ ಇದೆ ಏನ್ ಸಮಾಚಾರ ಕಣೇ…
ಸುಮಾ ಉದಾಸೀನವಾಗಿ,
ಏನಿಲ್ಲ ಕವನ ನನ್ಗೆ ಇಲ್ಲಿ ಯಾರು ಅಷ್ಟಾಗಿ ಪ್ರೇಂಡ್ಸ್ ಆಗಿಲ್ಲ. ನಾನು ನನ್ನ ಲ್ಯಾಪ್ಟಾಪ್ ನಲ್ಲಿ ಮುಳುಗಿರ್ತ್ತೀನಿ. ನಿಮ್ಗೇನು ನಮ್ಮ ಕ್ಲಾಸ್ ನವರೆಲ್ಲಾ ಅಲ್ಲೇ ಸೇರ್ಕೋಂಡಿದಿರಾ? ನಾನು ಇಲ್ಲಿ ಒಂಟಿ ಪಿಚಾಶಿ ಆಗಿದ್ದೀನಿ. ಸಕತ್ ಆಗಿ ಬೋರ್ ಆಗ್ತಾ ಇತ್ತು. ಅದಿಕ್ಕೆ ಇವತ್ತು ನಿನ್ನ ಮೀಟ್ ಮಾಡಿ ಹರಟೆ ಹೋಡಿಯೋಣ ಅಂತ ಕೇಳಿದ್ದು.
  ಕವನ ನಗ್ತಾ…
ಯಾಕೆ ಹಾಗ್ ಹೇಳ್ತೀಯಾ? ನಮ್ ಕಾಲೇಜ್ ಆ ಕೆ.ಪಿ. ಕ.ಪಿ ಇಲ್ವೇನೆ? ಅವ್ನಾ ಪ್ರೇಂಡ್ ಮಾಡ್ಕೊ. ಯಾಕ್ ರ್ಯಾಗಿಂಗ್ ಮಾಡ್ತಾನೆ ಅನ್ನೋ ಭಯನಾ?
 ಸುಮಾಳಿಗೆ ಇವಳ ಮಾತು ಅರ್ಥ ಆಗದೆ..
ಏನ್ ಹೇಳ್ತಾ ಇದೀಯಾ ಆ ಲೋಫರ್ ಯಾವಾಗ್ಲು ಕಾಲಿಡರ್ ನಲ್ಲಿ ತಿರುಗುತ್ತಾ ಇರೋನು  ನಮ್ ಕಂಪನಿಯಲ್ಲಿ ಇರೋದಾ? ಎಷ್ಟು ಬ್ಯಾಕ್ ಲಾಕ್ ಇದೀಯೋ. ಅವ್ನು ಬಿ.ಯಿ. ಕಂಪ್ಲಿಟ್ ಮಾಡಿದಾನೋ ಇಲ್ವೋ? ಅನ್ನೋದೆ ನನ್ಗೆ ಡೌಟ್?.
 ಕವನ ಜೋರಾಗಿ ನಗ್ತಾ..
ಹಲೋ ಮೇಡಮ್  ನೀವ್ ಯಾವ್ ಲೋಕದಲ್ಲಿ ಇದೀರಾ? ಅವ್ನು ನಮ್ಮ್ ಕಾಲೇಜ್ ನ ಒನ್ ಒಫ ದಿ  ಟಾಪ್ಪರ್ ಗೊತ್ತಾ? ಅವನು ಬಿ. ಯಿ. ಮುಗಿಸಿ ಎಮ್. ಎಸ್. ಮಾಡಿ ಈಗ ಇಲ್ಲಿ ಕೆಲಸ ಮಾಡ್ತಾ ಇರೋದು?
ಸುಮಾಳಿಗೆ ಎನು ಹೇಳೋಕು ತೋಚದೆ ಶಾಕ್ ನಲ್ಲಿಯೇ…
ನಾನೇನೋ ಅವ್ನು ಟೈಮ್ ಪಾಸ್ ಗೆ ಕಾಲೇಜ್ ಗೆ ಬರೋವ್ನು ಅಂತ ಅಂದ್ಕೊಂಡಿದ್ದೆ. ಈಗ್ ನೋಡಿದ್ರೆ  ಕಥೆನೆ ಬೇರೆ ಇದೀಯಲ್ಲೆ.  ಹೌದು… ಅಂದ್ ಹಾಗೆ ಆ ಕೆ.ಪಿ. ಅನ್ನೋರು ನಮ್ ಬ್ರಾಂಚ್ ನಲ್ಲಿ ಯಾರು ಇಲ್ಲ. ಅವನು ಬೇರೆ ಬ್ರಾಂಚ್ ನಲ್ಲಿ ಇದ್ದಾನೋ ಏನೋ?
ಕವನ..
ಇಲ್ಲಾ ಕಣೇ ಅವನು ನೀನು ಕೆಲಸ ಮಾಡೋ ಕಡೆನೆ ಇರೋದು. ನಿನ್ನ ಟೀಮ್ ಲೀಡ್ ಯಾರು ಅಂತ ಅಂದ್ಕೋಂಡಿದ್ದೀಯ?
