Tuesday, December 25, 2018

ಅನಾಥ ರಕ್ಷಕ


                                                 ಅನಾಥ ರಕ್ಷಕ

ಗೌರಿ ಮದ್ಯಮ ವರ್ಗದ ಸಂಸ್ಕಾರವಂತ  ಹುಡುಗಿ. ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸೂಕ್ಮ ಮನಸ್ಸಿನ ಹುಡುಗಿ. ಒಳ್ಳೆಯವರಿಗೆ ಕಷ್ಟ ತಪ್ಪಿದಲ್ಲ ಅನ್ನೊ ಹಾಗೆ ಗೌರಿ ಹೈಸ್ಕೂಲ್ ಮುಗಿಯುತ್ತಿದ್ದಂತೆ ತಾಯಿಯನ್ನು ಕಳೆದುಕೊಂಡಳು. ತಾಯಿ ಪ್ರೀತಿ ಸಿಗುತ್ತಿದ್ದ ಗೌರಿಗೆ ತಾಯಿ ಪ್ರೀತಿಯಿಂದಲು ವಂಚಿತಳಾದಳು. 

ಗೌರಿಯ ಅಪ್ಪ ಶಿವಪ್ಪ ಹೆಂಡತಿ ಖಾಯಿಲೆ ಬಿದ್ದಾಗಲೆ ಇನ್ನೊಂದು ಹೆಣ್ಣಿನ ಜೊತೆ ಸಂಪರ್ಕ ಇರಿಸಿಕೊಂಡಿದ್ದ. ಇದು ಮನೆಯಲ್ಲಿ ಅಷ್ಟಾಗಿ ಗೊತ್ತಿಲ್ಲದಿದ್ದರು ಸ್ವಲ್ಪ ಹೊಗೆಯಾಡುತಿತ್ತು.  ಹೆಂಡತಿ ಸತ್ತ ನಂತರ ಒಂದು ದೇವಸ್ಥಾನದಲ್ಲಿ ಮಾಲೆ ಹಾಕಿ ಗೌರಿಗೆ ಮಲತಾಯಿಯನ್ನು ಮನೆಗೆ ಕರೆದುಕೊಂಡು ಬಂದ. ಇಲ್ಲಿಂದ ಗೌರಿಯ ಕಷ್ಟದ ಸರಮಾಲೆ ಶುರುವಾಯಿತು. ಅಂತು-ಇಂತು ಹೈಸ್ಕೂಲ್ ಮುಗಿಸಿ ಚಿಕ್ಕಮ್ಮನ ಆದೇಶದಂತೆ ಪೂರ್ಣಾವಧಿ ಮನೆ ಕೆಲಸದವಳಾದಳು. ಮದುವೆ ಆಗಿ ವರ್ಷದೊಳಗೆ ಮನೆಯಲ್ಲಿ  ತೊಟ್ಟಿಲಾಡಿತು. ಗಂಡು ಮಗುವಾಗಿದಕ್ಕೆ ತಾಯಿ ಇಲ್ಲದ ತಬ್ಬಲಿ ಗೌರಿ ಮೂಲೆ ಗುಂಪಾದಳು. ಚಿಕ್ಕಮ್ಮನೆ ಮನೆಯ ಯಜಮಾನಿಕೆ ಮಹಿಸಿಕೊಂಡಳು. ಶಿವಪ್ಪ ಅಮ್ಮೊರ ಗಂಡನಾದ.

ದಿನಕ್ಕು ದಿನಕ್ಕು ಗೌರಿ ಮನೆ ಕೆಲಸದವಳಾದಳು. ಇಷ್ಟಕ್ಕೆ ಅವಳ ಕಷ್ಟ ತೀರಲಿಲ್ಲ. ಅವಳ ಚಿಕ್ಕಮ್ಮನ ತಮ್ಮ ಶೇಖರ ಅಕ್ಕನ ಮನೆ ಎಂದು ಪದೆ ಪದೆ ಬರುತ್ತಿದ್ದ. ಅವನು ಸ್ವಲ್ಪ ಜೊಲ್ಲ್ ಪಾರ್ಟಿ. ಅವನ ನೋಟ ಮತ್ತು ವರ್ತನೆ ಗೌರಿಗೆ ಹಿಂಸೆ ಆಗ ತೊಡಗಿತು. ಮಗುನ ನೋಡುವ ನೆಪ ಮಾಡಿ ಅಕ್ಕನ ಮನೆಲೆ ಇರಲು ಶುರು ಮಾಡಿದ. ಕೈಲಾಗದ ಅಪ್ಪ, ನೋಡು ಸುಮ್ಮನಿರುವ ಚಿಕ್ಕಮ್ಮ ಇದು ಗೌರಿಯ ಕಷ್ಟ ಹೇಳತೀರದು. ಮರ್ಯಾದೆ ಮತ್ತು ಒಳ್ಳೆ ಸಂಸ್ಕಾರ ಇರೋ ಹೆಣ್ಣಿಗೆ ನುಂಗಲಾರದ ತುತ್ತು. 

 ಗೌರಿ ಅಗಾಗ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿದ್ದಳು.  ಅಲ್ಲಿ ಅವಳ  ಗೆಳತಿ ವಿಮಲಾ ಳನ್ನು ಬೇಟಿ ಮಾಡುವ ಉದ್ದೇಶವು ಇರುತಿತ್ತು. ಇಬ್ಬರಿಗೂ ಆಗಾಗ  ಬೇಟಿ ಮಾಡಿ ಮನಸ್ಸು ಬಿಚ್ಚಿ ಮಾತಾಡಿದರೆ ಸಮಾಧಾನ. ಹೀಗೆ ಕಷ್ಟ-ಸುಖ ಮಾತಾಡುತ್ತ ಗೌರಿ  ಅವಳಲ್ಲಿ ಶೇಖರನ ವರ್ತನೆ ಬಗ್ಗೆ ಹೇಳಿದಳು. ವಿಮಲಾಳಿಗೆ  ಗೌರಿಯ ಕಷ್ಟ ಮೊದಲೆ ತಿಳಿದ ಕಾರಣ ಅವಳನ್ನು ಸಮಾಧಾನ ಮಾಡಿ ಹಾಗೆ ದೈರ್ಯ ತುಂಬಿ ಗೌರಿಯನ್ನು ಕಾಪಾಡುವ ನಿರ್ಧಾರ ಮಾಡಿದಳು.

