ರಾಮೋಜಿ ಪಿಲ್ಮ್
ಸಿಟಿ ಮತ್ತು ಹೈದರಬಾದ್
ಹೈದರಬಾದ್ ಅಂತ ಅಂದ ತಕ್ಷಣ ನೆನಪಾಗುವುದೆ ಮುತ್ತುಗಳು ಮತ್ತು ಹೈದರಬಾದ್
ಬಿರಿಯಾನಿ. ಆದರೆ ನನಗೆ ನೆನಪಾಗುವುದು ರಾಮೋಜಿ ಪಿಲ್ಮ್ ಸಿಟಿ. ತುಂಬಾ ದಿನದಿಂದ ರಾಮೋಜಿ ಪಿಲ್ಮ್
ಸಿಟಿಗೆ ಹೋಗಬೇಕು ಅಂತ ಅನಿಸುತ್ತಿತ್ತು. ಆದ್ರೆ ಯಾಕೋ ಪಕ್ಕದ ಸಿಟಿಯಲ್ಲಿ ಇದ್ದರು ಹೋಗೋಕೆ ಸಮಯ ಕೂಡಿ
ಬಂದಿಲ್ಲ. ಮೊನ್ನೆ ದಿಡೀರ್ ಅಂತ ಹೈದರಬಾದ್ ಗೆ ಹೊರಟೆವು. ನಮ್ಮೆಲ್ಲರ ಮೊದಲ ಆದ್ಯತೆ ರಾಮೋಜಿಗೆ ಆಗಿತ್ತು.
1666 ಜಾಗದಲ್ಲಿ ರಾಮೋಜಿ ಯವರು ನಿರ್ಮಿಸಿದ ಈ ಪಿಲ್ಮ್ ಸಿಟಿ ಜಗತ್ತಿನಲ್ಲೆ ದೊಡ್ಡದಾದ ಪಿಲ್ಮ್ ಸಿಟಿ
ಎಂಬ ಹೆಗ್ಗಳಿಕೆಯು ಇದೆ. ಇದರ ಬಗ್ಗೆ ತುಂಬಾ ಕೇಳಿರುವ ಕಾರಣ ಮತ್ತು ಕೆಲವು ಸಿನಿಮಾದಲ್ಲಿ ನೋಡಿರುವುದರಿಂದ
ತುಂಬಾ ಉತ್ಸಾಹವಿತ್ತು. ಈ ಕಾರಣದಿಂದಲೇ ಹೋದ ದಿನ ಬೆಳಿಗ್ಗೆನೆ ಎಂಟು ಗಂಟೆಗೆ ಹೋಟೆಲ್ ಬಿಟ್ಟು ರಾಮೋಜಿಗೆ
ಪ್ರಯಾಣ ಬೆಳೆಸಿದೆವು.
ರಾಮೋಜಿಯಲ್ಲಿ ಎಲ್ಲವು ವ್ಯವಸ್ಥಿತವಾಗಿತ್ತು. ಟಿಕೆಟ್ ಪಡೆಯುವುದರಿಂದ
ಹಿಡಿದು ಮುಂದಿನ ಎಲ್ಲ ಪ್ರಯಾಣವನ್ನು ಟೂರಿಸ್ಟ್ ಗಳಿಗೆ ಅನುಕೂಲವಾಗಿತ್ತು. ತಮ್ಮದೆ ಓಪನ್ ಬಸ್ ನಲ್ಲಿ ಪೂರಾ ಜಾಗವನ್ನು
ತೋರಿಸುತ್ತಿದ್ದರು. ಬೆಳಿಗ್ಗೆ ಒಂಬತ್ತು ಗಂಟೆಯಿಂದ
ರಾತ್ರಿ ಎಂಟು ಗಂಟೆಯವರೆಗೆ ನೋಡಲು ಅವಕಾಶವಿತ್ತು. ಸಮಯದ ಮಿತಿಗೆ ಅನುಸಾರವಾಗಿ ನೋಡುತ್ತಾ ಬಂದೆವು.
ರಾಮಾಯಣ ಮತ್ತು ಮಹಾಭಾರತದ ಸೆಟ್ ಆ ರಾಜರ ಆಸ್ಥಾನ ತುಂಬಾ ಸೊಗಸಾಗಿತ್ತು. ನನ್ನ ಮಗಳಿಗೆ ಅತಿ ಇಷ್ಟವಾದ
ಸ್ಥಳ ಎಂದು ಹೇಳಬಹುದು. ಮುಂದೆ ರೈಲ್ವೆ ಸ್ಟೇಶನ್, ವಿಮಾನ ನಿಲ್ದಾಣ ಮತ್ತು ಕೆಲವು ಜಾಗಗಳನ್ನು ಬಳಸಿ
ಯಾವ ರೀತಿಯಾಗಿ ಶೂಟಿಂಗ್ ಗೆ ಉಪಯೋಗಿಸುತ್ತಾರೆ ಎಂದು
ಗೈಡ್ ಹೇಳುತ್ತಿದ್ದ. ಹೊಸದಾಗಿ ಮಾಡಿದ ಬಾಹುಬಲಿ ಸೆಟ್ ಸೊಗಸಾಗಿತ್ತು. ಜಪಾನ್ ಗಾರ್ಡನ್, ಜಗನ್ನಾಥ್
ಟೆಮ್ಪಲ್ ಪುರಿ, ಹವಾ ಮಹಲ್. ಸೆನ್ಟ್ರಲ್ ಜೈಲ್, ಕೇವ್ಸ್, ಹೀಗೆ ಒಂದೆ ಸೂರಿನಡಿಯಲ್ಲಿ ಎಲ್ಲವನ್ನು ಒದಗಿಸಿದ್ದರು.
ರಾಮೋಜಿಯಲ್ಲಿ ಇನ್ನು ಇಷ್ಟವಾಗಿದ್ದು ಬರ್ಡ್ಸ್ ಪಾರ್ಕ. ಹಲವು ರೀತಿಯ ಹಕ್ಕಿಗಳು
ಇವೆ. ಮೊಟ್ಟ ಮೊದಲ ಬಾರಿಗೆ ಆಸ್ಟ್ರಿಚ್ ನೋಡಿ ನನ್ನ ಮಗಳು ತುಂಬಾ ಖುಷಿ
ಪಟ್ಟಳು. ಪಿಲ್ಮ್ ಮೇಕಿಂಗ್ ಮೇಲೆ ಒಂದು ವಿಡಿಯೋ ವಿತ್ ಡೆಮೋ ನೋಡಿದೆವು. ತುಂಬಾ ಉಪಯುಕ್ತ
ವಾಯಿತು.ಬ್ಯಾಕ್ ಗ್ರೌಂಡ್ ಬ್ಲೂ ಸ್ಕ್ರೀನ್ ಉಪಯೋಗಿಸಿ
ಚಿಟ್ ಮಾಡುವದನ್ನು ತುಂಬಾ ಸರಳವಾಗಿ ಡೆಮೋ ಮಾಡಿ ತೋರಿಸಿದರು. ಮಕ್ಕಳಿಗಾಗಿ ಕೆಲವು ಆಟಿಗೆಗಳು ಇತ್ತು. ತಿಂಡಿ-ತಿರ್ಥಕ್ಕು
ಎನು ಕೊರತೆ ಇಲ್ಲವಾಗಿತ್ತು. ಒಟ್ಟಿನಲ್ಲಿ ಒಂದು ದಿವಸದಲ್ಲಿ ಒಂದೆ ಸೂರಿನಡಿಯಲ್ಲಿ ಎಲ್ಲವನ್ನು ನೋಡೆವ
ಅವಕಾಶ ಕಲ್ಪಿಸಿದರು. ಈ ವ್ಯವಸ್ಥೆಯನ್ನು ಮಾಡಿದ ರಾಮೋಜಿ ರಾವ್ ಅವರಿಗೆ ಮನದಲ್ಲೆ ನಮಿಸಿದೆ.
ಮರುದಿನ ಹೈದರಬಾದ್ ಸೈಟ್ ಸೀನ್ ಗೆ ಹೋದೆವು. ಹೈದ್ರಬಾದ್ ಎಂದಾಕ್ಷಣ ಮೊದಲು
ಗುಗಲ್ ನಲ್ಲಿ ಬರುವುದೆ ಚಾರ್ ಮೀನಾರ್ . ಮ್ಯುಜಿಯಮ್ ಒಪನ್ ಆಗುವುದು ಹತ್ತು ಗಂಟೆ ಆದ ಕಾರಣ ಮೊದಲು
ಚಾರ್ ಮಿನಾರ್ ನೋಡಿ ಮ್ಯುಜಿಯಮ್ ಗೆ ಬಂದೆವು. ಬೆಳಗಿನ ಸಮಯವಾದ ಕಾರಣ ತುಂಬಾ ಗಿಜಿ-ಬಿಜಿ ಇಲ್ಲವಾಗಿತ್ತು.
ಆರಾಂ ಆಗಿ ಒಂದು ಸುತ್ತು ಹೊಡೆದು ಹಾಗೆ ಚಾರ್ ಮಿನಾರ್ ಮೇಲೆ ಹೋಗಿ ಸುತ್ತಲು ಗ್ಯಾಲರಿ ಓಡಾಡಿದೆವು.
ಹಾಗೆ ಅಲ್ಲಿಂದ ಒಂದೆರಡು ಕಿಲೋ ಮೀಟರ್ ದೂರದಲ್ಲಿ ಇರುವ ಹೈದ್ರಬಾದ್ ಸಲಾರ್ ಜಂಗ್ ಮ್ಯುಜಿಯಮ್ ಗೆ ಹೋದೆವು. ತುಂಬಾ
ಸೊಗಸಾಗಿದೆ. ಇದನ್ನು ನೋಡಲು ತುಂಬಾ ಸಮಯ ಹಿಡಿಯುವುದು. ಇದರ ಅತ್ಯಂತ ಆಕರ್ಷಣೆ ಗಂಟೆ ಗಡಿಯಾರ. ಸರಿಯಾಗಿ
ಹನ್ನೇರಡು ಗಂಟೆಗೆ ಗಂಟೆ ಬಾರಿಸುವುದನ್ನು ನೋಡಿದೆವು. ಅಷ್ಟು ವರ್ಷದ ಹಿಂದೆ ಮಾಡಿರುವುದನ್ನು ಜೋಪಾನ
ಮಾಡಿ ಇಟ್ಟಿದ್ದಾರೆ. ಎಲ್ಲವನ್ನು ಅಚ್ಚುಕಟ್ಟಾಗಿ ಇರಿಸಿದ್ದಾರೆ. ಸಲಾರ್ ಜಂಗ್ ಮನೆತನಕ್ಕೆ ಸಂಭಂದ
ಪಟ್ಟ ವಸ್ತುಗಳು ತುಂಬಾ ಇವೆ. ಇದರ ಹೊರತಾಗಿ ಜಪಾನ್, ಚೈನಾ,ಬರ್ಮಾ,ನೇಪಾಳ್,ಇಜಿಪ್ಟ್, ಯುರೋಪ್, ಹೀಗೆ
ಅನೇಕ ದೇಶ ವಿದೇಶಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಅದರ ಮಾಹಿತಿಯನ್ನು ಕೆಳಗೆ ನಮೂದಿಸಲಾಗಿದೆ.
ಇಲ್ಲಿಂದ ಎರಡು ಕಿಲೋ ಮೀಟರ್ ನಲ್ಲಿ ನಿಜಾಮ್ ಖಾಸಗಿ
ಮ್ಯುಸಿಯಮ್ ಇದೆ. ಇದು ಭಾರತದ ಶ್ರೀಮಂತ ಖಾಸಗಿ ಮ್ಯುಸಿಯಮ್ ಎಂದು ನಮುದಿಸಲಾಗಿದೆ. ಇಲ್ಲಿನ ಸಂಗ್ರಹವು
ತುಂಬಾ ಸೊಗಸಾಗಿದೆ. ನಿಜವಾದ ಬಂಗಾರ ಮತ್ತು ಬೆಳ್ಳಿಗಳಿಂದಲೆ ಮಾಡಿರುವುದು ಎಂದು ಗೈಡ್ ವಿವರಿಸುತ್ತಿದ್ದ.
ಹೈದ್ರಬಾದ್ ನ ಇನ್ನೊಂದು ಪ್ರೇಕ್ಷಣಿಯ ಸ್ಥಳ ಬಿರ್ಲಾ ಮಂದಿರ. ತುಂಬಾ ಸೊಗಸಾಗಿದೆ.
ಮೇಲಿನಿಂದ ಹುಸೇನ್ ಸಾಗರ್ ನಮ್ಮ ಮುಂದಿನ ಗುರಿಯನ್ನು ನೋಡಿದೆವು. ಎಲ್ಲಾ ಕಡೆ ಶ್ವೇತ ವರ್ಣದಿಂದಲೆ
ಕಂಗೊಳಿಸುತ್ತವೆ. ಸ್ವಚ್ಚತೆಯನ್ನು ಕಾಪಾಡಿದ್ದಾರೆ. ದೇವಸ್ಥಾನದಲ್ಲಿ ಭಕ್ತಿ ಬಾರದಿದ್ದರು ಅಲ್ಲಿನ
ಕಟ್ಟಡ ಮತ್ತು ಸುತ್ತಲು ಕಾಣುವ ದ್ರಶ್ಯಾವಳಿಗಳು ಸೊಗಸಾಗಿವೆ.
ಬಿರ್ಲಾ ಟೆಮ್ಪಲ್ ನಿಂದ ನಾವು ಹುಸೇನ ಸಾಗರ್ ಗೆ ಹೋದೆವು. ಇಲ್ಲಿನ ಬುದ್ದ ವಿಗ್ರಹ ಒಂದು ಆಕರ್ಷಣಿಯ ಜಾಗ. ಬೋಟ್ ನಲ್ಲಿ ಹೋಗೊದೆ
ಚಂದ. ಮಕ್ಕಳಿಗಂತು ತುಂಬಾ ಇಷ್ಟವಾಗುವಂತಹ ಜಾಗ. ವಿಗ್ರಹದ ಕೆಳಗೆ ಸ್ವಲ್ಪ ಹೊತ್ತು ಸಮಯ ಕಳೆದು ಇನ್ನೊಂದು
ಬೋಟ್ ನಲ್ಲಿ ಬರಬಹುದು. ಇಲ್ಲಿ ಸಮಯ ಕಳೆಯುವುದೆ ತುಂಬಾ ಹಿತ ಅನಿಸುವುದು. ಹುಸೇನ್ ಸಾಗರದ ಸುತ್ತ
ಲುಂಬಿನಿ ಗಾರ್ಡನ್ ಎಂದು ಹೆಸರಿಸಿ ಮಕ್ಕಳಿಗೆ ಆಟ
ಆಡಲು ವ್ಯವಸ್ಥೆ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ಸಿಗುವುದರಿಂದ ನಾವು ಹೆಚ್ಚು ಸಮಯ ಕಳೆಯಲಿಲ್ಲ.
ಇಲ್ಲಿನ ಇನ್ನೊಂದು ವಿಶೇಷತೆ ಲೆಸರ್ ಶೋ. ಸಂಜೆ ಎಳು
ಗಂಟೆಯಿಂದ ಮುಕ್ಕಾಲು ಗಂಟೆ ಶೋ. ತುಂಬಾ ಸೊಗಸಾಗಿದೆ. ಕುಲಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.
ನಮ್ಮ ಹೈದ್ರಬಾದ್ ಪ್ರವಾಸ ಎರಡು ದಿನದ್ದು ಆಗಿರುವುದರಿಂದ ಪ್ರಮುಖವಾದ
ಜಾಗಗಳನ್ನು ನೋಡಿ ಬಂದೆವು. ಶಾಪಿಂಗ್ ಪ್ರೀಯರಿಗೆ ಮುತ್ತುಗಳು ಮತ್ತು ಮುತ್ತಿನ ಆಭರಣಗಳು ಹೇರಳವಾಗಿ
ದೊರಕುತ್ತವೆ. ಅಲ್ಲದೆ ತರಹ ತರಹದ ಬಳೆ ಮತ್ತು ಆಭರಣಗಳು
ದೊರಕುತ್ತವೆ. ಪ್ರವಾಸದ ನೆನಪಿಗಾಗಿ ಕೆಲವನ್ನು ತೆಗೆದು ಕೊಂಡೆವು. ಡಿಸೆಂಬರ್ ತಿಂಗಳು ಆದ ಕಾರಣ ಹವಾಮಾನವು
ಹಿತವಾಗಿತ್ತು. ಯಾವುದಕ್ಕು ತೊಂದರೆ ಇಲ್ಲ. ಒಟ್ಟಿನಲ್ಲಿ ಒಮ್ಮೆ ಹೋಗಿ ನೋಡುವಂತಹ ಜಾಗ.
No comments:
Post a Comment