ಸುಮ ಆಶ್ಚರ್ಯದಿಂದ..
ವಾಟ್..ಆ ಕೆ.ಪಿ. ಕಿಶೋರಾ………
ಕವನ ನಗ್ತಾ….
ಹೌದು..ಆ ಕಿಶೋರ್ ರೆ ಕೆ.ಪಿ. ನಿನ್ಗೆ ಅವನ ಹೆಸರು ಗೊತ್ತೆ ಇರಲಿಲ್ಲ ಅಲ್ವ? ಅದು ಅಲ್ದೆ ನೀನ್ಗೆ ರ್ಯಾಗಿಂಗ್ ಮಾಡಿರೋ ಕೋಪಕ್ಕೆ ಅವನ ಮುಖನು ನೋಡ್ತಾ ಇರಲ್ಲಿಲ್ಲ. ಅವರ ಗ್ರುಫ್ ಬಂದ್ರೆ ಸಾಕು ಮುಖ ಗಂಟಿಕ್ಕಿ ಆ ಕಡೆ ನೋಡ್ದೆ ಹೋಗ್ತಾ ಇದ್ದೆ. ಅದಿಕ್ಕೆ ಅವನ ಗುರುತು ಹಿಡಿಯೋಕೆ ಕಷ್ಟ ಆಗಿರ್ಬೇಕು.
ಕವನಳ ಮಾತಿಗೆ ಶಾಕ್ ಆಗಿ ಸುಮಾ..
ಹಾಗಿದ್ದರೆ ಕಿಶೋರ್ ಗೆ ನಾನು ಅವರ ಕಾಲೇಜ್ ಜುನಿಯರ್ ಅಂತ ತಿಳಿದಿಲ್ಲ ಅನ್ಸತ್ತೆ.
ಇವಳ ಮಾತಿಗೆ ಕವನ್ ಪುನಃ ನಗ್ತಾ..
ಅಯ್ಯೋ…ನೀನು ಬಾವಿಯಲ್ಲಿ ಇರೋ ಕಪ್ಪೆ ತರ. ನಿನ್ಗೆ ನಿನ್ನ ಜಗತ್ತು ಬಿಟ್ಟರೆ ಬೇರೆ ಪ್ರಪಂಚನೆ ಗೊತ್ತಿಲ್ಲ. ಮೊನ್ನೆ ಕಿಶೋರ್ ನೆ ನಮ್ ಬ್ಯಾಚ್ ವಿನೋದ್ ನ ಹತ್ತಿರ ಹೇಳಿದ್ನಂತೆ. ನಿಮ್ಮ ಕ್ಲಾಸ್ ಸುಮಾ ನನ್ನ ಟೀಮ್ ನಲ್ಲಿ ಇದ್ದಾಳೆ ಅಂತ. ವಿನೋದ್ ನೆ ಮೊನ್ನೆ ಕ್ಯಾಪಿಟೇರಿಯಾದಲ್ಲಿ ಏನೋ ಮಾತ್ ಬಂದಾಗ ಹೇಳಿದ್ದು. ನನ್ಗು ಆಗ್ಲೆ ಗೊತ್ತಾಗಿದ್ದು. ಅವ್ರು ನಾವ್ ತಿಳ್ಕೊಂಡ್ ಹಾಗೆ ಇರಲ್ಲ. ನಮ್ಮ ಜಾತಕನೆ ಜಾಲಾಡ್ ಇರ್ತಾರೆ.
ಸುಮಾ ಕವನಳ ಮಾತಿಗೆ ತನ್ನಲ್ಲೆ ಏನೇನೋ ಯೋಚನೆ ಮಾಡ್ತಾ ಇರ್ತಾಳೆ. ಆದರು ಯಾವುದನ್ನು ತೋರಿಸಿಕೊಳ್ಳದೆ ಹೀಗೆ ಸ್ವಲ್ಪ ಟೈಮ್ ಗೆಳತಿಯರು ಹರಟೆ ಹೊಡೆದು ತಮ್ಮ ತಮ್ಮ ಪಿ.ಜಿ. ಗೆ ಹೋಗುತ್ತಾರೆ.
ಸುಮಾ ಮೊದಲು ಕಿಶೋರ್ ನನ್ನು ನೋಡಿದಾಗ ಎಲ್ಲೊ ನೋಡಿದ ನೆನಪು ಎಂದು ಅಂದುಕೊಂಡರು ಅವನು ಆ ಕೆ.ಪಿ. ಅಂತ ಅವಳಿಗೆ ಗೊತ್ತಾಗಲಿಲ್ಲ. ಅವನಲ್ಲಿ ಇದ್ದ ಚಸ್ಮಾ ಹೋಗಿ ಕುರುಚಲು ಗಡ್ಡ ಬಂದಿರುವುದಕ್ಕೊ..ಅಥವಾ ಅವನನ್ನು ಕಾಲೇಜ್ ನಲ್ಲಿ ಅಷ್ಟಾಗಿ ಗಮನಿಸಿದ್ದ ಕಾರಣವೋ. ಆದರೆ ಸುಮಾಳಿಗೆ ಕಿಶೋರ್ ಬುದ್ದಿವಂತ ಎಂದು ಒಳ್ಳೆ ಅಭಿಪ್ರಾಯವಿದ್ದರು ಅವನು  ಕೆ.ಪಿ ಅಂತ ತಿಳಿದ ತಕ್ಷಣ ಅವನು ಮೊದಲನೇ ದಿನ ಮಾಡಿದ ರ್ಯಾಗಿಂಗ್ ಮತ್ತು ಕಾಲಿಡರ್ ನಲ್ಲಿ ಅವನ ಪ್ರೇಂಡ್ಸ್ ಜೊತೆ ಮಾಡುವ ಕೀಟಲೆಗಳೆ ಅವಳ ಕಣ್ಣು ಮುಂದೆ ಬಂತು. ಕೆ.ಪಿ ನೆ ಕಿಶೋರ್ ಅಂತ ನಂಬಲು ಅಸಾದ್ಯಾವಾಯಿತು. ಅದು ಅಲ್ಲದೆ ತನ್ನ ಪರಿಚಯವಿದ್ದು ನನ್ನಲ್ಲಿ ಹೇಳ್ದೆ ಇರೋದು ಇನ್ನು ವಿಚಿತ್ರ ಅನಿಸಿತು.
ಮರುದಿನ ಎಂದಿನಂತೆ ಆಫೀಸ್ ಗೆ ಹೋದಳು ಸುಮಾ. ಎಂದಿನಂತೆ  ತನ್ನ ಪಾಡಿಗೆ ತಾನು  ಕೆಲಸ ಶುರು ಮಾಡಿದಳು. ಆದರು ಮೊದಲಿನ ಹಾಗೆ ಅವಳ ಮನಸ್ಸು ಇರಲಿಲ್ಲ. ಅವನನ್ನು ಸ್ವಲ್ಪ ಗಮನಿಸಲು ಶುರು ಮಾಡಿದಳು. ಇತ್ತ ಕಿಶೋರ್ ಅವಳನ್ನು ಮೊದಲಿನ ಹಾಗೆ ಕದ್ದು ಕದ್ದು ನೋಡಿ ಖುಷಿ ಪಡುತ್ತಿದ್ದ. ಇದನ್ನು ಸ್ವಲ್ಪ ಮಟ್ಟಿಗೆ ಗಮನಿಸಿದ ಸುಮಾಳಿಗೆ ಏನೋ ಇರಿಸು ಮುರಿಸು. ತನಗೆ ಅವನ ದ್ರಷ್ಟಿ ಎದುರಿಸಲು ಸಾದ್ಯವಿಲ್ಲವೋ ಅನ್ನೋ ತರ ಅನಿಸಿತು. ಇಷ್ಟು ದಿನ ಅನಿಸಿರದೆ ಇರೋದು ಇವತ್ತು ಯಾಕೆ ಹೀಗೆ ಅಂತ ತನ್ನಲ್ಲೆ ಪ್ರಶ್ನೇ ಮಾಡಿದಳು. ಅವನ ಮುಗುಳುನಗು ಅವಳಿಗೆ ತೀಕ್ಣ ಬಾಣವಾಯಿತು. ಅವನ ನೋಟ ಎದುರಿಸಲಾದಳು. ಅವನು ಮುಂದೆ ಬಂದರೆ ಅವಳು ಮಾಡ್ತಾ ಇರೋ ಕೊಡಿಂಗ್ ಹೆಚ್ಚು ಕಮ್ಮಿ ಆಗ್ತಾ ಇತ್ತು. ಯಾಕೋ ತನ್ನ ಮನಸ್ಸು ಇವತ್ತು ತನ್ನ ಹತೋಟಿಯಲ್ಲಿ ಇಲ್ಲ ಅಂತ ಅರ್ಧ ದಿನ ಕ್ಕೆ ತನ್ನ ಪಿ.ಜಿ. ಗೆ ಹೋದಳು. ರಜೆ ತಗೋತಾ ಇರೋದನ್ನು ಚುಟುಕಾಗೆ ಕಿಶೋರ್ ಗೆ ಮೇಲ್ ಮಾಡಿದ್ದಳು. ಸುಮಾಳಿಗೆ ಅವನ ಮುಂದೆ ಬರುವುದೆ ಹಿಂಸೆ ಅನಿಸುತ್ತಿತ್ತು. ಮರುದಿನ ವರ್ಕ ಫ್ರಾಂಮ್ ಹೋಮ್ ಅಂತ ಪಿ.ಜಿ. ನಲ್ಲೆ ಇದ್ದು ಕೆಲಸ ಮಾಡಿದಳು. ಇದನ್ನು ಕಿಶೋರ್ ಗೆ ಮೇಲ್ ಮಾಡಿ ಹೇಳಿದ್ದಳು.
ಇತ್ತ ಕಿಶೋರ್ ಸುಮಾ ಆಫೀಸ್ ಗೆ  ಬರದೆ ಇರೋದನ್ನು ನೋಡಿ ನೀರಿನಿಂದ ತೆಗೆದ ಮೀನಿನಂತೆ ಆದ. ಅವನಿಗೆ ಅವಳ ಮುಖ ನೋಡದೆ ಇದ್ದರೆ ಏನೋ ಕಳಕೊಂಡವನಂತೆ ಈ ನಡುವೆ ಆಗ್ತಾ ಇತ್ತು. ಯಾವಾಗಲು ವರ್ಕ ಫ್ರಾಂಮ್ ಹೋಮ್ ಮಾಡದೆ ಇರೋಳು ಇವಾಗ ಇವಳಿಗೆ ಏನಾಯಿತೋ ಅನ್ನೊ ಯೋಚನೆಯಲ್ಲಿ ಮುಳುಗಿದ. ಅವಳು ಆಫೀಸ್ ನಲ್ಲಿ ಇಲ್ಲದಿರುವುದು ಸಹಿಸಿಕೊಳ್ಳಲಾಗದೆ ಎನೋ ಡಿಸ್ಕಶನ್ ನೆಪ ವೊಡ್ಡಿ ನಾಳೆಯಿಂದ ಟೀಮ್ ನವರೆಲ್ಲಾ ಕಡ್ಡಾಯವಾಗಿ ಆಫೀಸ್ ಗೆ ಬರುವುದಾಗಿ ಮೇಲ್ ಮಾಡಿದ. ಈ ಮೇಲ್ ನೋಡಿ ಸುಮಾಳಿಗೆ ಮೈ ಮೇಲೆ ಬಿಸಿ ನೀರು ಸುರಿದ ಹಾಗೆ ಆಯಿತು.  ಬೇಕಂತನೆ ಮಾಡಿದ್ದು ಅಂತ ಅವಳಿಗೆ ಅನಿಸಿತು.
ಮರುದಿನ ಆಫೀಸ್ ಗೆ ಹೋದಳು. ಕಿಶೋರ್ ಸುಮಾಳನ್ನು ಲಿಫ್ಟ್ ನಲ್ಲಿ ಆಕಸ್ಮಾತ್ ಆಗಿ ಬೇಟಿ ಆದರು. ಕಿಶೋರ್ ಗೆ ಸುಮಾಳ ಮುಖ ನೋಡಿ ತುಂಬಾ ಖುಶಿ ಆಗಿ..”ಯಾಕ್ ಸುಮಾ ನೀವು ನಿನ್ನೆ ಆಫೀಸ್ ಗೆ ಬಂದೆ ಇಲ್ಲ. ಏನಾಯ್ತು?” ಅಂತ ಹೇಳಿದಕ್ಕೆ..ಸುಮಾ ಗಂಭೀರವಾಗಿ “ ಏನಿಲ್ಲ ಸುಮ್ನೇ ವರ್ಕ್ ಪ್ರಾಂಮ್ ಹೋಮ್ ತಗೊಂಡೆ” ಅಂತ ಕೇಳಿದಕ್ಕೆ ಉತ್ತರ ಕೊಟ್ಟು ಲಿಫ್ಟನಿಂದ ತನ್ನ ಪಾಡಿಗೆ ಹೊರಟು ಹೋದಳು. ಯಾವ ಡಿಸ್ಕಶನ್ ಏನು ಇಲ್ಲದೆ ಇದ್ದರು ಆಫೀಸ್ ಗೆ ಕರೆಸಿದ್ದು ಅವಳ ಸಂಶಯಕ್ಕೆ ಎಡೆಯಾಯಿತು. ಅದು ಅಲ್ಲದೆ ಕಿಶೋರ್ ನ ಕದ್ದು ನೋಟ ಈ ನಡುವೆ ಅವಳು ಭಾವಿಸಿದ್ದಳು. ಆದಷ್ಟು ಅನನಿಂದ ದೂರನೆ ಉಳಿತಿದ್ದಳು. ತೀರ ಅವಶ್ಯಕಥೆ ಇದ್ದರೆ ಮಾತು ಇಲ್ಲದಿದ್ದರೆ ಆದಷ್ಟು ಮೇಲ್ ಅಥವಾ ಮೇಸೆಜ್ ನಲ್ಲೆ ಮುಗಿಸುತ್ತಿದ್ದಳು.
ಇಷ್ಟರಲ್ಲೆ ಸುಮಾಳ ಅಪ್ಪ ಸುಮಾಳಿಗೆ ಪೋನ್ ಮಾಡಿ ಈ ವೀಕ್ ಎಂಡ್ ಒಂದ್ ಎರಡು ದಿನ ಊರಿಗೆ ಬರಲು ಹೇಳಿದ್ದರು. ಅವಳಿಗಾಗಿ ಒಂದು ಒಳ್ಳೆಯ ಸಂಭಂದ ನೋಡಿದ್ದರು. ಅವಳ ಜಾತಕ ಮತ್ತು ಹುಡುಗನ ಜಾತಕ ಚನ್ನಾಗಿ ಹೊಂದುವುದು. ಅದು ಅಲ್ಲದೆ ಅವರ ಆಸೆಯ ಪ್ರಕಾರ ಹುಡುಗ ಸುಮಾಳಿಗಿಂತ ಹೆಚ್ಚಿಗೆ ಓದಿರುವನು. ಒಳ್ಳೆಯ ಮನೆತನ ಮತ್ತು ವಿದ್ಯಾವಂತ ಹುಡುಗ ಎಂದು ಪೋನಿನಲ್ಲೆ ಸೀತಾರಾಮನವರು ಹೇಳಿದ್ದೆ ಹೇಳಿದ್ದು. ಮದುವೆ ವಿಚಾರವನ್ನು ಅಪ್ಪನಿಗೆ ವಹಿಸಿದ್ದ ಸುಮಾ ಊರಿಗೆ ಬರಲು ಒಪ್ಪಿದಳು. ಎಲ್ಲಾ ಕೂಡಿ ಬಂದರೆ ಈ ಶ್ರಾವಣದಲ್ಲೆ ಮದುವೆ ಮಾಡುವ ಆಸೆಯನ್ನು ಸಿತಾರಾಮನವರು ಸುಮಾಳಿಗೆ ಹೇಳಿದ್ದರು. ಸುಮಾಳು ಅಪ್ಪನ ಮಾತನ್ನು ತೆಗೆದು ಹಾಕಲಿಲ್ಲ. ತನ್ನ ಆಸೆಯ ಪ್ರಕಾರ ನೌಕರಿ ಸಿಕ್ಕಿ ತನ್ನ ಕಾಲ ಮೇಲೆ ನಿತ್ತ ಸುಮಾಳಿಗೆ ಅಪ್ಪನ ಆಸೆಗೆ ನೀರೆರಚಲು ಮನಸ್ಸಿಲ್ಲವಾಗಿತ್ತು.
ಸುಮಾಳಿಗೆ ನಾಲ್ಕು ದಿನ ಊರಿಲ್ಲಿ ಇದ್ದು ಬರೋ ಆಸೆ ಆಗಿ ನಾಲ್ಕು ದಿನ ರಜೆ ತಗೋಳೋ ಪ್ಲಾನ್ ಮಾಡಿ ಕಿಶೋರ್ ನ ಹತ್ತಿರ ಮಾತಾಡೊ ಪ್ರಸಂಗ ಬಂತು. ಸ್ವಲ್ಪ ಕಿರಿಕಿರಿ ಆದರು “ನಾಲ್ಕು ದಿನ ಊರಿಗೆ ಹೋಗ್ತಾ ಇದ್ದೀನಿ, ರಜೆ ಬೇಕು ಅಂತ ನಿಮಗೆ ಮೇಲ್ ಮಾಡಿದೀನಿ” ಅಂತ ಕಿಶೋರ್ ನ ಬಳಿ ಹೇಳಿದಳು. ಕಿಶೋರ್ ಏನು ಮರು ಪ್ರಶ್ನೇ ಹಾಕದೆ ಸರಿ “ಹ್ಯಾಪಿ ಹಾಲಿಡೇ” ಅಂತ ಹೇಳಿ ಮುಗುಳ್ನಕ್ಕ.ಸುಮಾ ಏನು ಕಿರಿಕ್ ಮಾಡದೆ ರಜೆ ಸಿಕ್ಕಿತಲ್ಲ ಅಂತ ಖುಶಿಯಿಂದ ಊರಿಗೆ ಹೊರಟಳು.
ತುಂಬಾ ದಿನದ ಮೇಲೆ ಊರಿಗೆ ಬಂದ ಸುಮಾಳಿಗೆ ಮನೆಯಲ್ಲಿ ಒಳ್ಳೆ ಸ್ವಾಗತವೇ ದೊರಕಿತು. ಪಿ.ಜಿ.ಯಲ್ಲಿ ಊಟ ಮಾಡಿ ಕೆಟ್ಟ ನಾಲಿಗೆಗೆ ಅಮ್ಮನ ಊಟ ಬ್ರಷ್ಟಾನ್ನವೇ ಆಯಿತು. ಇವುಗಳ ಮದ್ಯ ಸಿತಾರಮನವರು ಮಗಳಿಗೆ ನಾಳೆ ಗಂಡು ನೋಡಲು ಬರುವುದಾಗಿ ವಿಷಯ ಹೇಳಿದರು. ಹುಡುಗ ಸುಬ್ರಮಣ್ಯನೆಂದು, ಫಾರೆನ್ ನಲ್ಲಿ ಎಮ್. ಎಸ್ ಮಾಡಿ ಈಗ ಬೆಂಗಳೂರಿನಲ್ಲಿ ಇರೋ ವಿಷಯ ಹೇಳಿದರು. ಅದು ಅಲ್ಲದೆ ಇದು ನಮ್ಮ ಮಂಗಳತ್ತೆ ಕಡೆ ಪರಿಚಯದವರು ತುಂಬಾ ಒಳ್ಳೆ ಜನ ನಿನಗೆ ಹುಡುಗ ಇಷ್ಟ ಆದ್ರೆ ಸಂಭಂದ ಮುಂದುವರೆಸ ಬಹುದು ಅಂತ  ಅಪ್ಪ ಹೇಳಿದ್ದಕ್ಕೆ ಸುಮಾ ಅಪ್ಪನ ಮಾತಿಗೆ ಸರಿ ಅಂತ ಹೇಳಿದಳು. ಸುಮಾಳ ಅಪ್ಪ-ಅಮ್ಮನಿಗೆ ಈ ಸಂಭಂದ ಮನಸ್ಸಿಗೆ ಬಂದಿದ್ದು ಅರಿತ ಸುಮಾ ಇನ್ನು ಹುಡುಗ ಹೇಗೆ ಏನೋ ತನ್ನ ಸ್ವಭಾವಕ್ಕೆ ಸರಿ ಬರೊದಾದರೆ ನಾನು ಒಪ್ಪಬಹುದು, ಎಂದು ಮನಸ್ಸಿನಲ್ಲಿ ಅಂದುಕೊಂಡಳು.
ಮರುದಿನ ಗಂಡು  ನೋಡಲು ಬರೋ ಕಾರಣ ಸುಮಾ ಚನ್ನಾಗಿರೋ ಸೀರೆ ಉಟ್ಟು ತಯಾರಾದಳು. ಏನು ಆಡಂಬರ ಇಲ್ಲದ ಸುಮಾ ಅವಳ ಸ್ವಭಾವದಿಂದ ಸ್ವಲ್ಪ ಜಾಸ್ತಿನೆ ಚನ್ನಾಗಿ ಕಾಣುತ್ತಿದ್ದಳು. ಅವಳ ಮುಗ್ದ ಮುಖಕ್ಕೆ ಮೇಕಪ್ ಇಲ್ಲದೆ ಸರಳ ಸುಂದರಿಯಾಗಿ ಕಂಗೊಳಿಸಿದಳು. ಅಮ್ಮ ಅಡುಗೆ ಮನೆಯಲ್ಲಿ ಕೆಲಸದಲ್ಲಿ ಮುಳುಗಿದ್ದರೆ, ಅಪ್ಪ ಮತ್ತು ತಂಮ್ಮ ಮನೆಯಲ್ಲಿ ಜಮಖಾನ ಹಾಸಿ ಮನೆಯ ಜಗುಲಿಯನ್ನು ಓರಣ ಮಾಡುವ ತಯಾರಿಯಲ್ಲಿ ಇದ್ದರು.
ಗಂಡಿನವರು ಹೇಳಿದ ಸಮಯಕ್ಕೆ ಸರಿಯಾಗಿ ಬಂದರು. ಕಾರ್ ಹಾರನ್ ಆಗ್ತಾ ಇದ್ದಂತೆ ಅಪ್ಪ, ತಂಮ್ಮ ಜೋಯಿಸರು ಮನೆಯ ಮುಂಭಾಗಕ್ಕೆ ಬಂದು ಮನೆಯ ಒಳಗೆ ಕರೆ ತಂದರು. ಸುಮಾ ಅಲ್ಲೆ ಓಳಗೆ ಇದ್ದು ಅಲ್ಲಿಂದಲೆ ಕುತೂಹಲಕ್ಕೆ ಕಿಡಕಿಯಲ್ಲಿ ಇಣುಕಿ ನೋಡಿದರೆ ಅವಳಿಗೆ ಅವನ ಅಪ್ಪ-ಅಮ್ಮ ಕಂಡರೆ ಹೊರತು ಅವಳಿಗೆ ಬೇಕಾದವರು ಕಾಣಲಿಲ್ಲ. ಮನೆಯ ಓಳಗೆ ಬಂದ ನೆಂಟರಲ್ಲಿ ಕುಶೋಲೋಪಕಾರಿ ಮಾತಾಡುವಾಗ ಸುಮಾ ಅವಳ ಅಮ್ಮನ ಜೊತೆ ಪಾನಕ ಕೊಡಲು ಬಂದಳು. ಸೀತಾರಾಮನವರು ಮಗಳ ಪರಿಚಯ ಮಾಡುತ್ತಾ ನೋಡಮ್ಮ ಇವರೆ ಸುಬ್ರಮಣ್ಯ ಅಂತ ಪರಿಚಯಿಸುವಾಗ ಕಣ್ಣೆತ್ತಿ ನೋಡಿದ ಸುಮಾ ದಂಗು ಬಡಿದು ನಿಂತಳು. ಕೈನಲ್ಲಿದ್ದ ಪಾನಕ ನಡುಗಲು ಶುರುವಾಗಿ ಏನು ಎತ್ತ ತಿಳಿದೆ ಸಿಡಿಲು ಬಡಿದು ನಿಂತಳು. ಆದರೆ ಬಂದ ಹುಡುಗ ಅವಳ ನೋಡಿ ಮೊದಲೆ ಗೊತ್ತಿರುವ ತರ ಮುಗುಳ್ನಗುತ್ತಿದ್ದ . ಅಷ್ಟರಲ್ಲೆ ಅಲ್ಲೆ ಇದ್ದ ಹುಡುಗನ ತಾಯಿ..”ನೀವು ಸುಬ್ರಮಣ್ಯ ಅಂದ್ರೆ ನಮ್ಗೆ ಗೊಂದಲ ಆಗತ್ತೆ. ಇವನ ಹೆಸರು ಜಾತಕದಲ್ಲಿ ಅಷ್ಟೇ ಸುಬ್ರಮಣ್ಯ ಅಂತ ಎಲ್ಲ ಕರಿಯೋದು ಕಿಶೋರ್ ಅಂತಲೆ. ಅವನ ಪ್ರೇಂಡ್ ಸರ್ಕಲ್ ನಲ್ಲಿ ಕೆ.ಪಿ. ಅಂತಾನೆ..ಅವರಿಗೆ ಕಿಶೋರ್ ಅಂದ್ರು ತಿಳಿಯಲ್ಲ” ಅಂತ ಅವರ ಅಮ್ಮನ ಮಾತಿಗೆ ಎಲ್ಲರು ನಕ್ಕರು. ಸುಮಾ ಮಾತ್ರ ದಂಗು ಬಡಿದು ಏನಾಗ್ತಾ ಇದೆ ಅಂತ ಊಹಿಸಲು ಆಗದೆ ನಿಂತಳು. ಎಲ್ಲರಿಗೂ ಪಾನಕ ಕೊಡುವಾಗ ಕಿಶೋರ್ ಮಾತ್ರ “ಹಾಯ್” ಎಂದು ಸಣ್ಣದಾಗಿ ಹೇಳಿ ಮುಗುಳ್ನಗುತ್ತಾ ಪಾನಕ ತಗೊಂಡ. ಅಷ್ಟರಲ್ಲೆ ಜೋಯಿಸರು “ನೋಡಿ ಹುಡುಗನ ಜಾತಕ ಮತ್ತು ಹೂಡುಗಿಯ ಜಾತಕ ತುಂಬಾ ಚನ್ನಾಗಿ ಹೊಂದಿಕೊಳ್ಳತ್ತೆ. ಇನ್ನು ಮುಂದಿನದು ನಿಮಗೆ ಬಿಟ್ಟಿದ್ದು.” ಅಂತ ತಂಮ್ಮ ಅಭಿಪ್ರಾಯ ಹೇಳಿದರು. ಹಾಗೆ ಕಿಶೋರ್ ಅಪ್ಪ “ನಮಗೆ ಮಂಗಳಕ್ಕ ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದಾಳೆ ನಮ್ಗೆ ಈ ಸಂಭದ ಮತ್ತು ಹುಡುಗಿ ಒಪ್ಪಿಗೆ ಆಗಿದೆ.” ಇನ್ನು ಮದುವೆ ಆಗೋರು ಒಪ್ಪಿದರೆ ನಮ್ಮ ಅಬ್ಯಂತರ ಏನಿಲ್ಲ ಅಂತ ಹೇಳಿದರು. ಸುಮಾಳಿಗೆ ಆಕಾಶ ಇನ್ನೇನು ಕಳಚಿ ಬಿಳುವುದೊ ಅನ್ನೊ ತರ ಏನು ಮಾತಾಡದೆ ನಿಂತಳು. ಎಲ್ಲಾ ಒಪ್ಪಿದ್ದಾರೆ ತಾನೇನು ಮಾಡಲಿ ಅನ್ನೋ ಯೋಚನೆಯಲ್ಲಿ ಇದ್ದಳು.  ಅಷ್ಟರಲ್ಲೇ ಕಿಶೋರ್ ಸುಮಾಳ ಹತ್ತಿರ ಪರ್ಸನಲ್ ಆಗಿ ಮಾತಾಡ ಬೇಕು ಅಂತ ಹೇಳಿದ್ದಕ್ಕೆ ಸುಮಾಳ ತಂದೆ ಅವರನ್ನು ಮಹಡಿ ಮೇಲಿನ ಬಾಲ್ಕನಿಗೆ ಹೋಗಲು ಸುಚಿಸಿದರು.
ಬಾಲ್ಕನಿಗೆ ಬಂದ ಸುಮಾಳಿಗೆ ಕಿಶೋರ್ ನ ಹತ್ತಿರ ಹೇಗೆ ಮಾತು ಶುರು ಮಾಡಬೇಕು ಅನ್ನುವಷ್ಟರಲ್ಲಿ ಕಿಶೋರ್ ನೆ ಮಾತು ಪ್ರಾರಂಭಿಸಿದ. “ಯಾಕ್ ಸುಮಾ ಆಶ್ಚರ್ಯ ಆಗ್ತಾ ಇದೀಯಾ? ಈ ಕೆ.ಪಿ ಇಲ್ಲಿ ಹೇಗ್ ಬಂದ ಅಂತ. ಮಂಗಳತ್ತೆ ನಿಮ್ಮ  ಜಾತಕದ ಜೊತೆ ಪೋಟೋನು ಕೊಟ್ಟಿದ್ದರು. ಆಗ ನನಗೂ ಶಾಕ್ ಆಗಿತ್ತು. ಹೇಗು ವೈದ್ಯ ಹೇಳಿದ್ದು ಹಾಲು ಅನ್ನ,ರೋಗಿ ಬಯಸಿದ್ದ ಹಾಲು ಅನ್ನ ಅಂತ ಸುಮ್ಮನಾದೆ.” ಇವನ ಮಾತಿಗೆ ಸುಮ ಆಶ್ಚರ್ಯದಿಂದ ನೋಡಿದಳು. ಕಿಶೋರ್..”ಹೌದು ಸುಮಾ ನನಗೆ ನೀನು ತುಂಬಾ ದಿನದ ಹಿಂದೆ ಇಷ್ಟ ಆಗಿದ್ದೀಯ. ಆದ್ರೆ ನಿನ್ನಲ್ಲಿ ಹೇಳಿಕೊಳ್ಳೋ ಅವಕಾಶ ನನಗೆ ಸಿಗಲಿಲ್ಲ. ಅದು ಅಲ್ಲದೆ ನಾನು ನಿನಗೆ ಕಾಲೇಜ್ ಫಸ್ಟ್ ಡೇ ಮಾಡಿದ ರ್ಯಾಗಿಂಗ್ ನೀನು ಇನ್ನು ಮನಸ್ಸಿನಲ್ಲಿ ಇಟ್ಗೊಂಡಿರೋದು ನನ್ನ ಕೀಟಳೆಗೆ ನನ್ನ ಮೇಲೆ ನಿನಗೆ ಬೆಸರ ಇರೋದು ನನಗೆ ಗೊತ್ತು. ಅದಿಕ್ಕೆ ನಾನು ಹೇಳಲು ಹಿಂಜರಿದೆ. ನಿನ್ನ ಉತ್ತರ ನೋ ಆದರೆ ಸಹಿಸಿಕೊಳ್ಳ ಶಕ್ತಿ ನನ್ನಲ್ಲಿ ಇಲ್ಲ.” ಸುಮಾ ಕಿಶೋರ್ ಮಾತು ಹೇಳ್ತಾ ಏನ್ ಮಾಡ್ಬೇಕು ಅಂತನೆ ತಿಳಿದೆ ಅವನು ಹೇಳೊದನ್ನು ಗಮನವಿಟ್ಟು ಕೇಳಿಸಿಕೊಂಡಳು. ಕಿಶೋರ್ ಸುಮಾಳ ಹತ್ತಿರ ತುಂಬಾ ವಿನಯವಾಗಿ,”ಸುಮಾ ನಾನು ನಿನ್ನ ತುಂಬಾ ಪ್ರೀತಿಸ್ತೀನಿ. ನಿನ್ನ ನಾನು ಚನ್ನಾಗಿ ನೋಡ್ಕೊಳ್ತೀನಿ. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ. ನಿನ್ಗೆ ನನ್ನಿಂದ ಯಾವುದೆ ಮೋಸ ಆಗಲ್ಲ.” ಸ್ವಲ್ಪ ಕೀಟಳೆ ಮಾಡೋ ತರ “ಹೆದ್ರ ಬೇಡಿ ಎಲ್ಲೊ ಕರ್ಕೋಂಡು ಹೋಗ್ತಿನಿ ಅಂತ ಇನ್ನೇಲ್ಲೊ ಕರ್ಕ್ಕೋಂಡು ಹೋಗಲ್ಲ.” ಅಂತ ಹೇಳಿದ್ದಕ್ಕೆ ಸುಮಾಳು ಅವನ ಜೊತೆ ನಕ್ಕಳು. ಸುಮಾ ಕಿಶೋರ್ ನ ನೋಡಿ ನನ್ಗೆ ನೀವು ಕಾಲೇಜ್ ಮಾಡಿದ್ದ ರ್ಯಾಗಿಂಗ್ ಮತ್ತು ಕೀಟಲೆಗೆ ಬೆಸರ ಇತ್ತು. ಆದ್ರೆ  ನಾನು ಆಫೀಸ್ ನಲ್ಲಿ ನಿಮ್ಮ ಭುದ್ದಿವಂತಿಕೆನ ಮೆಚ್ಚಿದ್ದೆ.” ಮುಂದೆ ಏನು ಹೇಳ್ ಬೇಕು ಅಂತ ತೋಚದೆ ಅರ್ದಕ್ಕೆ ಮಾತು ನಿಲ್ಲಿಸಿದ ಸುಮಾಳಿಗೆ ತಕ್ಷಣ ಕಿಶೋರ್ “ಹಾಗಿದ್ರೆ ಕೆ.ಪಿ. ನ ರಿಜೆಕ್ಟ ಮಾಡಿ ಕಿಶೋರ್ ನ ಒಪ್ಪ್ಗೊಂಡ ಬಿಡಿ” ಅಂತ ಹೇಳಿದ. ಅದಿಕ್ಕೆ ಸುಮಾ ನಾಚಿ ಮುಖ ಕೆಂಪಾಗಿ ತಲೆ ತಗ್ಗಿಸಿದಳು. ಕಿಶೋರ್ ಅವಳ ಹತ್ತಿರ ಬಂದು “ಹೇಳಿ ಸುಮಾ…ಓ.ಕೆ ನಾ ಇಲ್ವಾ” ಅಂತ ಕೇಳಿದ. ಸುಮಾ ಏನು ಮಾತಾಡದೆ “ಓ.ಕೆ.” ಅಂತ ತಲೆಯಾಡಿಸಿದಳು.