Friday, September 14, 2018

ಎರಡು ಹಿರಿಯ ಜೀವಿಗಳು ತಂಮ್ಮ ತಂಮ್ಮ ಕಾಲಕ್ಕೆ ಹೊಲಿಸಿ ಮಾಡುವ ಹಾಸ್ಯಮಯ ಸಂಭಾಷಣೆ. (ಹವ್ಯಕ ಭಾಷೆಯಲ್ಲಿ).


ಸಂದರ್ಭಃ ಎರಡು ಹಿರಿಯ ಜೀವಿಗಳು ತಂಮ್ಮ ತಂಮ್ಮ ಕಾಲಕ್ಕೆ ಹೊಲಿಸಿ  ಮಾಡುವ ಹಾಸ್ಯಮಯ ಸಂಭಾಷಣೆ. (ಹವ್ಯಕ ಭಾಷೆಯಲ್ಲಿ).

ಅಜ್ಜಿಃ
ಅರೆ, ಪುರಾಣಿಕ್ರು…ಬನ್ನಿ. ರಾಶಿ ದಿನ ಆಗೋತು. ಬಾರಿ ಅಪರೂಪ ಬನ್ನಿ. ಒಳಗೆ ಬನ್ನಿ. ಕುತ್ಗಳಿ.

ಪುರಾಣಿಕರುಃ
ಎಂತ ಅಪರೂಪನೆ ಈಗ್ ಒಂದ್ ಎರಡು ವರ್ಷದ್ ಹಿಂದ್ ಬಂದ್ ನೆನ್ಪು. ಕಡಿಗ..ಎಲ್ಲಾ ಆರಾಂ ಇದ್ರ. ಎಂತ ಮನೆ ಬಿಕೋ ಅನ್ಸತು? ಯಾರು ಇಲ್ಯ ಎಂತು?

ಅಜ್ಜಿಃ
ಯಾರು ಇಲ್ದ್ರ. ಮಗ ಸೊಸೆ ಮೊಮ್ಮಗ ಎಲ್ಲಾ ಪ್ಯಾಟಿಗೆ ಹೋಜ. ಅಷ್ಟ ಅಷ್ಟ ದಿನಕ್ಕೆ ಹೋಪದೆಯ? ಎಂತದ್ರು ಕೆಲ್ಸ ನೆನ್ಪ ಆಗೋಗ್ತು.

ಪುರಾಣಿಕರುಃ
ಹೊಗ್ಲಿ ಬಿಡು.  ಅವ್ಕು ಎಂತಾದ್ರು ಕೆಲ್ಸಾ ಇರ್ತಪಾ…ಅದಿಕ್ಕಲಾ ಎಂತ ಹೇಳಲ್  ಬತ್ತ?

ಅಜ್ಜಿಃ
ಎಂತಾ ಕೆಲ್ಸನ ಯಾರಿಗ್ ಗೊತ್ತಿದ್ದ್ರ. ಒಟ್ಟು ಪ್ಯಾಟಿಗ್ ಹೋಗಲ್ ಒಂದ್ ನೆವ ಬೇಕು. ಮೊದ್ಲಾದ್ರೆ ಆ ಸುಡ್ಗಾಡ್  ಚುಡಿದಾರಕ್ಕೆ ಒಂದ್ ಸೆರಗ್ ಆದ್ರು ಇತ್ತು. ಅದ್ರ ಹಾಕ್ಯಂಡು ಹೋಗ್ತಿತ್ತು. ಈಗ್ ಅದು ಇಲ್ಲೆ. ಮೈಗ್  ಅಂಟ ಪ್ಯಾಂಟ್  ಹಾಕ್ಯಂಡು  ಅದ್ರ ಮೇಲ್ ಒಂದ್ ದೊಗ್ಲ್ ಬಾಜಿ ಅಂಗಿ ಹಾಕ್ಯಂಡು ಹೋಗ್ತು. ಎಂತ ಮಾತಾಡ ಆಟನೆ ಇಲ್ಲೆ. 

