ಮಗಳ
ಡೇ ಔಟ್…
ಮೊದ್ಲಿನಿಂದನು ಮೈಸೂರು ಅಂದ್ರೆ ಯಾಕೋ ಒಂದ್ ಚೂರ್ ಪ್ರೀತಿ ಜಾಸ್ತಿನೆ.
ಚಿಕ್ಕ ವಯಸ್ಸಿನಲ್ಲಿ ಚೀಟಿನಲ್ಲಿ ಊರು,ಹೆಸರು,ತಿಂಡಿ,ಇನ್ನೊಂದು ಮರೆತು ಹೋಗಿದೆ. ಈ ಆಟ ಆಡ್ಬೇಕಿದ್ರೆ
ಊರು ಜಾಗದಲ್ಲಿ “ಮ” ಅಕ್ಷರ ಬಂದರೆ ಮೊದಲು ಬರೆಯುವುದು ಮೈಸೂರ್ ಆಗಿತ್ತು. ನಮ್ಮೂರಿನಿಂದ ಮೈಸೂರ್
ಸ್ವಲ್ಪ ದೂರ ಆಗಿತ್ತು. ನಮ್ಮೂರಿನವರಿಗೆ ಮೈಸೂರು ಅಂದರೆ ಏನೋ ಒಂದು ಅದ್ಬುತವಾದ ಕಲ್ಪನೆ. ಮೈಸೂರಿಗೆ
ಹೋಗುವುದು ಅಂದ್ರೆ ಏನೋ ಸಡಗರ. ಒಮ್ಮೆ ಅಪ್ಪ ನಮ್ಮನ್ನ
ಮೈಸೂರಿಗೆ ಕರೆದುಕೊಂಡು ಬಂದಿದ್ದರು. ಅಪ್ಪ-ಅಮ್ಮನ
ಜೊತೆ ಬಂದಿರುವ ಈ ಪ್ರವಾಸ ನನ್ನ ಲೈಫ್ ಲಾಂಗ್ ಎವರ್ ಗ್ರೀನ್ ಟ್ರಿಪ್.
ಮದುವೆ ಆಗಿ ಬೆಂಗಳೂರಿಗೆ ಬಂದ ಮೇಲೆ ತುಂಬಾ ಸಲ ಮೈಸೂರಿಗೆ ಹೋಗಿದ್ದೆ.
ಆದರು ಪ್ರತಿ ಬಾರಿ ಹೋಗುವಾಗಲೂ ಏನೋ ಸಡಗರ. ಮೈಸೂರಿಗೆ ಹೋಗೋ ಸಂದರ್ಭ ಬಂದರೆ ಯಾವಾಗಲು ಇಲ್ಲ ಅನ್ನೋ
ಮಾತೆ ಇಲ್ಲ. ನನ್ನ ಹಾಜರಾತಿ ಇದ್ದೆ ಇರುತ್ತೆ. ಅದ್ ಏನೋ “ನೂಲಿನಂತೆ ಸೀರೆ,ತಾಯಿಯಂತೆ ಮಗಳು” ಅನ್ನೊ
ಗಾದೆ ಇದಿಯಲ್ಲ ಅದು ನನ್ನ ಮಗಳಿಗೆ ಅನ್ವಯಿಸುತ್ತದೆ. ಅವಳಿಗೆ ಮೈಸೂರ್ ಅದು ಟ್ರೇನ್ ನಲ್ಲಿ ಹೋಗೋದು
ಅಂದ್ರೆ ಬಾಳ ಇಷ್ಟ. ಅವಳ ಆಸೆಯ ಪ್ರಕಾರ ಟ್ರೆನ್ ನಲ್ಲಿ ಒನ್ ಡೇ ಟ್ರಿಪ್ ಅಂತ ಪ್ಲಾನ್ ಮಾಡಿದ್ವಿ.
ಟ್ರೆನ್ ಮಗಳ ಆಸೆ ಆದ್ರೆ ನಮ್ಮ ಯಜಮಾನರಿಗೆ ಬೆಂಗಳೂರ್-ಮೈಸೂರ್ ಕಾರ್ ಡ್ರೈವ್ ಮಾಡೋದು ಬೇಡ್ವಾಗಿತ್ತು.
ಲಾಂಗ್ ವೀಕ್ ಎಂಡ್ ಆದ ಕಾರಣ ಮೈಸೂರ್ ರಸ್ತೆಯ ಟ್ರಾಫಿಕ್ ಗೆ ಹೆದರಿದ್ವಿ. ಅದು ಅಲ್ಲದೆ ನಮ್ಮ ಊರಿಗೆ
ಟ್ರೆನ್ ಇಲ್ಲದ ಕಾರಣ ಮಗಳಿಗೆ ಟ್ರೇನ್ ಮೇಲೆ ಹೋಗೋದೆ ಒಂದು ಸಂಭ್ರಮ.
ಬೆಳಗಿನ ಆರು ಗಂಟೆಯ ಟ್ರೇನ್ ಗೆ ಹೊರಟೆವು. ಟ್ರೇನ್ ಕೂಡ ರಶ್ ಇತ್ತು.
ಮೊದಲೆ ರಿಸರ್ವ ಮಾಡಿದ ಕಾರಣ ನಮಗೆ ಕಷ್ಟ ಆಗಲಿಲ್ಲ. ಮೈಸೂರ್ ಟ್ರೇನ್ ನಲ್ಲಿ ಹೆಚ್ಚಾಗಿ ಮದ್ದುರ್
ವಡಾ ಮಾರಲು ಬರುವುದು. ನಾನು ತುಂಬಾ ಸಲ ಮನೆಲಿ ಮಾಡಿದ್ರು ಆ ಲೊಕಲ್ ಮದ್ದೂರ್ ವಡಾ ಟೆಸ್ಟ ಬಂದೆ ಇಲ್ಲ. ನೀವು ಯಾವುದೆ ತಿಂಡಿ
ತಗೊಳಿ ನಿಜವಾದ ರುಚಿ ನೋಡಬೇಕು ಅಂದ್ರೆ ಆ ಊರಲ್ಲೆ ತಿನ್ನಬೇಕು. ಬೇರೆ ಊರಲ್ಲಿ ತಿಂದರೆ ಅಷ್ಟು ರುಚಿ
ಅನಿಸುವುದಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯವೋ ಏನೊ ತಿಳಿದಿಲ್ಲ. ಇದರ ಅನುಭವವಾಗಿದ್ದು ಉತ್ತರ
ಭಾರತದ ತಿಂಡಿ-ತಿನಿಸಿನಲ್ಲಿ. ಅದು ಲಸ್ಸಿ. ನಾವು ಮನೆಲೆ ಮಾಡಲಿ ಅಥವಾ ಆಚೆ ಕಡೆ ಕುಡಿಯಲಿ ಉತ್ತರ
ಭಾರತದ ಕಡೆ ಸಿಗೋ ರುಚಿ ಇಲ್ಲಿ ಸಿಗುವುದಿಲ್ಲ.
ಮದ್ದೂರ್ ವಡಾ ಮತ್ತು ಇಡ್ಲಿ ಬೆಳಗಿನ ಉಪಹಾರಕ್ಕೆ ತಿಂದೆವು. ಇಂದು ಮಗಳ
ಆಸೆಯಂತೆ ಮೈಸೂರಲ್ಲಿ ಓಡಾಡುವುದು ಎಂದು ತಿರ್ಮಾನಿಸಿದೆವು. ಆ ಕಾರಣದಿಂದ ಮೊದಲು ನಮ್ಮ ಆದ್ಯತೆ ಮೈಸೂರ್
ವೄಗಾಲಯ ಆಗಿತ್ತು. ಟ್ರೆನ್ ನಿಂದ ಇಳಿದು ಓಲಾ ಅಟೋದ ಮೇಲೆ ವೄಗಾಲಯಕ್ಕೆ ಹೋದೆವು. ಮೈಸೂರ್ ಕ್ಲೀನ್ ಸಿಟಿ ಎಂದು ಕರೆಯಲ್ಪಟ್ಟಿತು. ಅದು ನಿಜ
ಎಂದು ನನಗೆ ರೈಲ್ವೆ ಸ್ಟೇಶನ್ ನಲ್ಲು ಮತ್ತು ರಸ್ತೆಯ ಮೇಲೆ ಹೋಗುವಾಗ ಅನಿಸಿತು.
ಮೈಸೂರ್ ವೃಗಾಲಯ ಪ್ರವಾಸಿಗರಿಂದ ಗಿಜಿಗುಡುತಿತ್ತು. ನನಗೆ ದಿನವು ಇಷ್ಟೆ
ಜನ ಬರ್ತಾರಾ ಅಂತ ಅನಿಸಿತು. ನಮ್ಮ ಮನೆಯವರ ಹತ್ತಿರ ಹೇಳಿದರೆ,”ನನಗೆನು ಗೊತ್ತು ನಾನ್ ಬಂದಾಗಲ್ಲ
ಜನಕ್ಕೆನು ಬರಗಾಲ ಇಲ್ಲ” ಅಂದ್ರು. ಇವರ ಹತ್ತಿರ ಕೇಳಿ ಏನು ಪ್ರಯೋಜನ ಇಲ್ಲ ಇವರು ನನ್ನಷ್ಟೆ ಬಂದಿದ್ದು
ಅಂತ ಯೋಚಿಸಿ ಅಲ್ಲೆ ಇದ್ದ ಸಿಬ್ಬಂದಿ ಹತ್ತಿರ ಕೇಳಿದೆ. ಆಕೆ ತುಂಬಾ ಖುಷಿಯಿಂದ “ ಅಮ್ಮ ನಮ್ಮ ಮೈಸೂರ್
ಯಾವಾಗ್ಲು ಪ್ರವಾಸಿಗರಿಂದಲೆ ತುಂಬಿರತ್ತೆ. ಅದು ಈ ಝೊ ಕ್ಕಂತು ಯಾವಾಗಲು ಪ್ರವಾಸಿಗರು ಬರ್ತಾ ಇರ್ತಾರೆ.
ಸ್ಕೂಲ್ ಮಕ್ಕಳು ತುಂಬಾ ಬರ್ತಾರೆ” ಅಂತ ಒಂದೆ ಉಸಿರಲ್ಲಿ ಹೇಳಿದಳು.
ಝೊ ಎಲ್ಲರಿಗೂ ಚಿರಪರಿಚಿತ. ಮಗಳು ತನಗೆ ಇಷ್ಟವಾದ ಪ್ರಾಣಿ ಎಲ್ಲ ನೋಡಿ
ಅವಳಿಗೆ ಎಷ್ಟು ಬೇಕೋ ಅಷ್ಟು ಸಮಯ ನೀಡಿದೆವು. ಝೊ ದ ಒಳಗೆ ಒಳ್ಳೆ ಉಪಹಾರ ಗ್ರಹಗಳು ಇದ್ದವು. ಯಾವುದಕ್ಕು
ಕೊರತೆ ಇಲ್ಲ. ಅಲ್ಲಿ ಊಟ ಮುಗಿಸಿ ಅಲ್ಲೆ ಪಕ್ಕದಲ್ಲಿ ಕಾರಂಜಿ ಕೆರೆ ಇತ್ತು. ಅಲ್ಲಿ ಬೊಟಿಂಗ್ ಮಾಡಿ
ಸ್ವಲ್ಪ ಸಮಯ ಕಳೆದು ಬಂದೆವು.
ನಮ್ಮ ಟ್ರೇನ್ ಸಂಜೆ ಎಳು ಗಂಟೆಗೆ ಆದ ಕಾರಣ ಸ್ವಲ್ಪ ಸಮಯ ಇತ್ತು ಅಲ್ಲೆ
ಝೊ ದ ಹೊರಗೆ ಟಾಂಗ ಗಾಡಿ ಇತ್ತು. ಅದು ಮಗಳ ಆಸೆ. ಟಾಂಗ ಗಾಡಿಯಲ್ಲಿ ಹೋಗಬೇಕು ಎಂದು. ಝೊದಿಂದ ಅರಮನೆಗೆ
ಟಾಂಗ ಗಾಡಿಯಲ್ಲಿ ಹೋದೆವು. ಈ ನಡುವೆ ಟಾಂಗ ಗಾಡಿಗಳು ಬೇರೆ ಊರಿನಲ್ಲಿ ಅಷ್ಟಾಗಿ ಇಲ್ಲ. ಮೈಸೂರಿನಲ್ಲಿ
ತುಂಬಾ ಟಾಂಗ ಗಳು ಇವೆ.
ಅರಮನೆಗೆ ಹೋಗಿ ಸಮಯದ ಅನುಸಾರವಾಗಿ ಅರಮನೆಯನ್ನು ಒಂದು ರೌಂಡ್ ನೋಡಿ ಬಂದೆವು.
ಇಂದು ಮಗಳ ಡೇ ಔಟ್. ಅವಳಿಗೆ ಯಾವುದು ಇಷ್ಟವೋ ಅವುಗಳನ್ನು ಮಾತ್ರ ನೋಡಿದೆವು. ಪುನಃ ರೈಲ್ವೆ ಸ್ಟೆಶನ್ಗೆ
ಟಾಂಗದಲ್ಲೆ ಬಂದೆವು. ಸ್ವಲ್ಪ ಹಣ ಜಾಸ್ತಿ ಆದರು ಟಾಂಗದ ಮೇಲೆ ಹೋಗುವುದು ಏನೋ ಒಂದು ಖುಶಿ. ಆದರೆ
ಆ ಕುದುರೆಯ ಪರಿಸ್ಥಿತಿ ನೋಡಿದರೆ ಬೆಸರ ಅಗುವುದು. ಏನ್ ಮಾಡೋದು ಅದು ಅವರ ಹೊಟ್ಟೆ ಪಾಡು.
ಏನೋ ಒಂದು ದಿನದ ಡೇ ಔಟ್ ನನ್ನ ಮತ್ತು ನನ್ನ ಮಗಳ ಇಷ್ಟವಾದ ಊರಿಗೆ ಹೋಗಿ
ಬಂದೆವು. ನಾನು ಜಿರಾಫೆ ನಾ ಕಣ್ಣು ತುಂಬಿಸಿಕೊಂಡು ಬಂದರೆ ಮಗಳು ಹುಲಿ ಮತ್ತು ಕೆಲವು ಪಕ್ಷಿಗಳನ್ನು
ಕಣ್ಣು ತುಂಬಿಕೊಡಳು. ಇನ್ನೊಮ್ಮೆ ಕಾರ್ ಮೇಲೆ ಹೋಗೊದ್ಕಿಂತ ಟ್ರೇನ್ ಮೇಲ್ ಹೋಗಿ ಟಾಂಗಾದ್ ಮೇಲ್ ಓಡಾಡೋದು
ಇಷ್ಟ ಮುಂದಿನ ಬಾರಿಯು ಹೀಗೆ ಮಾಡೋಣ ಅಂತ ಒಂದು ಹೊಸ ಯೋಜನೆ ಹಾಕಿದಳು.
No comments:
Post a Comment