Tuesday, December 25, 2018

ಅನಾಥ ರಕ್ಷಕ


                                                 ಅನಾಥ ರಕ್ಷಕ

ಗೌರಿ ಮದ್ಯಮ ವರ್ಗದ ಸಂಸ್ಕಾರವಂತ  ಹುಡುಗಿ. ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸೂಕ್ಮ ಮನಸ್ಸಿನ ಹುಡುಗಿ. ಒಳ್ಳೆಯವರಿಗೆ ಕಷ್ಟ ತಪ್ಪಿದಲ್ಲ ಅನ್ನೊ ಹಾಗೆ ಗೌರಿ ಹೈಸ್ಕೂಲ್ ಮುಗಿಯುತ್ತಿದ್ದಂತೆ ತಾಯಿಯನ್ನು ಕಳೆದುಕೊಂಡಳು. ತಾಯಿ ಪ್ರೀತಿ ಸಿಗುತ್ತಿದ್ದ ಗೌರಿಗೆ ತಾಯಿ ಪ್ರೀತಿಯಿಂದಲು ವಂಚಿತಳಾದಳು. 

ಗೌರಿಯ ಅಪ್ಪ ಶಿವಪ್ಪ ಹೆಂಡತಿ ಖಾಯಿಲೆ ಬಿದ್ದಾಗಲೆ ಇನ್ನೊಂದು ಹೆಣ್ಣಿನ ಜೊತೆ ಸಂಪರ್ಕ ಇರಿಸಿಕೊಂಡಿದ್ದ. ಇದು ಮನೆಯಲ್ಲಿ ಅಷ್ಟಾಗಿ ಗೊತ್ತಿಲ್ಲದಿದ್ದರು ಸ್ವಲ್ಪ ಹೊಗೆಯಾಡುತಿತ್ತು.  ಹೆಂಡತಿ ಸತ್ತ ನಂತರ ಒಂದು ದೇವಸ್ಥಾನದಲ್ಲಿ ಮಾಲೆ ಹಾಕಿ ಗೌರಿಗೆ ಮಲತಾಯಿಯನ್ನು ಮನೆಗೆ ಕರೆದುಕೊಂಡು ಬಂದ. ಇಲ್ಲಿಂದ ಗೌರಿಯ ಕಷ್ಟದ ಸರಮಾಲೆ ಶುರುವಾಯಿತು. ಅಂತು-ಇಂತು ಹೈಸ್ಕೂಲ್ ಮುಗಿಸಿ ಚಿಕ್ಕಮ್ಮನ ಆದೇಶದಂತೆ ಪೂರ್ಣಾವಧಿ ಮನೆ ಕೆಲಸದವಳಾದಳು. ಮದುವೆ ಆಗಿ ವರ್ಷದೊಳಗೆ ಮನೆಯಲ್ಲಿ  ತೊಟ್ಟಿಲಾಡಿತು. ಗಂಡು ಮಗುವಾಗಿದಕ್ಕೆ ತಾಯಿ ಇಲ್ಲದ ತಬ್ಬಲಿ ಗೌರಿ ಮೂಲೆ ಗುಂಪಾದಳು. ಚಿಕ್ಕಮ್ಮನೆ ಮನೆಯ ಯಜಮಾನಿಕೆ ಮಹಿಸಿಕೊಂಡಳು. ಶಿವಪ್ಪ ಅಮ್ಮೊರ ಗಂಡನಾದ.