ಪುರಾಣಿಕರುಃ
ನೀನ್ ಎಂತ ಹೇಳಲು ಹೋಗಡ. ನಮ್ಮನೆ ಸೊಸೆ ಅಂತು ಬಾಂಬೆಯಿಂದ ಬಂತು ಅಂದ್ರೆ ಸಾಕು..ಅರ್ಧಂಬರ್ಧ ಮೊಳ್ಕಾಲ್ ತನಕ ಬರ ಪ್ಯಾಂಟ್ ಹಾಕ್ಯಂಡು ಸಮುದ್ರಕ್ಕೆ ಹೋಗ್ತು. ಮಾಬಲೇಶ್ವರನ ಗುಡಿ ಮುಂದೆ ಹೋಗವು. ಅಂಗದ್ರೆ ಯಾರಾದ್ರು ಎಂತಾದ್ರು ಹೇಳ್ತಾ ಹೇಳು  ಗೊತ್ತಾಗ್ತಿಲ್ಯ್?  ನಮ್ಮನೆ ಸೈತ್ರಿ ಹ್ಯಾಂಗ್ ಇತ್ತು. ಅದ್ರ ಸೊಸೆ ಹೇಳದೆ ಸುಳ್ಳು.

ಅಜ್ಜಿಃ
ಗೊತ್ತಿದ್ರ. ಸೈತ್ರಕ್ಕ  ಟೋಪಿ ಶೇರಗಿನ ಸೀರೆ ಉಟ್ಟಗಂಬದೆಯ ಕಣ್ಣಿಗ್ ಕಾಣ್ತು. ಪುಣ್ಯಾತ್ಗಿತ್ತಿ…ಮುತೈದೆ ತನದಲ್ಲೆ ಸತ್ಗಣ್ತು.  ಮೊದ್ಲು ಹೊದವೆಯಾ ಪುಣ್ಯಾತ್ಮದಿಂಕ್ಕ.  ನನ್ನು ಅವ್ ಹೋಪಕಿದ್ರೆ ಕರ್ಕಂಡು ಹೋದ್ರೆ ಬತ್ತಿತ್ತು. ಯಾಕಾದ್ರು ಇನ್ನು ಇದ್ನನ?

ಪುರಾಣಿಕರುಃ
ಎಂತಾ ಹೋಪ ಸುದ್ದಿ ಹೇಳ್ತೆ. ನೀನ್ ಇದ್ದಿದ್ದು ಹೆಚ್ಚು ಹೇಳಿ ಯಾರ್ ಹೇಳಿದ್ದ್…ಹಾಂಗಲ್ಲ ನಾವ್ ತಿಳ್ಕಂಬಲಾಗ. ಇಗ್ನವು ಇಗಿನ್ ಕಾಲಕ್ಕೆ ಸರಿಯಾಗ್ ಎಂತಾದ್ರು ಮಾಡ್ತ್ವಪಾ…ನಾವ್ ಸುಮ್ಮಂಗ್ ಇರವು ಅಷ್ಟೇಯಾ…

ಅಜ್ಜಿಃ
ಅಯ್ಯ…ಎಷ್ಟ್ ಸುಮ್ಮಂಗೆ ಇದ್ರುವಾ ಹೇಳ್ಸ್ಯಂಗೆಂಬದು ಬಿಡದಲ್ಲ.  ಮೊನ್ನೆ ಅದ್ ಎಂತ  ತಂಪಾಗ ಕಪಾಟ ಇದ್ದಲಿ ಪಿಜ್ (ಪ್ರಿಡ್ಜ್) ಅಲ್ಲಿ ಕಡ್ದ ಮಜ್ಜಿಗೆ ಇಡು ಅಂತು ನಾನು  ಅದ್ರ ಪಿಜ್ ನಲ್ಲಿ ಇಟ್ಟಿ.  ಅದ್ ಹಾಳಾಗಿದ್ ಬೆಳ್ಗಾಗತಂಕ  ಕಲ್ಲ್ ಗಟ್ಟಿ ಆಗೋಗವ. ಅದಿಕ್ಕೆ ಸಾಮನೆ ರಂಪಾ ಮಾಡಿದ್ದಿಲ್ಲೆ. ನನ್ಗೆಂತ ಗೊತ್ತಿದ್ದು ಆ ಪೆಟ್ಟಿಗೆಗೆ ಎರಡು ಬಾಗಿಲಿರ್ತ್ತು ಯಾವ್ ಬಾಗ್ಲಲ್ಲಿ ಇಡವು ಹೇಳಿ. ಎಂತು ಹೇಳ್ ಕೇಳಿ ಗೊತ್ತಿಲ್ಲೆ. ಶಿಟ್ ಒಂದ್ ಮಾಡ್ತು. ನಮ್ಮನೆ ಮಾಣಿಗೆ ವಾಣಿ ಹೇಳಿದ್ದೆ. ಮೊದ್ಲಿಂದ ಮಾಡ್ಕೇಂಡು ಬಂದಿದ್ದೆ ಸುಳ್ಳನ ಕಾಣ್ಸತು.

ಪುರಾಣಿಕರುಃ
ಎಂತಕ್  ಹಾಂಗ್ ತೆಳ್ಕತ್ತೆ. ನೀನ್ ಹ್ಯಾಂಗ್ ಮಾಡ್ಕೇಂಡು ಬಂಜೆ ಹೇಳಿ ನಂಗ್ ಗೊತ್ತಿಲ್ಯನೆ.  ಒಂದ್ ಒಂದ್ ಸಲ ಹಾಂಗಾಗ್ತು. ನೀನ್ ಅದ್ನಲ್ಲ ಮನ್ಸಿಗೆ ಹಚ್ಚಗಳಡ. ಇಗ್ನವ್ಕೆ ನಾವ್ ಮಾಡಿದ್ ಕೆಲಸ ಸರಿ ಬತ್ತಿಲ್ಲೆ. ನಮ್ಮನೆ ಮಗನು ಬೈತಾ…ಸಂಭಾವನೆ ತಗಂಬಲೆ ಗಟ್ಟದ್ ಮೇಲ್ ಹೋಗಡ ಹೇಳಿ, ಆದ್ರೆ ಎಂತ ಮಾಡವು ಮೊದ್ಲಿಂದನು ಬಂದ್ ರೂಡಿ. ಪ್ರಸಾದ ಕೊಡಲು  ಕ್ಷೇತ್ರ ಪುರಾಣಿಕರು ಬಂಜ್ರಿಲ್ಲೆ ಹೇಳಿ ಕಾಣ್ಸತ್ತಿಲ್ಯ. ಹಳೆ ರೂಡಿಗೆ ಬಪ್ಪದು.

ಅಜ್ಜಿಃ
ಅಯ್ಯ…ಬಪ್ಪದೆಯ. ನಂಗಕ್ಕಂತು ಮಾಬಲೇಶ್ವರನ ಗೂಡಿಗೆ ಬಪ್ಪಲೆ ಆಗ್ತಿಲ್ಲೆ. ನೀವಾದ್ರು ಪ್ರಸಾದ ತಂದ್ ಕೊಡ್ತತ್ರಲಿ ಅಷ್ಟೇ ಸಾಕು. ನಮ್ಮನೆ ಅವು ಇದ್ದಾಗ ಪೂಜೆ ಮಾಡ್ಸತ್ತಿದ್ಯ. ಈಗ್ ಎಂತು ಇಲ್ಲೆ. ಎಲ್ಲಾ ಅವ್ರ ಹಿಂದೆ ಹೋಗೋತು.

ಪುರಾಣಿಕರುಃ
ಹೋಗ್ಲಿ ಬಿಡು ನೀನು ಅದ್ರನ್ನಲ್ಲಾ ಮನ್ಸಿಗೆ ಹಚ್ಚಗಳಡ….ನಾನ್ ಗಟ್ಟಿ ಇರತನಕ ಬತ್ತಿ . ಕಡಿಗ್ ಮುಂದ್ ನವು ಹ್ಯಾಂಗ ಏನ?

ಅಜ್ಜಿಃ
ಅದು ಹೌದು ಬಿಡಿ…ಅಯ್ಯ ನನ್ನ ತಲೆ ನೋಡಿ…ನೀವ್ ಬಂದಾಗ್ಲಿಂದ ಕಥೆ ಹೇಳದ್ ಒಂದ್ ಮಾಡ್ದಿ ಬಿಟ್ರೆ ಒಂದ್ ಆಸ್ರಿಗೆ ಕೇಳಿದ್ನ? ನೀವ್ ಎಂತ ತಂಪಾಗ ಬಿಶಿಯಾಗ ಎಂತ ಕುಡಿತ್ರಿ?  ಎಂತ ಮಾಡವು?  ಬಿಡಿಯ ಮಾಡ್ಕೆಳಡಿ?

ಪುರಾಣಿಕರುಃ
ನನ್ಗೆಂತ ನಿಮ್ಮನೆಲಿ ಬಿಡಿಯನನೆ.  ಈಗ್ ಎಂತ ಬ್ಯಾಡ್ದೆ. ಕಾಲಿಗ್ ನೀರ್ ಹಾಕ್ಯಂಡು ಬತ್ತಿ. ಸಂದ್ಯಾವಂದನೆ ಮಾಡ್ಕೆಂಡು ತುತ್ತು ಮಜ್ಜಿಗೆ ಅನ್ನ ಉಟ ಮಾಡಿದ್ರೆ ಆತು.ಮದ್ಯಾನ್ನ ವಿಷೇಶದ ಊಟ ಆಗಿತ್ತು ಹಶಿವೆ ಇಲ್ಲೆ.

ಅಜ್ಜಿಃ
ಅದಿಕ್ಕೆಂತು ವಾಣಿ ಪದಾರ್ಥ ಮಾಡಿಟ್ಟಿಕ್ಕೆ ಹೋಜು. ಒಂದ್ ತುತ್ತು ಅನ್ನಕ್ಕೆ ಇಟ್ರಾತು. ಅವು ಪ್ಯಾಟಿಗ್ ಹೋದ್ರೆ ಅದ್ ಎಂತೋ ಪುರಿ ನ ಪಾನಿ ನ ತಿನ್ಕಂಡು ಬತ್ತ. ಅವು ನನ್ ಹತ್ರ ಹೇಳ್ತ್ವಿಲ್ಲೆ. ಅವ್ ಅವ್ವೇ ಮಾತಾಡ್ಕೇತ್ತಾ. ನಮ್ಮನೆ ಮೊಮ್ಮಗ ಹೇಳ್ತ. ಅದಿಕ್ ನನ್ಗೆ ಗೊತ್ತಾತು.

ಪುರಾಣಿಕರುಃ
ಅದ್ ನನ್ಗೆ ಗೊತ್ತಿದ್ದೆ. ಅದು ಪಾನಿ ಪುರಿ ಹೇಳಿ. ನಾನ್ ಈ ಸಲ ಬಾಂಬೆ ಗೆ ಹೋದಾಗ ನನ್ನ ಮಗ ಕರ್ಕಂಡು ಹೋಗಿದ್ದ. ಒಂದ್ ನಮ್ನಿ ಹುಳಿ ಶಿಯೆ ಆಗ್ತು. ಗೊಕರ್ಣ ಸಮುದ್ರ ದ ಹತ್ತ್ರನು ಬತ್ತೆ. ನಾನ್ ತಿಂಬಲೆ ಹೋಜ್ ನಿಲ್ಲೆ. ಬಾಂಬೆಗ್ ಹೋದಾಗ್ ಮಗನ್ ಒತ್ತಾಯಕ್ಕೆ ತಿಂಜಿ.

ಅಜ್ಜಿಃ
ಎಂತ ನನ್ಗಂತು ಅದ್ರ ಗಂಧ್ ಗಾಳಿ ಇಲ್ಲೆ. ನನ್ನ ಹಲ್ಲು ಹರಿತಿಲ್ಲೆ. ಅವು ನನ್ನ ಎಲ್ಲಿಗೂ ಕರಿತ್ವಿಲ್ಲೆ.  ಮನೆಲಿ ಒಂದ್ ಮೂಲೆಲಿ ಶಿವಾ…ಶಿವಾ ಹೇಳಿ ಕುತ್ಗತ್ತಿ. 

ಪುರಾಣಿಕರುಃ
ತಡಿಯೇ..ನನ್ಗೆ ಸಂದ್ಯಾವಂದನಿಗೆ ಹೊತ್ ಆಗೋತು. ಕಾಲ್ ಕೈ ತೊಳ್ಕಂಡು ದೇವ್ರ ಮುಂದೆ ಹೋಗ್ತಿ.

ಅಜ್ಜಿಃ
ಅಕ್ಕ್ರ. ಇವ್ ಎಷ್ಟೋತ್ತಿಗೆ ಬತ್ವನ. ನಾನ್ ಅನ್ನಕ್ಕೆ ಇಡ್ತಿ. ಶಿವ್…..ಶಿವಾ……






No comments: