ಥ್ರಿಲ್ಲರ್ ಕಥೆಗಳು
1 1. ಅವಸರದಲ್ಲಿ ಮಾವಿನ ಮರದ ಕೆಳಗೆ ಮಾವಿನ ಹಣ್ಣನ್ನು ಬುಟ್ಟಿಗೆ
ತುಂಬ್ತಾ ಇರೋವಾಗ ಊರಿನ ಸಾವಿತ್ರಕ್ಕ ಬಂದು “ಇದು
ನಿನ್ನ ಒಬ್ಬಳಿಂದ ಆಗೋ ಕೆಲಸ ಅಲ್ಲ ನಾನು ಸಹಾಯ ಮಾಡ್ತೀನಿ”
ಅಂತ ಕೈ ಜೋಡಿಸಿದಳು. ಅಂತು ಇಬ್ಬರಿಂದ ಮಾವಿನ ಹಣ್ಣಿನ ಬುಟ್ಟಿ ತುಂಬಿತು. ಸ್ವಲ್ಪ
ಹಣ್ನನ್ನು ಕೊಡೋಕ್ ಹೋದ್ರೆ, “ ಬೇಡ ನೀನೆ ಮನೆಗೆ ತಗೋಂಡು ಹೋಗು” ಅಂತ ಹೇಳಿದಳು. ಸರಿ ಅಂತ ಖುಶಿಯಿಂದ
ಮನೆಗೆ ಬಂದು ಮಾವಿನ ಹಣ್ಣಿನ ಬುಟ್ಟಿ ಅಮ್ಮನಿಗೆ ತೋರಿಸೋಕ್ ಹೋದೆ. ಆದ್ರೆ
ಅಮ್ಮ ಸಪ್ಪೆ ಮುಖ ಮಾಡಿ, “ಇವತ್ತು ಬೆಳಗಿನ ಜಾವ ನಮ್ಮೂರ ಸಾವಿತ್ರಕ್ಕ ಸತ್ತು ಹೋದ್ರಂತೆ” ಅನ್ನೋ ಉತ್ತರ ಬಂತು. ಕೈಯಲ್ಲಿದ್ದ
ಮಾವಿನ ಬುಟ್ಟಿ ನೋಡಿದೆ, ಎಲ್ಲಾ ಹಣ್ಣುಗಳು ನನ್ನನ್ನೇ ನೋಡಿದಂತೆ ಭಾಸವಾಗಿ ಕೈ ನಡುಗಿತು.
. 2. ನಮ್ಮ
ಮನೆಲಿ ಸಾಕಿದ ಕಪ್ಪು ನಾಯಿ ಎಂದಿನಂತೆ ಸ್ಕೂಲ್ ಬಿಡೊ
ವೆಳೆಗೆ ಅಂಗಡಿ ಬಾಗಿಲಲ್ಲಿ ಸಿಕ್ಕಿತು. ಎಂದಿನಂತೆ ಬಿಸ್ಕತ್ ತಗೊಂಡು ಸ್ವಲ್ಪ ನಾಯಿಗೆ ಹಾಕಿದೆ. ತಿಂದು
ಮೇಲಿನ ರಸ್ತೆಯಲ್ಲಿ ಓಡಿ ಹೋಯಿತು. ಮನೆಗೆ ಬರೋವಷ್ಟರಲ್ಲಿ
ತೋಟದ ಪಕ್ಕದಲ್ಲಿ ಆಳು ಗುಂಡಿ ತೆಗಿತಾ ಇರೋದ್ ನೋಡಿ, “ಇಲ್ಲಿ ಯಾಕ್ ಗುಂಡಿ ತೋಡ್ತಾ ಇದ್ದೀರಾ ಅಂತ
ಕೇಳಿದೆ. ಆಳು ಕಣ್ಣಲ್ಲಿ ನೀರು ತುಂಬಿ “ಏನ್ ಮಾಡೊದ್ ಅಮ್ಮಾ ನೀವ್ ಇವತ್ತು ಆ ಕಡೆ ಸ್ಕೂಲ್ಗೆ ಹೋಗಿದ್ದೆ
ಹೋಗಿದ್ದು ಇಲ್ಲಿ ಹಾಳಾದ್ ಯಾವುದೋ ಒಂದ್ ಹುಚ್ಚು
ನಾಯಿ ಬಂದು ನಮ್ಮನೆ ನಾಯಿಗೆ ಕಚ್ಚಿ ಅದ್ರನ ಸಾಯ್ಸ್ ಬಿಡ್ತು.” ಅವ್ರು ಹೇಳಿದ ಮಾತಿಗೆ ಕೈ ನಲ್ಲಿ
ಇದ್ದ ಮಿಕ್ಕ ಬುಸ್ಕತ್ ಕೈ ಜಾರಿ ಗುಂಡಿಗೆ ಬಿದ್ದು ಕಕ್ಕಾ ಬಿಕ್ಕಿಯಾಗಿ ನಿಂತೆ.
ಉದಯವಾಣಿ ಜೋಶ್ ಪುರವಣಿಗೆಗೆ ಬರೆದ ಲೇಖನ.
No comments:
Post a Comment