ದಿನಕ್ಕು ದಿನಕ್ಕು ಗೌರಿ ಮನೆ ಕೆಲಸದವಳಾದಳು. ಇಷ್ಟಕ್ಕೆ ಅವಳ ಕಷ್ಟ ತೀರಲಿಲ್ಲ. ಅವಳ ಚಿಕ್ಕಮ್ಮನ ತಮ್ಮ ಶೇಖರ ಅಕ್ಕನ ಮನೆ ಎಂದು ಪದೆ ಪದೆ ಬರುತ್ತಿದ್ದ. ಅವನು ಸ್ವಲ್ಪ ಜೊಲ್ಲ್ ಪಾರ್ಟಿ. ಅವನ ನೋಟ ಮತ್ತು ವರ್ತನೆ ಗೌರಿಗೆ ಹಿಂಸೆ ಆಗ ತೊಡಗಿತು. ಮಗುನ ನೋಡುವ ನೆಪ ಮಾಡಿ ಅಕ್ಕನ ಮನೆಲೆ ಇರಲು ಶುರು ಮಾಡಿದ. ಕೈಲಾಗದ ಅಪ್ಪ, ನೋಡು ಸುಮ್ಮನಿರುವ ಚಿಕ್ಕಮ್ಮ ಇದು ಗೌರಿಯ ಕಷ್ಟ ಹೇಳತೀರದು. ಮರ್ಯಾದೆ ಮತ್ತು ಒಳ್ಳೆ ಸಂಸ್ಕಾರ ಇರೋ ಹೆಣ್ಣಿಗೆ ನುಂಗಲಾರದ ತುತ್ತು. 

 ಗೌರಿ ಅಗಾಗ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿದ್ದಳು.  ಅಲ್ಲಿ ಅವಳ  ಗೆಳತಿ ವಿಮಲಾ ಳನ್ನು ಬೇಟಿ ಮಾಡುವ ಉದ್ದೇಶವು ಇರುತಿತ್ತು. ಇಬ್ಬರಿಗೂ ಆಗಾಗ  ಬೇಟಿ ಮಾಡಿ ಮನಸ್ಸು ಬಿಚ್ಚಿ ಮಾತಾಡಿದರೆ ಸಮಾಧಾನ. ಹೀಗೆ ಕಷ್ಟ-ಸುಖ ಮಾತಾಡುತ್ತ ಗೌರಿ  ಅವಳಲ್ಲಿ ಶೇಖರನ ವರ್ತನೆ ಬಗ್ಗೆ ಹೇಳಿದಳು. ವಿಮಲಾಳಿಗೆ  ಗೌರಿಯ ಕಷ್ಟ ಮೊದಲೆ ತಿಳಿದ ಕಾರಣ ಅವಳನ್ನು ಸಮಾಧಾನ ಮಾಡಿ ಹಾಗೆ ದೈರ್ಯ ತುಂಬಿ ಗೌರಿಯನ್ನು ಕಾಪಾಡುವ ನಿರ್ಧಾರ ಮಾಡಿದಳು.