ಮನೆಗೆ ಬಂದ ಗೌರಿಗೆ ಮನೆ ವಾತಾವರಣ ದಿನಕ್ಕು-ದಿನಕ್ಕು ಉಸುರು ಕಟ್ಟುವಂತೆ ಆಗಿತ್ತು. ಕೆಲಸದಲ್ಲಿ ನಿಪುಣೆ ಆದ ಗೌರಿಗೆ ಮನೆ ಕೆಲಸ ಹೊರೆ ಆಗಲಿಲ್ಲ. ಅಚ್ಚು ಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದಳು. ಅವಳ ಸಮಸ್ಯೆ ಶೇಖರ ಆಗಿದ್ದ. ಇವಳಿಗೆ ರಾತ್ರಿ ಮಲಗಿದರೆ ನಿದ್ದೆ ಬಾರದಂತೆ ಆಗಿತ್ತು. ಒಬ್ಬಳೆ ಮನೆಲಿರಲು ಭಯ ಬೀತಳಾದಳು. ಹೀಗೆ ಇರುವಾಗ ವಿಮಲಾ ಮತ್ತು ಗೌರಿ ಪುನಃ ಭೇಟಿ ಆದರು. ಆಗ ವಿಮಲಾ ಇವಳಿಗೆ ದೈರ್ಯ ತುಂಬಿ ಇವರ ದೂರದ ಸಂಭದಿಯೊಬ್ಬರ ಮನೆಲಿ ಅಡಿಗೆ ಕೆಲಸಕ್ಕೆ ಮತ್ತು ಗಂಡ-ಹೆಂಡತಿ ಇಬ್ಬರು ನೌಕರಿ ಮಾಡುವ ಕಾರಣ ಮಗುವನ್ನು ನೋಡಿಕೊಳ್ಳಲು ಜನ ಬೇಕಾಗಿರುವ ಕಾರಣ ಇವಳನ್ನು ಕಳುಹಿಸುಸವ ಉಪಾಯ ಮಾಡಿದಳು. ಅಲ್ಲದೆ ತನಗೆ ಪರಿಚಯ ವಿರುವ ಕಾರಣ ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಕೊಟ್ಟಳು. ಅದು ಅಲ್ಲದೆ ಅಲ್ಲಿ ಸುರಕ್ಷಿತವಾಗಿ ಇರಬಹುದು ಅನ್ನೊ ನಂಬಿಕೆ ಇಟ್ಟಳು. ನಗರವಾಗಿರುವ ಕಾರಣ ಗೌರಿ ಮೊದಲಿಗೆ ಹೆದರಿದಳು. ಆದರು ಇಲ್ಲಿಂದ ಹೋಗದೆ ಇರಲು ವಿಧಿ ಇಲ್ಲ. ವಿಮಲಾಳ ಮಾತಿನ ಮೇಲೆ ನಂಬಿಕೆ ಇಟ್ಟು ತಾನು ದೈರ್ಯ ತಂದುಕೊಂಡು  ಹೊರಟಳು. 

ಮನೆಯಲ್ಲಿ ಯಾರಿಗೂ ಹೇಳದೆ ಒಂದು ಚೀಟಿ ಬರೆದು ಹೋದಳು. ಎಲ್ಲಿಗೆ ಅನ್ನೊ ಸೂಚನೆ ಕೊಡಲಿಲ್ಲ. ತನ್ನ ದಾರಿ ತನಗೆ ಅಂತ ಮಾತ್ರ ಬರೆದಳು. ಯಾವುದೆ ಪ್ರೀತಿ ಮತ್ತು ಭಾವನಾತ್ಮಕ ಸಂಭಂದ ಇಲ್ಲದ ಕಾರಣ ಚಿಕ್ಕಮ್ಮನಿಗೆ ಕೆಲಸಕ್ಕೆ ಜನ ಇಲ್ಲ ಅನ್ನೋ ಬೆಸರ ಆಯಿತೆ ಹೊರತು ಇನ್ನೇನಿಲ್ಲ. ಇನ್ನು ಅಪ್ಪ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಶೇಖರನಿಗೆ ಮಾತ್ರ ಕೈ ತಪ್ಪಿತು ಎಂದು ನಿರಾಶೆ ಆಯಿತು. 

ಗೌರಿಯನ್ನು ವಿಮಲಾ ತನ್ನ ಸಂಭದಿಕರ ಮನೆಗೆ ಕರೆದು ತಂದಳು. ಅಲ್ಲಿ ಗಂಡ ಸುರೇಶ ಮತ್ತು ಅವನ ಹೆಂಡತಿ ಸೀಮಾ. ಅವರಿಬ್ಬರಿಗೂ ಒಂದು ಪುಟ್ಟಾದ ಮಗು. ವಿದ್ಯೆ ಅದಕ್ಕೆ ತಕ್ಕಂತ ನಯ-ವಿನಯ ಮಾನವೀಯತೆ ಇದ್ದವರು. ಇಲ್ಲಿ ಬಂದ ಮೇಲೆ ವಿಮಲಾ ಗೌರಿಯ ಜೊತೆ ತಾನು ಒಂದೆರಡು ದಿನ ಇಲ್ಲಿ ಉಳಿದು ಮನೆಗೆ ಹೊರಟಳು. ಮೃದು ಸ್ವಭಾವದ ಗೌರಿಗೆ, ಒಳ್ಳೆ ಮನೆಯವರ ಜೊತೆ ಹೊಂದಿಕೊಂಡು ಹೋಗಲು ಅವಳಿಗೆ ಕಷ್ಟ ಆಗಲಿಲ್ಲ. ಕೆಲಸದಲ್ಲಿ ಪಳಗಿದ ಗೌರಿ ಮನೆ ಕೆಲಸವನ್ನು ತುಂಬಾ ಅಚ್ಚು ಕಟ್ಟಾಗಿ ಮಾಡಿಕೊಂಡು ಹೋದಳು. ಮಗು ಚಿನ್ನು ಕೂಡ ಅಕ್ಕ-ಅಕ್ಕ ಎಂದು ಅವಳನ್ನು ತುಂಬಾ ಹಚ್ಚಿಕೊಂಡ. ಗೌರಿ ಸ್ವಲ್ಪ ದಿನಕ್ಕೆ ಆ ಮನೆಯ ಒಂದು ಸದಸ್ಯೆಯೇ ಆದಳು. ವಿಮಲಾ ಆಗಾಗ ಗೌರಿಗೆ ಪೋನ್ ಮಾಡಿ ಅವಳ ಕಷ್ಟ-ಸುಖ ವಿಚಾರಿಸುತ್ತಿದ್ದಳು. 

ಹೀಗೆ ಸುಸುತ್ರವಾಗಿ ಗೌರಿ ಜೀವನ ಸಾಗುತಿತ್ತು. ಗೌರಿ ಇದ್ದ ಮನೆಗೆ  ಸುರೇಶನ ಆಫೀಸ್ ನ ಅಕೌಂನ್ ಟೆನ್ಟ ರವಿ ಕೆಲಸದ ಮೇಲೆ ಸುರೇಶನ ಮನೆಗೆ ಬರುತಿದ್ದ. ಕೆಲವೊಮ್ಮೆ ತಡವಾದರೆ ಇವರ ಮನೆಲಿ ಊಟಮಾಡಿ ಹೋಗುತಿದ್ದ. ಆಗ ಗೌರಿಯೆ ಅಡಿಗೆ ಮಾಡುತಿದ್ದಳು. ಗೌರಿಯ ಮೃದು ಸ್ವಭಾವ ರವಿಗೆ ತುಂಬಾ ಇಷ್ಟವಾಯಿತು. ಲಕ್ಷಣವಾಗಿರೋ ಗೌರಿಗೆ ರವಿ ಮನಸೋತ. ಇವರ ಮನೆಯಲ್ಲಿ ಇಷ್ಟು ಚನ್ನಾಗಿ ಹೊಂದಿಕೊಂಡು ಹೋಗುವವಳು ತಾನು ಮದುವೆ ಆದರೆ ನನ್ನ ಅಪ್ಪ-ಅಮ್ಮ ನ ಜೊತೆ ಚನ್ನಾಗಿ ಇರುವಳು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕಿದ. ಗೌರಿಯ ವಿದ್ಯೆ ಮತ್ತು ಅವಳ ಅಪ್ಪ-ಅಮ್ಮ ನ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಗೌರಿಯನ್ನು ಮದುವೆ ಆಗುವ ಯೋಚನೆ ಮಾಡಿದ. 

ರವಿಗೆ ತನ್ನ ಯೊಚನೆ ಗೌರಿಗೆ ತಾನು ಹೇಳಿದರೆ ಎನು ಅಂದುಕೊಂಡಳು ಅಂತ ಭಾವಿಸಿ ಸುರೇಶ ಮತ್ತು ಸೀಮಾರ ಹತ್ತಿರ ಹೇಳುವ ಯೋಚನೆ ಮಾಡಿದ. ಇದಕ್ಕಾಗಿ ಸರಿಯಾದ ಸಮಯಕ್ಕೆ ಕಾದ. ಒಂದು ದಿನ ಲಂಚ್ ಬ್ರೇಕ್ ನಲ್ಲಿ ಸುರೇಶ ಮತ್ತು ಸೀಮಾ ಇರುವಾಗ ದೈರ್ಯ ಮಾಡಿ ಗೌರಿಯ ವಿಚಾರ ಪ್ರಸ್ತಾಪ ಮಾಡಿದ. ಸುರೇಶನಿಗೆ ಒಮ್ಮೆ ಆಶ್ಚರ್ಯ ವಾದರು ಸೀಮಾ ಸುಮ್ಮನೆ ಮುಗುಳ್ನಕ್ಕಳು. ಇವನು ಮನೆಗೆ ಬಂದಾಗ ರವಿ ಗೌರಿಯ ನೋಡುವ ರೀತಿ ನೋಡಿ ವಾಸನೆ ಹೊಡೆದಿತ್ತು. ತಮ್ಮ ಸ್ವಾರ್ಥಕ್ಕಾಗಿ ವಯಸ್ಸಿಗೆ ಬಂದ ಗೌರಿಯನ್ನು ಮನೆಲಿ ಇಟ್ಟುಕೊಳ್ಳುವುದು ಸರಿಯಲ್ಲ. ಅದು ಅಲ್ಲದೆ ತಾನಾಗೆ ರವಿ ಅಂತ ಗಂಡು ಮದುವೆಗೆ ಮುಂದೆ ಬಂದಿದ್ದು ಆಕೆಯ ಪುಣ್ಯವೆಂದೆ ಸುರೇಶ ಮತ್ತು ಸೀಮಾ ಭಾವಿಸಿದರು. ಗೌರಿಗೂ ರವಿ ತನ್ನ ಒಪ್ಪಿರುವುದು ಕೇಳಿ ತುಂಬಾ ಸಂತಸವಾಯಿತು. ತನ್ನ ಜೀವನದಲ್ಲು ಬೆಳಕು ಬಂತು ಎಂದು ದೇವರಿಗೆ ನಮಿಸಿದಳು.  ಗೌರಿಯ ಗುಣ ಮತ್ತು ನಡತೆ ಇಷ್ಟಪಟ್ಟ ರವಿ ತನ್ನ ಅಪ್ಪ-ಅಮ್ಮನ ಅನುಮತಿಯಿಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗೋ ಯೋಚನೆ ಮಾಡಿದ.  ಗೌರಿಯ ತವರು ಮನೆಯ ಸಂಪರ್ಕ ಇಟ್ಟುಕೊಳ್ಳದ ಗೌರಿ ವಿಮಲಾ ಒಬ್ಬಳನ್ನು ಮದುವೆಗೆ ಪೋನಿನಲ್ಲೆ ಕರೆದಳು. ತುಂಬಾ ಸಡಗರದಿಂದ ವಿಮಲಾ ಗೆಳತಿಯ ಮದುವೆಗೆ ಬಂದಳು. ಸ್ವಂತ ಅಕ್ಕ-ಭಾವನ ಹಾಗೆ ಸುರೇಶ- ಸೀಮಾ ಗೌರಿಯ ಮದುವೆಯನ್ನು ಸರಳವಾಗಿಯಾದರು ಪ್ರೀತಿಯಿಂದ ರವಿ ಯ ಜೊತೆ ಮುಂದಾಗಿ ಮದುವೆ ಮಾಡಿಕೊಟ್ಟರು. ರವಿ ಮತ್ತು ರವಿಯ ಅಪ್ಪ- ಅಮ್ಮ ಗೌರಿಯನ್ನು ಅನಾಥೆ ಎಂದು ಭಾವಿಸದೆ ಪ್ರೀತಿಯಿಂದ ಮನೆ  ತುಂಬಿಸಿಕೊಂಡರು. ಸ್ವಂತ ಮನೆಯವರಿಂದ ನಿರ್ಲಕ್ಷವಾದ ಗೌರಿ ದೇವರ ದಯೆಯಿಂದ ಒಳ್ಳೆ ಜನರ ಸಹವಾಸ ದೊರಕಿ ಒಳ್ಳೆ ಮನೆ ಸೇರಿದಳು.

Monday, December 17, 2018

ರಾಮೋಜಿ ಪಿಲ್ಮ್ ಸಿಟಿ ಮತ್ತು ಹೈದರಬಾದ್


                                    ರಾಮೋಜಿ ಪಿಲ್ಮ್ ಸಿಟಿ ಮತ್ತು ಹೈದರಬಾದ್

ಹೈದರಬಾದ್ ಅಂತ ಅಂದ ತಕ್ಷಣ ನೆನಪಾಗುವುದೆ ಮುತ್ತುಗಳು ಮತ್ತು ಹೈದರಬಾದ್ ಬಿರಿಯಾನಿ. ಆದರೆ ನನಗೆ ನೆನಪಾಗುವುದು ರಾಮೋಜಿ ಪಿಲ್ಮ್ ಸಿಟಿ. ತುಂಬಾ ದಿನದಿಂದ ರಾಮೋಜಿ ಪಿಲ್ಮ್ ಸಿಟಿಗೆ ಹೋಗಬೇಕು ಅಂತ ಅನಿಸುತ್ತಿತ್ತು. ಆದ್ರೆ ಯಾಕೋ ಪಕ್ಕದ ಸಿಟಿಯಲ್ಲಿ ಇದ್ದರು ಹೋಗೋಕೆ ಸಮಯ ಕೂಡಿ ಬಂದಿಲ್ಲ. ಮೊನ್ನೆ ದಿಡೀರ್ ಅಂತ ಹೈದರಬಾದ್ ಗೆ ಹೊರಟೆವು. ನಮ್ಮೆಲ್ಲರ ಮೊದಲ ಆದ್ಯತೆ ರಾಮೋಜಿಗೆ ಆಗಿತ್ತು. 1666 ಜಾಗದಲ್ಲಿ ರಾಮೋಜಿ ಯವರು ನಿರ್ಮಿಸಿದ ಈ ಪಿಲ್ಮ್ ಸಿಟಿ ಜಗತ್ತಿನಲ್ಲೆ ದೊಡ್ಡದಾದ ಪಿಲ್ಮ್ ಸಿಟಿ ಎಂಬ ಹೆಗ್ಗಳಿಕೆಯು ಇದೆ. ಇದರ ಬಗ್ಗೆ ತುಂಬಾ ಕೇಳಿರುವ ಕಾರಣ ಮತ್ತು ಕೆಲವು ಸಿನಿಮಾದಲ್ಲಿ ನೋಡಿರುವುದರಿಂದ ತುಂಬಾ ಉತ್ಸಾಹವಿತ್ತು. ಈ ಕಾರಣದಿಂದಲೇ ಹೋದ ದಿನ ಬೆಳಿಗ್ಗೆನೆ ಎಂಟು ಗಂಟೆಗೆ ಹೋಟೆಲ್ ಬಿಟ್ಟು ರಾಮೋಜಿಗೆ ಪ್ರಯಾಣ ಬೆಳೆಸಿದೆವು.

ರಾಮೋಜಿಯಲ್ಲಿ ಎಲ್ಲವು ವ್ಯವಸ್ಥಿತವಾಗಿತ್ತು. ಟಿಕೆಟ್ ಪಡೆಯುವುದರಿಂದ ಹಿಡಿದು ಮುಂದಿನ ಎಲ್ಲ ಪ್ರಯಾಣವನ್ನು ಟೂರಿಸ್ಟ್ ಗಳಿಗೆ  ಅನುಕೂಲವಾಗಿತ್ತು. ತಮ್ಮದೆ ಓಪನ್ ಬಸ್ ನಲ್ಲಿ ಪೂರಾ ಜಾಗವನ್ನು ತೋರಿಸುತ್ತಿದ್ದರು. ಬೆಳಿಗ್ಗೆ ಒಂಬತ್ತು  ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನೋಡಲು ಅವಕಾಶವಿತ್ತು. ಸಮಯದ ಮಿತಿಗೆ ಅನುಸಾರವಾಗಿ ನೋಡುತ್ತಾ ಬಂದೆವು. ರಾಮಾಯಣ ಮತ್ತು ಮಹಾಭಾರತದ ಸೆಟ್ ಆ ರಾಜರ ಆಸ್ಥಾನ ತುಂಬಾ ಸೊಗಸಾಗಿತ್ತು. ನನ್ನ ಮಗಳಿಗೆ ಅತಿ ಇಷ್ಟವಾದ ಸ್ಥಳ ಎಂದು ಹೇಳಬಹುದು. ಮುಂದೆ ರೈಲ್ವೆ ಸ್ಟೇಶನ್, ವಿಮಾನ ನಿಲ್ದಾಣ ಮತ್ತು ಕೆಲವು ಜಾಗಗಳನ್ನು ಬಳಸಿ  ಯಾವ ರೀತಿಯಾಗಿ ಶೂಟಿಂಗ್ ಗೆ ಉಪಯೋಗಿಸುತ್ತಾರೆ ಎಂದು ಗೈಡ್ ಹೇಳುತ್ತಿದ್ದ. ಹೊಸದಾಗಿ ಮಾಡಿದ ಬಾಹುಬಲಿ ಸೆಟ್ ಸೊಗಸಾಗಿತ್ತು. ಜಪಾನ್ ಗಾರ್ಡನ್, ಜಗನ್ನಾಥ್ ಟೆಮ್ಪಲ್ ಪುರಿ, ಹವಾ ಮಹಲ್. ಸೆನ್ಟ್ರಲ್ ಜೈಲ್, ಕೇವ್ಸ್, ಹೀಗೆ  ಒಂದೆ ಸೂರಿನಡಿಯಲ್ಲಿ ಎಲ್ಲವನ್ನು ಒದಗಿಸಿದ್ದರು. 

ರಾಮೋಜಿಯಲ್ಲಿ ಇನ್ನು ಇಷ್ಟವಾಗಿದ್ದು ಬರ್ಡ್ಸ್ ಪಾರ್ಕ. ಹಲವು ರೀತಿಯ ಹಕ್ಕಿಗಳು ಇವೆ. ಮೊಟ್ಟ ಮೊದಲ ಬಾರಿಗೆ ಆಸ್ಟ್ರಿಚ್ ನೋಡಿ ನನ್ನ ಮಗಳು  ತುಂಬಾ ಖುಷಿ  ಪಟ್ಟಳು. ಪಿಲ್ಮ್ ಮೇಕಿಂಗ್ ಮೇಲೆ ಒಂದು ವಿಡಿಯೋ ವಿತ್ ಡೆಮೋ ನೋಡಿದೆವು. ತುಂಬಾ ಉಪಯುಕ್ತ ವಾಯಿತು.ಬ್ಯಾಕ್ ಗ್ರೌಂಡ್  ಬ್ಲೂ ಸ್ಕ್ರೀನ್ ಉಪಯೋಗಿಸಿ ಚಿಟ್ ಮಾಡುವದನ್ನು ತುಂಬಾ ಸರಳವಾಗಿ ಡೆಮೋ ಮಾಡಿ ತೋರಿಸಿದರು.  ಮಕ್ಕಳಿಗಾಗಿ ಕೆಲವು ಆಟಿಗೆಗಳು ಇತ್ತು. ತಿಂಡಿ-ತಿರ್ಥಕ್ಕು ಎನು ಕೊರತೆ ಇಲ್ಲವಾಗಿತ್ತು. ಒಟ್ಟಿನಲ್ಲಿ ಒಂದು ದಿವಸದಲ್ಲಿ ಒಂದೆ ಸೂರಿನಡಿಯಲ್ಲಿ ಎಲ್ಲವನ್ನು ನೋಡೆವ ಅವಕಾಶ ಕಲ್ಪಿಸಿದರು. ಈ ವ್ಯವಸ್ಥೆಯನ್ನು ಮಾಡಿದ ರಾಮೋಜಿ ರಾವ್ ಅವರಿಗೆ ಮನದಲ್ಲೆ ನಮಿಸಿದೆ.

ಮರುದಿನ ಹೈದರಬಾದ್ ಸೈಟ್ ಸೀನ್ ಗೆ ಹೋದೆವು. ಹೈದ್ರಬಾದ್ ಎಂದಾಕ್ಷಣ ಮೊದಲು ಗುಗಲ್ ನಲ್ಲಿ ಬರುವುದೆ ಚಾರ್ ಮೀನಾರ್ . ಮ್ಯುಜಿಯಮ್ ಒಪನ್ ಆಗುವುದು ಹತ್ತು ಗಂಟೆ ಆದ ಕಾರಣ ಮೊದಲು ಚಾರ್ ಮಿನಾರ್ ನೋಡಿ ಮ್ಯುಜಿಯಮ್ ಗೆ ಬಂದೆವು. ಬೆಳಗಿನ ಸಮಯವಾದ ಕಾರಣ ತುಂಬಾ ಗಿಜಿ-ಬಿಜಿ ಇಲ್ಲವಾಗಿತ್ತು. ಆರಾಂ ಆಗಿ ಒಂದು ಸುತ್ತು ಹೊಡೆದು ಹಾಗೆ ಚಾರ್ ಮಿನಾರ್ ಮೇಲೆ ಹೋಗಿ ಸುತ್ತಲು ಗ್ಯಾಲರಿ ಓಡಾಡಿದೆವು. ಹಾಗೆ ಅಲ್ಲಿಂದ ಒಂದೆರಡು ಕಿಲೋ ಮೀಟರ್ ದೂರದಲ್ಲಿ ಇರುವ  ಹೈದ್ರಬಾದ್ ಸಲಾರ್ ಜಂಗ್ ಮ್ಯುಜಿಯಮ್ ಗೆ ಹೋದೆವು. ತುಂಬಾ ಸೊಗಸಾಗಿದೆ. ಇದನ್ನು ನೋಡಲು ತುಂಬಾ ಸಮಯ ಹಿಡಿಯುವುದು. ಇದರ ಅತ್ಯಂತ ಆಕರ್ಷಣೆ ಗಂಟೆ ಗಡಿಯಾರ. ಸರಿಯಾಗಿ ಹನ್ನೇರಡು ಗಂಟೆಗೆ ಗಂಟೆ ಬಾರಿಸುವುದನ್ನು ನೋಡಿದೆವು. ಅಷ್ಟು ವರ್ಷದ ಹಿಂದೆ ಮಾಡಿರುವುದನ್ನು ಜೋಪಾನ ಮಾಡಿ ಇಟ್ಟಿದ್ದಾರೆ. ಎಲ್ಲವನ್ನು ಅಚ್ಚುಕಟ್ಟಾಗಿ ಇರಿಸಿದ್ದಾರೆ. ಸಲಾರ್ ಜಂಗ್ ಮನೆತನಕ್ಕೆ ಸಂಭಂದ ಪಟ್ಟ ವಸ್ತುಗಳು ತುಂಬಾ ಇವೆ. ಇದರ ಹೊರತಾಗಿ ಜಪಾನ್, ಚೈನಾ,ಬರ್ಮಾ,ನೇಪಾಳ್,ಇಜಿಪ್ಟ್, ಯುರೋಪ್, ಹೀಗೆ ಅನೇಕ ದೇಶ ವಿದೇಶಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಅದರ ಮಾಹಿತಿಯನ್ನು ಕೆಳಗೆ ನಮೂದಿಸಲಾಗಿದೆ.  ಇಲ್ಲಿಂದ ಎರಡು ಕಿಲೋ ಮೀಟರ್ ನಲ್ಲಿ ನಿಜಾಮ್ ಖಾಸಗಿ ಮ್ಯುಸಿಯಮ್ ಇದೆ. ಇದು ಭಾರತದ ಶ್ರೀಮಂತ ಖಾಸಗಿ ಮ್ಯುಸಿಯಮ್ ಎಂದು ನಮುದಿಸಲಾಗಿದೆ. ಇಲ್ಲಿನ ಸಂಗ್ರಹವು ತುಂಬಾ ಸೊಗಸಾಗಿದೆ. ನಿಜವಾದ ಬಂಗಾರ ಮತ್ತು ಬೆಳ್ಳಿಗಳಿಂದಲೆ ಮಾಡಿರುವುದು ಎಂದು ಗೈಡ್ ವಿವರಿಸುತ್ತಿದ್ದ. 

ಹೈದ್ರಬಾದ್ ನ ಇನ್ನೊಂದು ಪ್ರೇಕ್ಷಣಿಯ ಸ್ಥಳ ಬಿರ್ಲಾ ಮಂದಿರ. ತುಂಬಾ ಸೊಗಸಾಗಿದೆ. ಮೇಲಿನಿಂದ ಹುಸೇನ್ ಸಾಗರ್ ನಮ್ಮ ಮುಂದಿನ ಗುರಿಯನ್ನು ನೋಡಿದೆವು. ಎಲ್ಲಾ ಕಡೆ ಶ್ವೇತ ವರ್ಣದಿಂದಲೆ ಕಂಗೊಳಿಸುತ್ತವೆ. ಸ್ವಚ್ಚತೆಯನ್ನು ಕಾಪಾಡಿದ್ದಾರೆ. ದೇವಸ್ಥಾನದಲ್ಲಿ ಭಕ್ತಿ ಬಾರದಿದ್ದರು ಅಲ್ಲಿನ ಕಟ್ಟಡ ಮತ್ತು ಸುತ್ತಲು ಕಾಣುವ ದ್ರಶ್ಯಾವಳಿಗಳು ಸೊಗಸಾಗಿವೆ.
ಬಿರ್ಲಾ ಟೆಮ್ಪಲ್ ನಿಂದ ನಾವು ಹುಸೇನ ಸಾಗರ್ ಗೆ ಹೋದೆವು. ಇಲ್ಲಿನ  ಬುದ್ದ ವಿಗ್ರಹ ಒಂದು ಆಕರ್ಷಣಿಯ ಜಾಗ. ಬೋಟ್ ನಲ್ಲಿ ಹೋಗೊದೆ ಚಂದ. ಮಕ್ಕಳಿಗಂತು ತುಂಬಾ ಇಷ್ಟವಾಗುವಂತಹ ಜಾಗ. ವಿಗ್ರಹದ ಕೆಳಗೆ ಸ್ವಲ್ಪ ಹೊತ್ತು ಸಮಯ ಕಳೆದು ಇನ್ನೊಂದು ಬೋಟ್ ನಲ್ಲಿ ಬರಬಹುದು. ಇಲ್ಲಿ ಸಮಯ ಕಳೆಯುವುದೆ ತುಂಬಾ ಹಿತ ಅನಿಸುವುದು. ಹುಸೇನ್ ಸಾಗರದ ಸುತ್ತ ಲುಂಬಿನಿ ಗಾರ್ಡನ್ ಎಂದು ಹೆಸರಿಸಿ  ಮಕ್ಕಳಿಗೆ ಆಟ ಆಡಲು ವ್ಯವಸ್ಥೆ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ಸಿಗುವುದರಿಂದ ನಾವು ಹೆಚ್ಚು ಸಮಯ ಕಳೆಯಲಿಲ್ಲ.  ಇಲ್ಲಿನ ಇನ್ನೊಂದು ವಿಶೇಷತೆ ಲೆಸರ್ ಶೋ. ಸಂಜೆ ಎಳು ಗಂಟೆಯಿಂದ ಮುಕ್ಕಾಲು ಗಂಟೆ ಶೋ. ತುಂಬಾ ಸೊಗಸಾಗಿದೆ. ಕುಲಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.
ನಮ್ಮ ಹೈದ್ರಬಾದ್ ಪ್ರವಾಸ ಎರಡು ದಿನದ್ದು ಆಗಿರುವುದರಿಂದ ಪ್ರಮುಖವಾದ ಜಾಗಗಳನ್ನು ನೋಡಿ ಬಂದೆವು. ಶಾಪಿಂಗ್ ಪ್ರೀಯರಿಗೆ ಮುತ್ತುಗಳು ಮತ್ತು ಮುತ್ತಿನ ಆಭರಣಗಳು ಹೇರಳವಾಗಿ ದೊರಕುತ್ತವೆ. ಅಲ್ಲದೆ  ತರಹ ತರಹದ ಬಳೆ ಮತ್ತು ಆಭರಣಗಳು ದೊರಕುತ್ತವೆ. ಪ್ರವಾಸದ ನೆನಪಿಗಾಗಿ ಕೆಲವನ್ನು ತೆಗೆದು ಕೊಂಡೆವು. ಡಿಸೆಂಬರ್ ತಿಂಗಳು ಆದ ಕಾರಣ ಹವಾಮಾನವು ಹಿತವಾಗಿತ್ತು. ಯಾವುದಕ್ಕು ತೊಂದರೆ ಇಲ್ಲ. ಒಟ್ಟಿನಲ್ಲಿ ಒಮ್ಮೆ ಹೋಗಿ ನೋಡುವಂತಹ ಜಾಗ.



Sunday, December 16, 2018

ನಾನು ಶಾಲೆಗೆ ಹೋಗ್ತಿನಿ


                                ನಾನು ಶಾಲೆಗೆ ಹೋಗ್ತಿನಿ

ಹಿರಿಯೂರು ಪಟೇಲರಿಗೆ ಅಪರೂಪವಾಗಿ ಒಂದು ಮೊಮ್ಮಗ ಹುಟ್ಟಿದ. ಮನೆ ಮಂದಿಗೆಲ್ಲ ಆತನೆಂದರೆ ಕೈ ಮುದ್ದು. ಅಜ್ಜ-ಅಜ್ಜಿಗೆ ಮೊಮ್ಮಗ ಶೀಕಂಠ ಏನ್ ಮಾಡಿದರು ಖುಷಿಯೋ ಖುಷಿ. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಮೊಮ್ಮಗ ಶಾಲೆಗೆ ಹೋಗಲು ನಿರಾಕರಿಸಿದ. ಶಾಲೆಗೆ ಹೋಗಲು ಅವನ ತಯಾರು ಮಾಡಲು ಹೋದರೆ ರಂಪ ಹಿಡಿಯುತ್ತಿದ್ದ. ಹೀಗೆ  ಮನೆಲೆ ಇರಲು ಶುರು ಮಾಡಿದ. ಇದಕ್ಕೆ ಅಜ್ಜ-ಅಜ್ಜಿ ಅವನ ತಾಳಕ್ಕೆ ಕುಣಿದರು.ಇಷ್ಟು ಜಮೀನಿರುವಾಗ ಮೊಮ್ಮಗ ಶಾಲೆಗೆ ಹೋಗಿ ನೌಕರಿ ಮಾಡೋದೆನಿದೆ ಅನ್ನೋ ಭಾವನೆ ಪಟೇಲರಿಗೆ. ಆದರೆ ವಾಸ್ಥವ ತಿಳಿದ ಪಟೇಲರ ಮಗ-ಸೊಸೆಗೆ ಮಗ ಶಾಲೆಗೆ ಹೋಗದಿರುವುದು ದೊಡ್ಡ ತಲೆ ನೋವಾಯಿತು. ಈ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸ ಬೇಕು ಎಂದು ಒಂದು ಉಪಾಯ ಮಾಡಿದ. 

ಒಮ್ಮೆ ಪಟೇಲರ ಮೊಮ್ಮಗ ಕೆಲಸದವರ ಜೊತೆ ಒಡಾಡಿಕೊಂಡು ಇದ್ದ. ಎಲ್ಲಾ ಹೊಲದ ಕಡೆ ಹೊರಟಿದ್ದರು. ಆಗ ಪಟೇಲರ ಮಗ ತನ್ನ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಲು ಮನಸ್ಸು ಮಾಡಿದ. ಅಪ್ಪ ನ ಜೊತೆ ಶೀಕಂಠನು ಹೊರಟ. ಹೊಲದಲ್ಲಿ ಕೆಲಸ ಮಾಡುವಾಗ ಶೀಕಂಠನು ಆಳುಗಳ ಜೊತೆ ಕೆಲಸ ಶುರು ಮಾಡಿದ. ಅವರು ಕೆಲಸ ಮಾಡುವ ಹೊಲ ಶಾಲೆಯ ಹಿಂಭಾಗದಲ್ಲಿ ಇತ್ತು. ಶೀಕಂಠನು ಹೊಲದಲ್ಲಿ ಇರುವಾಗ ಶಾಲೆಯಿಂದ ಅವನ ವಾರಗೆಯ ಮಕ್ಕಳು ರಾಗವಾಗಿ ಹಾಡುಗಳನ್ನು ಹೇಳುತ್ತಿದ್ದರು. ಇನ್ನು ಕೆಲವರು ಶಾಲೆಯ ಆವರಣದಲ್ಲಿ ಆಟ ಆಡುತ್ತಿದ್ದರು. ಅದನ್ನು ನೋಡಿದ ಶೀಕಂಠನು ಶಾಲೆಯ ಬಳಿ ಹೋದ. ಅಲ್ಲೆ ಇಣುಕಿ ನೋಡಿದ ತನ್ನ ವಾರಗೆಯ ಮಕ್ಕಳು ಹಾಡುತ್ತಿದ್ದರು, ಕೆಲವರು ಚಿತ್ರ ಬಿಡಿಸುತ್ತಿದ್ದರು, ಇನ್ನು ಕೆಲವರು ಮೇಸ್ಟ್ರು ಹೇಳುವ ಕಥೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಇದನ್ನು ನೋಡಿದ ಶೀಕಂಠನಿಗೆ ಶಾಲೆ ಎಂದರೆ ಏನು ಅನ್ನೊದು ಅರ್ಥವಾಯಿತು. ತಾನು ಶಾಲೆಗೆ ಹೋಗದೆ ಮನೆಲಿ ಇರಬಾರದು. ತಾನು ಶಾಲೆಗೆ ಹೋದರೆ ತನ್ನ ವಾರಗೆಯ ಮಕ್ಕಳ ಜೊತೆ ಕುಳಿತು ಆಟ- ಪಾಠ ಕಲಿಯಬಹುದು ಅನ್ನೊ ಯೋಚನೆ ಅವನ ಪುಟ್ಟ ಮನಸ್ಸಿಗೆ ಹೊಳೆಯಿತು.
ಶೀಕಂಠನು ಮನೆಗೆ ಬಂದವನೆ ನಾನು ನಾಳೆಯಿಂದ ಶಾಲೆಗೆ ಹೋಗುತ್ತೇನೆ ಅಂತ ಹಠ ಹಿಡಿದನು. ಇವನ ಮಾತು ಕೇಳಿ ಮನೆಲಿ ಎಲ್ಲರಿಗೂ ಆಶ್ಚರ್ಯವಯಿತು. ಆದರೆ ಶೀಕಂಠನ ಅಪ್ಪ ಮಾತ್ರ ತನ್ನ ಉಪಾಯಕ್ಕೆ ಫಲ ದೊರಕಿತು ಎಂದು ಮುಗುಳ್ನಗುತ್ತ ಮಗನನ್ನು ಮರುದಿನ ಸಂತೋಷವಾಗಿ ಶಾಲೆಗೆ ಬಿಟ್ಟು ಬಂದನು.


Tuesday, December 11, 2018

ಹಸಿವು ಕಲಿಸಿದ ಪಾಠ


                                         ಹಸಿವು ಕಲಿಸಿದ ಪಾಠ

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ಸುಶ್ರುತನೆಂಬ ಒಬ್ಬ ರಾಜಕುಮಾರನಿದ್ದ. ಅವನನ್ನು ಮೊದಲಿನಿಂದಲು ಸ್ವಲ್ಪ ಕಾಳಜಿಯಿಂದ ಬೆಳೆಸಿದ ಕಾರಣವೊ ಏನೋ ಯಾವಾಗಲು ಅತಿಯಾದ ಸ್ವಚ್ಚತೆ ಮತ್ತು ತನ್ನ ಮೇಲೆ ಅತಿಯಾದ ಕಾಳಜಿ. ತನಗೆ ಏನಾದರು ಒಂದು ರೋಗ ಅಂಟಿದರೆ ಅಥವಾ ತನಗೆ ಏನಾದರು ಆದರೆ ಎಂಬ ಯೋಚನೆಯಲ್ಲಿ ತನ್ನ ಪ್ರಪಂಚದಲ್ಲಿ ತಾನು ಇರುತ್ತಿದ್ದ. ವಯಸ್ಸಾದ ರಾಜನಿಗೆ ವಯಸ್ಸಿಗೆ ಬಂದ ರಾಜಕುಮಾರ ತನ್ನ ಜಾಗ ತುಂಬಿ ಪ್ರಜೆಗಳ ಯೋಗ ಕ್ಷೇಮ ವಿಚಾರಿಸಲಿ ಎಂದು ರಾಜ್ಯ ಪರ್ಯಟನೆಗೆ ಆಗಾಗ ಕಳಿಸುವ ಯೋಚನೆ ಮಾಡಿದ. ಹಾಗೆ ಒಂದೆರಡು ಸಲ ಅಂಗರಕ್ಷಕರ ಜೊತೆ ಕಳುಹಿಸಿದ. ಆದರೆ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುವ ಬದಲು ರಾಜಕುಮಾರನ  ಯೋಗ ಕ್ಷೇಮ ನೋಡುವುದೆ ದೊಡ್ಡ ಸಾಹಸವಾಯಿತು. ರಾಜಕುಮಾರ ಹೊರಟನೆಂದರೆ ಆತನ ಜೊತೆ ಒಬ್ಬ ರಾಜಕುಮಾರನಿಗೆ ಬೇಕಾದ ಆಹಾರ, ನೀರು ಎಲ್ಲವನ್ನು ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಅಪ್ಪಿ-ತಪ್ಪಿಯು ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಯಾವುದೆ ಅರಣ್ಯದಲ್ಲಿ ಸಿಗುವ ಹಣ್ಣು-ಹಂಪಲನ್ನು ತಿನ್ನುವವನಲ್ಲ. ಅತಿಯಾದರೆ ಅಮ್ರತವು ವಿಷವಾದಂತೆ ರಾಜಕುಮಾರನ ವರ್ತನೆ ದಿನಕ್ಕು ದಿನಕ್ಕು ಮಿತಿ ಮೀರಿತು.ಇದು ರಾಜನಿಗೆ ದೊಡ್ಡ ಸಮಸ್ಯೆ ಆಯಿತು. ಹೀಗೆ ಆದರೆ ರಾಜ್ಯದ ಗತಿ ಏನು?  ರಾಜ್ಯ ಪರ್ಯಟನೆ ಮಾಡಿ ರಾಜ್ಯ ನೋಡಿಕೊಳ್ಳುವುದು ಹೇಗೆಂದು ತನ್ನ ದುಖಃವನ್ನು ಮಂತ್ರಿಯ ಬಳಿ ತೊಡಿಕೊಂಡನು. ಮಂತ್ರಿಯು ಇದನ್ನು ಗಂಭಿರವಾಗಿ ಯೋಚಿಸಿ ಒಂದು ಉಪಾಯ ಕಂಡು ಹಿಡಿದನು.
ಒಮ್ಮೆ ರಾಜಕುಮಾರ ರಾಜ್ಯ ಪರ್ಯಟನೆಗೆ ಎಂದು ಹೋದಾಗ  ಯಥಾ ಪ್ರಕಾರ ಅವನ ಜೊತೆ ಒಬ್ಬ ಅಂಗರಕ್ಷಕ ರಾಜ ಕುಮಾರನಿಗೆ ಬೇಕಾಗುವ ನೀರು ಮತ್ತು ಆಹಾರಗಳನ್ನು ತೆಗೆದುಕೊಂಡು ಹೊರಟನು. ರಾಜಕುಮಾರನು ಮತ್ತು ಅವನ ಆಪ್ತ ಅಂಗರಕ್ಷಕ ಸ್ವಲ್ಪ ಮುಂದೆ ಹೋದರು. ಹಿಂದೆ ಆಹಾರ ತೆಗೆದುಕೊಂಡು ಹೋದ ಅಂಗರಕ್ಷಕ ಸ್ವಲ್ಪ ಹಿಂದೆ ಉಳಿದು ರಾಜಕುಮಾರನಿಂದ ಮರೆಯಾದನು. ಊಟದ ಸಮಯ ಬಂದಾಗ ರಾಜಕುಮಾರ ಮತ್ತು ಅವನ ಆಪ್ತ ಅಂಗರಕ್ಷಕ ಅಲ್ಲೆ ಒಂದು ಜಾಗವನ್ನು ನೋಡಿ ಕುಳಿತರು. ಆಹಾರ ತರುವವನು ಎಷ್ಟು ಸಮಯವಾದರು ಬರಲಿಲ್ಲ. ಇತ್ತ ರಾಜಕುಮಾರನಿಗೆ ಹಸಿವು ಮತ್ತು ಬಾಯಾರಿಕೆ ತಡೆಯಲಾಗಲಿಲ್ಲ. ಆತ ಬರುವ ಸೂಚನೆಯು ಕಾಣಲಿಲ್ಲ.  ಮೊದಲೆ ಮಂತ್ರಿ ಸೂಚಿಸಿದ ಹಾಗೆ ಆಪ್ತ ಅಂಗರಕ್ಷಕ ರಾಜಕುಮಾರನನ್ನು ಅಲ್ಲೆ ಹತ್ತಿರ ಇರುವ ಒಂದು ಪುಟ್ಟ ಹಳ್ಳಿಯ ಕಡೆ ಕರೆದುಕೊಂಡು ಹೋದನು. ಊಟದ ಸಮಯ ಆಗಿದ್ದರಿಂದ ಹಳ್ಳಿಯ ಜನರು ಇವರನ್ನು ಆದರದಿಂದ ಬರ ಮಾಡಿಕೊಂಡರು. ರಾಜಕುಮಾರನಿಗಾದ ಹಸಿವು ಊಟ ಬೇಡ ಎನ್ನಲಾಗಲಿಲ್ಲ.  ತಮಗಾಗಿ ತಯಾರಿಸಿದ ಊಟವನ್ನು ಇವರಿಗೂ ಬಡಿಸಿದರು. ಹಸಿದವನು ಬಲ್ಲ ಅನ್ನದ ರುಚಿ ಅನ್ನೋ ಹಾಗೆ ಹೊಟ್ಟೆ ತುಂಬಾ ರಾಜಕುಮಾರ ಊಟ ಮಾಡಿದನು. ಅಲ್ಲೆ ವಿಶ್ರಾಂತಿಗೆಂದು ಸ್ವಲ್ಪ ಹೊತ್ತು ತಲೆ ಊರಿದನು. ಕಣ್ಣು ತುಂಬಾ ನಿದ್ದೆ ಬಂತು. ನಂತರ  ಆ ಹಳ್ಳಿಯಲ್ಲಿ ಇರುವ ಜನರ ಜೀವನ ನೋಡಿದನು. ಕೆಲಸ ಮಾಡುವ ಶ್ರಮ ಜೀವಿಗಳು. ಆರೋಗ್ಯವಾಗಿ ಇದ್ದಾರೆ.  ಅಲ್ಲಿಯ ವಾತವರಣ ಸೂಕ್ಷ್ಮವಾಗಿ ನೋಡುತ್ತ ಬಂದನು.  ಅಲ್ಲಿ ಇದ್ದು ಅವರ ಕಷ್ಟ-ಸುಖ ವಿಚಾರಿಸಿ ಅವರ ಜೊತೆ ಕುಳಿತು ಅವರಂತೆ ಇದ್ದನು. ಅಲ್ಲಿ ಕೊಳದಲ್ಲಿ ಇದ್ದ ನೀರನ್ನು ಕುಡಿದನು. ಅರಣ್ಯದಲ್ಲಿ ಸಿಗುವ ಹಣ್ಣನ್ನು ತಿಂದನು.  ರಾಜಕುಮಾರನಲ್ಲಿ ಏನೋ ಬದಲಾವಣೆ ಕಾಣಿಸಿತು. ರಾಜಕುಮಾರ ತನ್ನ ತಲೆಯಲ್ಲಿ ಇದ್ದ ಅತಿಯಾದ ತನ್ನ ಮೇಲಿನ ಕಾಳಜಿ ಮತ್ತು ಸ್ವಚ್ಚತೆಯನ್ನು ಹೊರಹಾಕಿದನು. ಇದನ್ನು ಗಮನಿಸಿದ ರಾಜಕುಮಾರನ ಆಪ್ತ ಅಂಗರಕ್ಷಕ ಮಂತ್ರಿಯ ಉಪಾಯ ನೋಡಿ ಮೆಚ್ಚಿದನು.