ಇಂದಿನ ಟ್ರಾಫಿಕ್ ನಲ್ಲಿ…
ನಮ್ಮನೆ ಹತ್ತಿರದ ರಿಂಗ್ ರೋಡ್ಗೆ ವೈಟ ಟಾಪಿಂಗ್ ಮಾಡುತ್ತಿರುವ ಕಾರಣ ಪಕ್ಕದ
ಸರ್ವಿಸ್ ರೋಡ್ ಫುಲ್ ರಶ್ ಆಗಿರತ್ತೆ. ಅದರಲ್ಲು ಬೆಳಿಗ್ಗೆ ಎಲ್ಲರಿಗೂ ಅವಸರ ಸ್ವಲ್ಪ ಜಾಸ್ತಿನೆ.
ಸ್ಕೂಲ್ ಗೆ ಲೇಟ್ ಆಗತ್ತೆ, ಆಫೀಸ್ಗೆ ಲೇಟ್ ಆಗತ್ತೆ ಅಂತ ವಾಹನಗಳನ್ನು ಎಲ್ಲಿ ಅಂದರೆ ಅಲ್ಲಿ ನುಗ್ಗಿಸುವವರೆ.
ಇಂದು ಮಗಳನ್ನು ಸ್ಕೂಲ್ಗೆ ಬಿಡಲು ಹೋಗುತ್ತಿದ್ದೆ. ಅದು ಏನೋ ಒಂದೇ ಸಲ ದಿನದಕ್ಕಿಂತ ಸ್ವಲ್ಪ ಜಾಸ್ತಿನೆ ವಾಹನಗಳು
ಸೇರಿ ಜಾಮ್ ಆದವು. ನೆಟ್ಟಗೆ ಟ್ರಾಪಿಕ್ ರೂಲ್ಸ್ ಪಾಲಿಸಿದರೆ ಇಷ್ಟು ಆಗುತ್ತಿಲ್ಲವೋ ಏನೋ. ಆದರೆ ಅವಸರದಲ್ಲಿ
ನುಗ್ಗುವವರೆ. ಇದರ ಮದ್ಯೆ ಹಿಂದಿನಿಂದ ಒಂದು ಆಂಬ್ಯುಲೆನ್ಸ್ ಒಂದೆ ಸಮನೆ ಹೊಡೆದುಕೊಳ್ಳುತ್ತಿತ್ತು.
ಆದರೆ ಎಲ್ಲರಿಗೂ ತಮ್ಮ-ತಮ್ಮ ಕೆಲಸದ ಬಗ್ಗೆ ಚಿಂತೆ ಮತ್ತು ಸ್ಕೂಲ್ ಗೆ ಲೇಟ್ ಆದರೆ ಗೇಟ್ ಹಾಕುತ್ತಾರೆ ಮತ್ತು ಆಫೀಸ್ ಗೆ ಲೇಟ್
ಆದರೆ ಒಂದು ದಿನದ ಸಂಬಳ ಕಟ್ ಮಾಡುತ್ತಾರೆ ಎಂದು ಯೋಚಿಸುತ್ತಾರೆಯೆ
ಹೊರತು ಆಂಬ್ಯುಲೆನ್ಸ್ ನಲ್ಲಿ ಒಂದು ಜೀವಕ್ಕೆ ತುಂಬಾ ಕಡಿಮೆ ಸಮಯ ಇರುವುದು ಮತ್ತು ಹಾಸ್ಪಿಟಲ್ ಗೆ
ಆದಷ್ಟು ಬೇಗ ಹೋಗದೆ ಇದ್ದರೆ ಆ ಜೀವ ಇನ್ನೆಲ್ಲಿಗೊ ಶಾಶ್ವತವಾಗಿ ಹೋಗಬೇಕಾಗುತ್ತದೆ ಅನ್ನುವ ಪರಿಕಲ್ಪನೆ ಇರುವುದಿಲ್ಲ.
ಇಂದಿನ ಟ್ರಾಫಿಕ್ ಜಾಮ್ ನಲ್ಲಿ ಆ ಆಂಬ್ಯುಲೆನ್ಸ್ ಗೆ ಸಾರ್ವಜನಿಕರು ಸ್ವಲ್ಪ
ಸಹಕರಿಸಿದರೆ ಒಂದು ಲೈನ್ ಬಿಟ್ಟು ಕೊಡಬಹುದಿತ್ತು. ಅಲ್ಲಿಂದ ಐದು ನಿಮಿಷಕ್ಕೆ ಅಪೋಲೊ ಹಾಸ್ಪಿಟಲ್.
ಆದರೆ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಆಬ್ಯುಲೆನ್ಸ್
ನ ಮುಂದೆ ಕುಳಿತಿರುವ ರೋಗಿಯ ಸಂಭಂದಿಯೆ ಇಳಿದು ಬೇಡಿಕೊಂಡ. ಮುಖದಲ್ಲಿ ದುಖಃ ಮತ್ತು ಭಯ ಎದ್ದು
ಕಾಣುತ್ತಿತ್ತು. ಅಕ್ಷರಶಃ ಬೈಕಿನವರ ಹತ್ತಿರ ಬೇಡಿಕೊಂಡು ಆತನೆ ಹೇಗೋ ಸಿಗ್ನಲ್ ದಾಟಿಸಿದ. ಅದೇ ಸಾರ್ವಜನಿಕರು ತಿಳಿದು ಮಾಡಿದಿದ್ದರೆ
ಇನ್ನು ಒಂದು ಹತ್ತು ನಿಮಿಷ ಬೇಗ ಹೋಗುತ್ತಿದ್ದನೋ. ಅವರಿಗೆ ಒಂದೊಂದು ನಿಮಿಷವು ಅತಿ ಮುಖ್ಯ. ಸ್ವಲ್ಪ
ತಡವಾಗಿ ಸ್ಕೂಲ್ ಮತ್ತು ಆಫೀಸಿಗೆ ಹೋದರೆ ಮರುದಿನ ಸರಿ ಪಡಿಸಿಕೊಳ್ಳಬಹುದು. ಇಲ್ಲವೇ ಸ್ವಲ್ಪ ಜಾಸ್ತಿ
ಸಮಯ ಆಫೀಸಿನಲ್ಲಿ ಕುಳಿತು ಕೆಲಸ ಮುಗಿಸಿ ಬರಬಹುದು. ಆದರೆ ಹೋದ ಜೀವ ವಾಪಸ್ ತರುವುದು ಆಗದ ಮಾತು.
ಒಂದು ಅರ್ದ ಗಂಟೆ ಮುಂಚೆ ಕರೆದು ತಂದಿದ್ದರೆ ಅನ್ನೋ
ಮಾತು ಕೇಳುವುದಕ್ಕಿಂತ ಆಂಬ್ಯುಲೆನ್ಸ್ ಗೆ ಆದಷ್ಟು
ಜಾಗ ಬಿಟ್ಟು ಸಹಕರಿಸುವುದು ಲೇಸು.
No comments:
Post a Comment