ಕುಂಕ್ರಿಯ
ಶಾಪಿಂಗ್
ಈ ಸುಪರ್ ಮಾರ್ಕೆಟ್ ಬಂದ್ ಮೇಲೆ ಶಾಪಿಂಗ್ ಹೋಗೋದು ದೊಡ್ಡ ತಲೆನೋವೆ. ಬೇಕಾಗಿರೋದು
ನಾಲ್ಕು ಐಟಮ್ ಆದರೆ ತೆಗೆದುಕೊಳ್ಳೊದು ಎಂಟ್ ಐಟಮ್. ಗಂಡನ ಜೇಬಿಗೆ ಕತ್ತರಿಯಂತು ಗ್ಯಾರಂಟಿ. ಅದು
ಅಲ್ಲದೆ ಒಂದು ತೆಗೆದುಕೊಂಡರೆ ಒಂದು ಪ್ರೀ, ಡಿಸ್ಕೌಂಟ್ ಸೇಲ್, ಎಲ್ಲಾ ಕಣ್ಣಿಗೆ ಬಿದ್ದರೆ ಹೆಂಗಳೆಯರ
ಮನಸ್ಸು ಆ ಕಡೆ ವಾಲುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಕುಂಕ್ರಿ ಮತ್ತು ಕುಂಕ್ರಿಯ ಅಮ್ಮ ಡಿ- ಮಾರ್ಟ ಗೆ ಹೊರಟರು. ಹೊರಡುವಾಗಲೆ ಕುಂಕ್ರಿಯ ಅಪ್ಪ ಹೇಳಿದರು,
“ ಸುಮ್ಮನೆ ಇರೋದ್-ಬರೋದ್ ಎಲ್ಲಾ ನಿಮ್ಮ ತಳ್ಳೊ ಗಾಡಿಗೆ ತುಂಬಿಸ ಬೇಡಿ. ಡಿಸ್ಕೌಂಟ್, ಪ್ರೀ ಎಲ್ಲಾ
ಮುನ್ನೂರ ಅರವತ್ತು ದಿನವು ಇರುತ್ತದೆ. ಬೇಕಾಗಿದ್ದು ತನ್ನಿ ಆಮೇಲೆ ಮನೆ ಶಿಫ್ಟ ಮಾಡ್ಬೇಕಿದ್ರೆ ಒದ್ದಾಡೋದು
ಬೇಡ” ಅಂತ ಹೇಳಿದರು. ಇದು ಕುಂಕ್ರಿಯ ಅಮ್ಮನಿಗೆ ಮಾಮುಲ್ ಆಗಿತ್ತು. ಸರಿ ಅಂತ ಹೇಳಿ ಕುಂಕ್ರಿ ಮತ್ತು
ಅಮ್ಮ ಡಿ-ಮಾರ್ಟಗೆ ಬಂದರು. ಯಥಾ ಪ್ರಕಾರ
ತಳ್ಳೊ ಗಾಡಿ ತಗೆದುಕೊಂಡು ಒಂದು ರೌಂಡ್ ಹಾಕಿದ್ದೆ ಎಲ್ಲಿ ನೋಡಿದರು ಡಿಸ್ಕೌಂಟ್ ಸೇಲ್ ಮತ್ತು ಕಣ್ಣಿಗೆ
ಕುಕ್ಕುವಂತ ಕಿಚನ್ ಐಟಮ್ ಗಳು. ಬೇಡ-ಬೇಡವೆಂದರು ಗಾಡಿಗೆ ಕೆಲವು ಐಟಮ್ ಗಳು ಬಿದ್ದವು.
ಕುಂಕ್ರಿ ತನ್ನ ಪಾಡಿಗೆ ಯಾವುದೊ ಪೆನ್ನು,ಕಲರ್ ಪೆನ್ಸಿಲ್ ನೋಡುವುದರಲ್ಲಿ
ಇದ್ದಳು. ಎಲ್ಲಾ ಐಟಮ್ ತೆಗೆದುಕೊಂಡು ಬಿಲ್ಲಿಂಗ್ ಕೌಂಟರ್ ಗೆ ಬಂದಾಗ ಕುಂಕ್ರಿ ಅಮ್ಮ ತೆಗೆದುಕೊಂಡ
ಬಕೆಟ್ ಕೆಲವು ಡಬ್ಬಗಳನ್ನು ನೋಡಿದಳು. ಆಗ ಅಮ್ಮನಲ್ಲಿ ಪ್ರಶ್ನಿಸಿದಳು, “ಯಾಕಮ್ಮ ನಮ್ಮನೆಲಿ ಬಕೆಟ್
ಮತ್ತು ಡಬ್ಬಗಳೆಲ್ಲ ಇವೆ. ಆದ್ರು ಯಾಕೆ ತಗೊಂಡೆ” ಅಂತ ಕೇಳಿದಳು. ಆಗ ಅಮ್ಮ, “ಸುಮ್ಮನಿರು ನಿಮ್ಮ
ಅಪ್ಪನ ತರನೆ ಆಡಬೇಡ. ಬಕೆಟ್ ಎಲ್ಲಾ ಕಳೆತಾಗಿವೆ. ಇನ್ನು ಡಬ್ಬಗಳು ಗೌರಿ ಹಬ್ಬದ ಸಮಯದಲ್ಲಿ ಎಷ್ಟೇಲ್ಲಾ
ತಿಂಡಿ ಮಾಡ್ತೀವಿ. ಆಗ ಎಷ್ಟಿದ್ದರು ಡಬ್ಬಗಳು ಬೇಕೆ
ಬೇಕು. ಅದು ಅಲ್ಲದೆ ಒಳ್ಳೆ ಸೇಲ್ ಇದೆ. ನೀನು ಸುಮ್ಮನಿರು. ಇದೆಲ್ಲಾ ನಿನ್ನ ಅಪ್ಪ ನ ಹತ್ತಿರ ಹೇಳೊಕ್
ಹೋಗ್ಬೇಡ” ಅಂತ ಹೇಳಿದರು. ಆಗ ಕುಂಕ್ರಿ ಅಮ್ಮನನ್ನೆ ಪ್ರಶ್ನಿಸಿದಳು, “ಎನಮ್ಮ ನನ್ನ ಹತ್ತಿರ ಹೈಡ್
ಮಾಡಬೇಡ ಏನಿದ್ದರು ಅಪ್ಪ-ಅಮ್ಮನ ಹತ್ತಿರ ಹೇಳು ಅಂತ ಹೇಳ್ತಿಯಾ? ಈಗ ನೀನೆ ನನ್ನ ಹತ್ತಿರ ಅಪ್ಪನ ಹತ್ತಿರ
ಹೇಳಬೇಡ ಅಂತ ಹೇಳ್ತಿಯಾ? ಇದು ಸರಿನಾ? ನೀನು ಯಾವಾಗಲು
ಅಪ್ಪ ಹೇಳಿದ್ದನ್ನು ಕೇಳು ಅಂತ ಹೇಳಿ ನೀನೆ ಅಪ್ಪ ಹೇಳಿದ್ದು ಕೇಳದೆ ಎಲ್ಲಾ ತಗೊಳ್ತಾ ಇದೀಯಾ?”
ಅಂತ ಹೇಳಿದಳು. ಮಗಳ ಮಾತಿಗೆ ಕುಂಕ್ರಿಯ ಅಮ್ಮ ಪೆಚ್ಚಾದಳು. ಮಕ್ಕಳಿಗೆ ಅಡ್ವೈಸ್ ಮಾಡೋದು ಸುಲಭ ಆದರೆ
ನಾವ್ ಪಾಲಿಸೋದು ಕಷ್ಟ ಅಂತ ಅಂದುಕೊಂಡಳು. ಅವಳು ಯೋಚಿಸುತ್ತಿರವಾಗ ಕುಂಕ್ರಿ ಗಾಡಿಯಲ್ಲಿ ಇದ್ದ ಬಕೆಟ್ ಮತ್ತು ಡಬ್ಬಗಳನ್ನೆಲ್ಲ ಅಲ್ಲೆ
ಆಚೆ ತೆಗೆದಿಟ್ಟು ಬಂದಳು. ಹಾಗೆ ಬಿಲ್ ಕೌಂಟರ್ ಗೆ ಬಂದು ಹೇಳಿದಳು,” ಅಮ್ಮ ಅಪ್ಪ ಹೇಳಿದ ಹಾಗೆ ಬೇಕಾಗಿದ್ದಷ್ಟೆ
ಇದೆ. ಈ ಸೇಲ್ ಯಾವಾಗಲು ಇರತ್ತೆ. ನಾನು ಸ್ಕೂಲ್ ಗೆ ಹೋಗುವಾಗ ಯಾವಾಗಲು ಬೋರ್ಡ್ ನೋಡ್ತಾ ಇರ್ತೀನಿ.
ಬೇಕಾದಾಗ ಪುನಃ ಇಲ್ಲಿಗೆ ಬಂದರಾಯಿತು” ಅಂತ ಹೇಳಿದಳು.
ಕುಂಕ್ರಿಯ ಮಾತಿಗೆ ಮರು ಮಾತಾಡದೆ ತೆಪ್ಪಗೆ ಬಿಲ್ ಮಾಡಿಸಿದಳು ಕುಂಕ್ರಿಯ ಅಮ್ಮ.
No comments:
Post a Comment