ಮನೆಗೆ ಬಂದ ಗೌರಿಗೆ ಮನೆ ವಾತಾವರಣ ದಿನಕ್ಕು-ದಿನಕ್ಕು ಉಸುರು ಕಟ್ಟುವಂತೆ ಆಗಿತ್ತು. ಕೆಲಸದಲ್ಲಿ ನಿಪುಣೆ ಆದ ಗೌರಿಗೆ ಮನೆ ಕೆಲಸ ಹೊರೆ ಆಗಲಿಲ್ಲ. ಅಚ್ಚು ಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದಳು. ಅವಳ ಸಮಸ್ಯೆ ಶೇಖರ ಆಗಿದ್ದ. ಇವಳಿಗೆ ರಾತ್ರಿ ಮಲಗಿದರೆ ನಿದ್ದೆ ಬಾರದಂತೆ ಆಗಿತ್ತು. ಒಬ್ಬಳೆ ಮನೆಲಿರಲು ಭಯ ಬೀತಳಾದಳು. ಹೀಗೆ ಇರುವಾಗ ವಿಮಲಾ ಮತ್ತು ಗೌರಿ ಪುನಃ ಭೇಟಿ ಆದರು. ಆಗ ವಿಮಲಾ ಇವಳಿಗೆ ದೈರ್ಯ ತುಂಬಿ ಇವರ ದೂರದ ಸಂಭದಿಯೊಬ್ಬರ ಮನೆಲಿ ಅಡಿಗೆ ಕೆಲಸಕ್ಕೆ ಮತ್ತು ಗಂಡ-ಹೆಂಡತಿ ಇಬ್ಬರು ನೌಕರಿ ಮಾಡುವ ಕಾರಣ ಮಗುವನ್ನು ನೋಡಿಕೊಳ್ಳಲು ಜನ ಬೇಕಾಗಿರುವ ಕಾರಣ ಇವಳನ್ನು ಕಳುಹಿಸುಸವ ಉಪಾಯ ಮಾಡಿದಳು. ಅಲ್ಲದೆ ತನಗೆ ಪರಿಚಯ ವಿರುವ ಕಾರಣ ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಕೊಟ್ಟಳು. ಅದು ಅಲ್ಲದೆ ಅಲ್ಲಿ ಸುರಕ್ಷಿತವಾಗಿ ಇರಬಹುದು ಅನ್ನೊ ನಂಬಿಕೆ ಇಟ್ಟಳು. ನಗರವಾಗಿರುವ ಕಾರಣ ಗೌರಿ ಮೊದಲಿಗೆ ಹೆದರಿದಳು. ಆದರು ಇಲ್ಲಿಂದ ಹೋಗದೆ ಇರಲು ವಿಧಿ ಇಲ್ಲ. ವಿಮಲಾಳ ಮಾತಿನ ಮೇಲೆ ನಂಬಿಕೆ ಇಟ್ಟು ತಾನು ದೈರ್ಯ ತಂದುಕೊಂಡು  ಹೊರಟಳು. 

ಮನೆಯಲ್ಲಿ ಯಾರಿಗೂ ಹೇಳದೆ ಒಂದು ಚೀಟಿ ಬರೆದು ಹೋದಳು. ಎಲ್ಲಿಗೆ ಅನ್ನೊ ಸೂಚನೆ ಕೊಡಲಿಲ್ಲ. ತನ್ನ ದಾರಿ ತನಗೆ ಅಂತ ಮಾತ್ರ ಬರೆದಳು. ಯಾವುದೆ ಪ್ರೀತಿ ಮತ್ತು ಭಾವನಾತ್ಮಕ ಸಂಭಂದ ಇಲ್ಲದ ಕಾರಣ ಚಿಕ್ಕಮ್ಮನಿಗೆ ಕೆಲಸಕ್ಕೆ ಜನ ಇಲ್ಲ ಅನ್ನೋ ಬೆಸರ ಆಯಿತೆ ಹೊರತು ಇನ್ನೇನಿಲ್ಲ. ಇನ್ನು ಅಪ್ಪ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಶೇಖರನಿಗೆ ಮಾತ್ರ ಕೈ ತಪ್ಪಿತು ಎಂದು ನಿರಾಶೆ ಆಯಿತು. 

ಗೌರಿಯನ್ನು ವಿಮಲಾ ತನ್ನ ಸಂಭದಿಕರ ಮನೆಗೆ ಕರೆದು ತಂದಳು. ಅಲ್ಲಿ ಗಂಡ ಸುರೇಶ ಮತ್ತು ಅವನ ಹೆಂಡತಿ ಸೀಮಾ. ಅವರಿಬ್ಬರಿಗೂ ಒಂದು ಪುಟ್ಟಾದ ಮಗು. ವಿದ್ಯೆ ಅದಕ್ಕೆ ತಕ್ಕಂತ ನಯ-ವಿನಯ ಮಾನವೀಯತೆ ಇದ್ದವರು. ಇಲ್ಲಿ ಬಂದ ಮೇಲೆ ವಿಮಲಾ ಗೌರಿಯ ಜೊತೆ ತಾನು ಒಂದೆರಡು ದಿನ ಇಲ್ಲಿ ಉಳಿದು ಮನೆಗೆ ಹೊರಟಳು. ಮೃದು ಸ್ವಭಾವದ ಗೌರಿಗೆ, ಒಳ್ಳೆ ಮನೆಯವರ ಜೊತೆ ಹೊಂದಿಕೊಂಡು ಹೋಗಲು ಅವಳಿಗೆ ಕಷ್ಟ ಆಗಲಿಲ್ಲ. ಕೆಲಸದಲ್ಲಿ ಪಳಗಿದ ಗೌರಿ ಮನೆ ಕೆಲಸವನ್ನು ತುಂಬಾ ಅಚ್ಚು ಕಟ್ಟಾಗಿ ಮಾಡಿಕೊಂಡು ಹೋದಳು. ಮಗು ಚಿನ್ನು ಕೂಡ ಅಕ್ಕ-ಅಕ್ಕ ಎಂದು ಅವಳನ್ನು ತುಂಬಾ ಹಚ್ಚಿಕೊಂಡ. ಗೌರಿ ಸ್ವಲ್ಪ ದಿನಕ್ಕೆ ಆ ಮನೆಯ ಒಂದು ಸದಸ್ಯೆಯೇ ಆದಳು. ವಿಮಲಾ ಆಗಾಗ ಗೌರಿಗೆ ಪೋನ್ ಮಾಡಿ ಅವಳ ಕಷ್ಟ-ಸುಖ ವಿಚಾರಿಸುತ್ತಿದ್ದಳು. 

ಹೀಗೆ ಸುಸುತ್ರವಾಗಿ ಗೌರಿ ಜೀವನ ಸಾಗುತಿತ್ತು. ಗೌರಿ ಇದ್ದ ಮನೆಗೆ  ಸುರೇಶನ ಆಫೀಸ್ ನ ಅಕೌಂನ್ ಟೆನ್ಟ ರವಿ ಕೆಲಸದ ಮೇಲೆ ಸುರೇಶನ ಮನೆಗೆ ಬರುತಿದ್ದ. ಕೆಲವೊಮ್ಮೆ ತಡವಾದರೆ ಇವರ ಮನೆಲಿ ಊಟಮಾಡಿ ಹೋಗುತಿದ್ದ. ಆಗ ಗೌರಿಯೆ ಅಡಿಗೆ ಮಾಡುತಿದ್ದಳು. ಗೌರಿಯ ಮೃದು ಸ್ವಭಾವ ರವಿಗೆ ತುಂಬಾ ಇಷ್ಟವಾಯಿತು. ಲಕ್ಷಣವಾಗಿರೋ ಗೌರಿಗೆ ರವಿ ಮನಸೋತ. ಇವರ ಮನೆಯಲ್ಲಿ ಇಷ್ಟು ಚನ್ನಾಗಿ ಹೊಂದಿಕೊಂಡು ಹೋಗುವವಳು ತಾನು ಮದುವೆ ಆದರೆ ನನ್ನ ಅಪ್ಪ-ಅಮ್ಮ ನ ಜೊತೆ ಚನ್ನಾಗಿ ಇರುವಳು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕಿದ. ಗೌರಿಯ ವಿದ್ಯೆ ಮತ್ತು ಅವಳ ಅಪ್ಪ-ಅಮ್ಮ ನ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಗೌರಿಯನ್ನು ಮದುವೆ ಆಗುವ ಯೋಚನೆ ಮಾಡಿದ. 

ರವಿಗೆ ತನ್ನ ಯೊಚನೆ ಗೌರಿಗೆ ತಾನು ಹೇಳಿದರೆ ಎನು ಅಂದುಕೊಂಡಳು ಅಂತ ಭಾವಿಸಿ ಸುರೇಶ ಮತ್ತು ಸೀಮಾರ ಹತ್ತಿರ ಹೇಳುವ ಯೋಚನೆ ಮಾಡಿದ. ಇದಕ್ಕಾಗಿ ಸರಿಯಾದ ಸಮಯಕ್ಕೆ ಕಾದ. ಒಂದು ದಿನ ಲಂಚ್ ಬ್ರೇಕ್ ನಲ್ಲಿ ಸುರೇಶ ಮತ್ತು ಸೀಮಾ ಇರುವಾಗ ದೈರ್ಯ ಮಾಡಿ ಗೌರಿಯ ವಿಚಾರ ಪ್ರಸ್ತಾಪ ಮಾಡಿದ. ಸುರೇಶನಿಗೆ ಒಮ್ಮೆ ಆಶ್ಚರ್ಯ ವಾದರು ಸೀಮಾ ಸುಮ್ಮನೆ ಮುಗುಳ್ನಕ್ಕಳು. ಇವನು ಮನೆಗೆ ಬಂದಾಗ ರವಿ ಗೌರಿಯ ನೋಡುವ ರೀತಿ ನೋಡಿ ವಾಸನೆ ಹೊಡೆದಿತ್ತು. ತಮ್ಮ ಸ್ವಾರ್ಥಕ್ಕಾಗಿ ವಯಸ್ಸಿಗೆ ಬಂದ ಗೌರಿಯನ್ನು ಮನೆಲಿ ಇಟ್ಟುಕೊಳ್ಳುವುದು ಸರಿಯಲ್ಲ. ಅದು ಅಲ್ಲದೆ ತಾನಾಗೆ ರವಿ ಅಂತ ಗಂಡು ಮದುವೆಗೆ ಮುಂದೆ ಬಂದಿದ್ದು ಆಕೆಯ ಪುಣ್ಯವೆಂದೆ ಸುರೇಶ ಮತ್ತು ಸೀಮಾ ಭಾವಿಸಿದರು. ಗೌರಿಗೂ ರವಿ ತನ್ನ ಒಪ್ಪಿರುವುದು ಕೇಳಿ ತುಂಬಾ ಸಂತಸವಾಯಿತು. ತನ್ನ ಜೀವನದಲ್ಲು ಬೆಳಕು ಬಂತು ಎಂದು ದೇವರಿಗೆ ನಮಿಸಿದಳು.  ಗೌರಿಯ ಗುಣ ಮತ್ತು ನಡತೆ ಇಷ್ಟಪಟ್ಟ ರವಿ ತನ್ನ ಅಪ್ಪ-ಅಮ್ಮನ ಅನುಮತಿಯಿಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗೋ ಯೋಚನೆ ಮಾಡಿದ.  ಗೌರಿಯ ತವರು ಮನೆಯ ಸಂಪರ್ಕ ಇಟ್ಟುಕೊಳ್ಳದ ಗೌರಿ ವಿಮಲಾ ಒಬ್ಬಳನ್ನು ಮದುವೆಗೆ ಪೋನಿನಲ್ಲೆ ಕರೆದಳು. ತುಂಬಾ ಸಡಗರದಿಂದ ವಿಮಲಾ ಗೆಳತಿಯ ಮದುವೆಗೆ ಬಂದಳು. ಸ್ವಂತ ಅಕ್ಕ-ಭಾವನ ಹಾಗೆ ಸುರೇಶ- ಸೀಮಾ ಗೌರಿಯ ಮದುವೆಯನ್ನು ಸರಳವಾಗಿಯಾದರು ಪ್ರೀತಿಯಿಂದ ರವಿ ಯ ಜೊತೆ ಮುಂದಾಗಿ ಮದುವೆ ಮಾಡಿಕೊಟ್ಟರು. ರವಿ ಮತ್ತು ರವಿಯ ಅಪ್ಪ- ಅಮ್ಮ ಗೌರಿಯನ್ನು ಅನಾಥೆ ಎಂದು ಭಾವಿಸದೆ ಪ್ರೀತಿಯಿಂದ ಮನೆ  ತುಂಬಿಸಿಕೊಂಡರು. ಸ್ವಂತ ಮನೆಯವರಿಂದ ನಿರ್ಲಕ್ಷವಾದ ಗೌರಿ ದೇವರ ದಯೆಯಿಂದ ಒಳ್ಳೆ ಜನರ ಸಹವಾಸ ದೊರಕಿ ಒಳ್ಳೆ ಮನೆ ಸೇರಿದಳು.

No comments: