ಸೂತಕದ
ಮನೆ
ಹುಟ್ಟು-ಸಾವು ಕನ್ನಡದ ಜೋಡಿ ಪದ. ಹುಟ್ಟಿದ ಮನುಷ್ಯ ಸಾಯಲೆ ಬೇಕು. ಆದರೆ
ಈ ಸಾವು ಯಾವಾಗ, ಏಲ್ಲಿ, ಹೇಗೆ ಅನ್ನುವುದು ಯಾರಿಗು ತಿಳಿಯದ ವಿಷಯ. ಸಾವು ಅನಿರಿಕ್ಷಿತವೆ.
ಮನುಷ್ಯ ಎಷ್ಟೆ ಕೆಟ್ಟವನಾದರು ಸತ್ತ ಕ್ಷಣ ಏನೋ ಒಂದು ಶೂನ್ಯ ಭಾವನೆ ಮನಸ್ಸಿಗೆ
ಆವರಿಸುತ್ತದೆ. ಯಾರೆ ಆಗಲಿ ಒಮ್ಮೆ ಕನಿಕರದ ಮಾತು ಬಂದೆ ಬರುತ್ತದೆ. ಸತ್ತ ದಿನ ಮನೆ ತುಂಬಾ ಜನ ಮತ್ತು
ಸಾಂತ್ವಾನದ ಮಾತಾಡುವವರು ಬೇಕಾದಷ್ಟು ಜನ ಇದ್ದೆ ಇರುತ್ತಾರೆ. ಹನ್ನೇರಡು ದಿನ ಧಾರ್ಮಿಕ ವಿಧಿ-ವಿಧಾನ
ಮುಗಿದು ಸೂತಕ ಕಳೆಯುವ ತನಕ ನೆಂಟರಿಷ್ಟರು. ಇವೆಲ್ಲಾ ಮುಗಿದ ಮೇಲೆ ನಿಜವಾದ ಸೂತಕದ ಛಾಯೆ ಮನೆಯಲ್ಲಿ
ಆವರಿಸುವುದು.
ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡರೆ ಮಗನಿಗೆ ಮನೆ ನಡೆಸಿಕೊಂಡು
ಹೋಗುವ ಚಿಂತೆ. ಹಣಕಾಸಿನ ವಿಷಯದಲ್ಲಿ ಅನುಕೂಲವಿದ್ದು ತಂದೆ ಎಲ್ಲಾ ಜವಾಬ್ದಾರಿ ಮುಗಿಸಿದ್ದರೆ ತಕ್ಕ
ಮಟ್ಟಿಗೆ ಜೀವನ ಸುಗಮವಾಗುವುದು. ಅದೇ ಏನಾದರು ಅಕ್ಕ-ತಂಗಿಯರ ಜವಾಬ್ದಾರಿ, ಮನೆ ಮೇಲೆ ಸಾಲ, ಎಲ್ಲಾ
ಇವನ ತಲೆಗೆ ಬಂದರೆ ಒಮ್ಮೆಲೆ ಕಂಗಾಲಾಗುವುದು ಖಚಿತ.
ಇಳಿ ವಯಸ್ಸಿನಲ್ಲಿ ವಿದುರನ ಬಾಳು ಇನ್ನು ಕಷ್ಟ. ಯಾವಾಗಲು ಜೊತೆಯಾಗಿದ್ದ
ಹೆಂಡತಿ ತನ್ನ ಬೇಕು-ಬೇಡಗಳನ್ನು ವಿಚಾರಿಸಿಕೊಳ್ಳಿತ್ತಿದ್ದವಳು, ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದವಳು,
ಇನ್ನು ಇಲ್ಲ ಎಂದಾದರೆ ಒಮ್ಮೆಲೆ ಮುಸ್ಸಂಜೆ ಕಗ್ಗತ್ತಲಾಗುತ್ತದೆ.
ಗಂಡ ಸತ್ತ ಮೇಲೆ ವಿಧುವೆಯ ಬಾಳು ಇನ್ನೊಂದು ರೀತಿ. ಹುಟ್ಟಿದಾಗಿನಿಂದಲು
ಹಚ್ಚಿಕೊಳ್ಳುವ ಕುಂಕುಮ ಕೊಡುವಾಗಲು ಮೀನಾ-ಮೇಷ ನೋಡುವರು. ಮಕ್ಕಳು ಕೈಗೆ ಬಂದರೆ ಸರಿ. ಇಲ್ಲ ಅಂದರೆ
ಜೀವನ ಕಷ್ಟವೆ. ಸಮಾಜ ಆ ಹೆಣ್ಣನ್ನು ನೋಡುವ ದೃಷ್ಟಿಯೆ ಬೇರೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಗಟ್ಟಿ ಇದ್ದು, ತವರು ಮನೆ
ಮತ್ತು ಗಂಡನ ಮನೆಯ ಬೆಂಬಲ ಇದ್ದರೆ ಸರಿ. ಗಂಡನ ಮನೆಯಲ್ಲಿ ಅವಳ ಕಾಲ್ಗುಣ ಸರಿ ಇಲ್ಲ ಎಂದು, ತವರು
ಮನೆಯಲ್ಲಿ ಅಣ್ಣ-ತಮ್ಮಂದಿರು ಕೈ ಬಿಟ್ಟರೆ ಜೀವನ ಕಷ್ಟವೆ.
ಸಾವು ಯಾವಾಗ, ಹೇಗೆ ಎಂದು ಹೇಳಲಾಗುವುದಿಲ್ಲ. ಬಂದದ್ದನ್ನು ಎದುರಿಸುವ
ದೃಡ ಮನಸ್ಸು ಇರಬೇಕು. ಯಾಕೋ ಮೊನ್ನೆ ಊರಿಗೆ ಹೋದಗ ನನ್ನ ಸೋದರ ಮಾವ ಸತ್ತಾಗ ಪುರೋಹಿತರು ಹೇಳಿದ ಪ್ರವಚನ
ತುಂಬಾ ಮನಸ್ಸಿಗೆ ನಾಟಿತು. ಆಗ ಸಾವಿನ ಬಗ್ಗೆ ಏನೇನೋ ಯೋಚನೆ ನನ್ನ ತಲೆಯಲ್ಲಿ ಬಂತು. ಮೊದಲ ಹನ್ನೇರಡು
ದಿನ ಇರೋ ವಾತಾವರಣಕ್ಕು, ನಂತರದ ದಿನಕ್ಕು ತುಂಬಾ ವ್ಯತ್ಯಾಸ. ಮನೆ ಬಿಕೋ ಅನ್ನುವುದು ನಂತರದ ದಿನದಲ್ಲಿ.
No comments:
Post a Comment