Sunday, December 16, 2018

ನಾನು ಶಾಲೆಗೆ ಹೋಗ್ತಿನಿ


                                ನಾನು ಶಾಲೆಗೆ ಹೋಗ್ತಿನಿ

ಹಿರಿಯೂರು ಪಟೇಲರಿಗೆ ಅಪರೂಪವಾಗಿ ಒಂದು ಮೊಮ್ಮಗ ಹುಟ್ಟಿದ. ಮನೆ ಮಂದಿಗೆಲ್ಲ ಆತನೆಂದರೆ ಕೈ ಮುದ್ದು. ಅಜ್ಜ-ಅಜ್ಜಿಗೆ ಮೊಮ್ಮಗ ಶೀಕಂಠ ಏನ್ ಮಾಡಿದರು ಖುಷಿಯೋ ಖುಷಿ. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಮೊಮ್ಮಗ ಶಾಲೆಗೆ ಹೋಗಲು ನಿರಾಕರಿಸಿದ. ಶಾಲೆಗೆ ಹೋಗಲು ಅವನ ತಯಾರು ಮಾಡಲು ಹೋದರೆ ರಂಪ ಹಿಡಿಯುತ್ತಿದ್ದ. ಹೀಗೆ  ಮನೆಲೆ ಇರಲು ಶುರು ಮಾಡಿದ. ಇದಕ್ಕೆ ಅಜ್ಜ-ಅಜ್ಜಿ ಅವನ ತಾಳಕ್ಕೆ ಕುಣಿದರು.ಇಷ್ಟು ಜಮೀನಿರುವಾಗ ಮೊಮ್ಮಗ ಶಾಲೆಗೆ ಹೋಗಿ ನೌಕರಿ ಮಾಡೋದೆನಿದೆ ಅನ್ನೋ ಭಾವನೆ ಪಟೇಲರಿಗೆ. ಆದರೆ ವಾಸ್ಥವ ತಿಳಿದ ಪಟೇಲರ ಮಗ-ಸೊಸೆಗೆ ಮಗ ಶಾಲೆಗೆ ಹೋಗದಿರುವುದು ದೊಡ್ಡ ತಲೆ ನೋವಾಯಿತು. ಈ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸ ಬೇಕು ಎಂದು ಒಂದು ಉಪಾಯ ಮಾಡಿದ. 

ಒಮ್ಮೆ ಪಟೇಲರ ಮೊಮ್ಮಗ ಕೆಲಸದವರ ಜೊತೆ ಒಡಾಡಿಕೊಂಡು ಇದ್ದ. ಎಲ್ಲಾ ಹೊಲದ ಕಡೆ ಹೊರಟಿದ್ದರು. ಆಗ ಪಟೇಲರ ಮಗ ತನ್ನ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಲು ಮನಸ್ಸು ಮಾಡಿದ. ಅಪ್ಪ ನ ಜೊತೆ ಶೀಕಂಠನು ಹೊರಟ. ಹೊಲದಲ್ಲಿ ಕೆಲಸ ಮಾಡುವಾಗ ಶೀಕಂಠನು ಆಳುಗಳ ಜೊತೆ ಕೆಲಸ ಶುರು ಮಾಡಿದ. ಅವರು ಕೆಲಸ ಮಾಡುವ ಹೊಲ ಶಾಲೆಯ ಹಿಂಭಾಗದಲ್ಲಿ ಇತ್ತು. ಶೀಕಂಠನು ಹೊಲದಲ್ಲಿ ಇರುವಾಗ ಶಾಲೆಯಿಂದ ಅವನ ವಾರಗೆಯ ಮಕ್ಕಳು ರಾಗವಾಗಿ ಹಾಡುಗಳನ್ನು ಹೇಳುತ್ತಿದ್ದರು. ಇನ್ನು ಕೆಲವರು ಶಾಲೆಯ ಆವರಣದಲ್ಲಿ ಆಟ ಆಡುತ್ತಿದ್ದರು. ಅದನ್ನು ನೋಡಿದ ಶೀಕಂಠನು ಶಾಲೆಯ ಬಳಿ ಹೋದ. ಅಲ್ಲೆ ಇಣುಕಿ ನೋಡಿದ ತನ್ನ ವಾರಗೆಯ ಮಕ್ಕಳು ಹಾಡುತ್ತಿದ್ದರು, ಕೆಲವರು ಚಿತ್ರ ಬಿಡಿಸುತ್ತಿದ್ದರು, ಇನ್ನು ಕೆಲವರು ಮೇಸ್ಟ್ರು ಹೇಳುವ ಕಥೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಇದನ್ನು ನೋಡಿದ ಶೀಕಂಠನಿಗೆ ಶಾಲೆ ಎಂದರೆ ಏನು ಅನ್ನೊದು ಅರ್ಥವಾಯಿತು. ತಾನು ಶಾಲೆಗೆ ಹೋಗದೆ ಮನೆಲಿ ಇರಬಾರದು. ತಾನು ಶಾಲೆಗೆ ಹೋದರೆ ತನ್ನ ವಾರಗೆಯ ಮಕ್ಕಳ ಜೊತೆ ಕುಳಿತು ಆಟ- ಪಾಠ ಕಲಿಯಬಹುದು ಅನ್ನೊ ಯೋಚನೆ ಅವನ ಪುಟ್ಟ ಮನಸ್ಸಿಗೆ ಹೊಳೆಯಿತು.
ಶೀಕಂಠನು ಮನೆಗೆ ಬಂದವನೆ ನಾನು ನಾಳೆಯಿಂದ ಶಾಲೆಗೆ ಹೋಗುತ್ತೇನೆ ಅಂತ ಹಠ ಹಿಡಿದನು. ಇವನ ಮಾತು ಕೇಳಿ ಮನೆಲಿ ಎಲ್ಲರಿಗೂ ಆಶ್ಚರ್ಯವಯಿತು. ಆದರೆ ಶೀಕಂಠನ ಅಪ್ಪ ಮಾತ್ರ ತನ್ನ ಉಪಾಯಕ್ಕೆ ಫಲ ದೊರಕಿತು ಎಂದು ಮುಗುಳ್ನಗುತ್ತ ಮಗನನ್ನು ಮರುದಿನ ಸಂತೋಷವಾಗಿ ಶಾಲೆಗೆ ಬಿಟ್ಟು ಬಂದನು.


No comments: