Tuesday, July 3, 2018

ಮಕ್ಕಳ ಟೂತ್ ಫೇರಿ ಕನಸು..


ಸಂದರ್ಭಃ ಮಕ್ಕಳೆಲ್ಲಾ ಸೇರಿ ಆಟ ಆಡ್ತಾ ಇರೋವಾಗ ಅವರ ಟೂತ್ ಫೇರಿ ಕನಸಿನ ಬಗ್ಗೆ ಕೇಳಿಕೊಳ್ಳುತ್ತಾರೆ. ಐದು/ಆರು ಮಕ್ಕಳು ಸೇರಿ ಆಟ ಆಡ್ತಾ ಇರೊದ್ರಿಂದ ಸೀನ್ ಓಪನ್ ಆಗತ್ತೆ. (ಸುಮಾರು ಎರಡು ರಿಂದ ಮೂರನೇ ಕ್ಲಾಸಿನ ಮಕ್ಕಳು)ಹೈಡ್ ಎಂಡ್ ಸೀಕ್ ಆಡ್ತಾ ಇರ್ತಾರೆ. ಹೇಗೋ ಓಡ್ತಾ ಇರೋ ವಾಗ ಒಂದು ಹೆಣ್ಣು ಮಗು ಬಿಳತ್ತೆ. ಕಾಲು ಸ್ವಲ್ಪ ತರಚಿದ ತರ ಆಗತ್ತೆ.
ಬಿದ್ದ ಮಗು ಪ್ರಾರ್ಥನಾಃ(ಅಳ್ತಾ)
ಏಯ್…ಅಮೋಘ್  ಯಾಕೋ ನನ್ನ ಅಷ್ಟು ಜೋರಾಗಿ ಅಟ್ಟಿಸ್ಗೊಂಡು ಬಂದೆ. ನೋಡ್ ಇವಾಗಾ…(ಅಳ್ತಾಳೆ)
ಎಲ್ಲಾ ಮಕ್ಕಳು ಅವಳ ಹತ್ತಿರ ಸುತ್ತು ವರಿತಾರೆ. ಕೆಲವೊಬ್ಬರು ಅವಳನ್ನಾ ಹಿಡ್ಕೊಂಡು ಇರ್ತಾರೆ.  ಕೆಲವೊಬ್ಬರು ಗಾಯಕ್ಕೆ ವೋಫ್ ಅಂತ ಬಾಯಲ್ಲಿ  ಗಾಳಿ ಹಾಕ್ತಾ ಇರ್ತಾರೆ.
ಅಮೋಘಃ(ನರ್ವಸ್ ಆಗಿ)
ಏಯ್…ನಾನ್ ಏನೇ ಮಾಡ್ದೆ. ನೀನೆ ಜೋರಾಗಿ ರನ್ ಮಾಡಿದ್ದು. ನಾನು ಇವಾಗ್ಲೇ ನಿನ್ಗೆ ಟಿಪ್ ಟಿಪ್ ಅಂತ ಹೇಳ್ತಾ ಇದ್ದೆ. ನೀನೆ ಎಸ್ಕೇಪ್ ಆಗ್ಬೇಕು ಅಂತ ಓಡಿದ್ದು. ನೀನೆ ರನ್ನರ್.
ಪ್ರಾರ್ಥನಾಃ(ಜೋರಾಗಿ ಮತ್ತು ಅಳ್ತಾ)
ಯಾಕೋ..ನನ್ನ ಬೀಳ್ಸಿದ್ ಅಲ್ದೆ….
ಅಲ್ಲೇ ಇರೋ ಇನ್ನೊದು ಹುಡುಗಿ ಸ್ವಲ್ಪ ದೊಡ್ಡವಳು (ಐರಿನ್) ಅರ್ಧಕ್ಕೆ ತಡಿತ ಇಬ್ಬರನ್ನು ಸಮಾಧಾನ ಮಾಡೊ ತರ…
ಐರಿನಃ
ಏಯ್…ಯಾಕ್ರೊ ಈ ತರ ಮಾತಾಡೋದು. ಆಟ್ದಲ್ಲಿ ಇದೆಲ್ಲಾ ಕಾಮನ್ ಅಲ್ವಾ. ಲಾಸ್ಟ ವೀಕ್ ರೀಯಾ ಬಿದ್ದ್ಲು. ಆದ್ರು ನಾವ್ ಯಾರಾದ್ರು ಹೀಗೆ ಪೈಟ್ ಮಾಡಿದ್ವಾ. ಅವ್ಳಿಗೆ ಸಮಾಧಾನ ಮಾಡ್ಲಿಲ್ವಾ.
ಸುಜಯಃ(ಕೂಲ್ ಆಗಿ)
ನಾವ್ ಹೀಗೆ ಜಗಳ ಮಾಡ್ಕೊಂಡ್ರೆ ನಮ್ಮನ್ನಾ ಸಂಜೆ ಆಟ ಆಡೋಕೆ ಕಳ್ಸಲ್ಲಾ. ಮನೆಲಿ ಕಾರ್ಟುನ್ ನೋಡೋಕು ಬಿಡಲ್ಲಾ…ಗೇಮ್ಸ್ ಇಲ್ಲ. ಫುಲ್ ಡೆ ಓದೋದೆ ಆಗತ್ತೆ. ಬೋರ್ ಆಗತ್ರೋ….
ಐರಿನಃ (ಸಹಜವಾಗಿ)
ಹೌದು ಕಣ್ರೊ....ನಾವ್ ನಾವೆ ಈ ತರ ಜಗಳ ಆಡೋದು ಬೇಡ. ನಾವೇಲ್ಲಾ ಸೇರಿ ಅವ್ಳಿಗೆ ಫ್ಸಸ್ಟ್ ಎಡ್ ಟ್ರಿಟ್ಮೆನ್ಟ್ ಮಾಡೋಣ. ಮನೆಲಿ ಯಾರಿಗೂ ಏನು ಗೊತ್ತಾಗೋದೆ ಇಲ್ಲಾ.
ಇನ್ನೊಂದು ಮಗುಃ
ಓ.ಕೆ ನನ್ನ ಸೈಕಲ್ ನಲ್ಲಿ ಅಮ್ಮಾ ಯಾವಾಗ್ಲು ಫಸ್ಟ್ ಎಡ್ ಬಾಕ್ಸ್ ಇಟ್ಟಿರ್ತಾಳೆ. ವೇಟ್ ಮಾಡಿ ಇವಾಗ್ಲೇ ತರ್ತ್ತಿನಿ.
ಅವನು  ಅಲ್ಲಿಂದ ಅಲ್ಲೆ ಪಕ್ಕ ತನ್ನ ಸೈಕಲ್ ಹತ್ತಿರ ಹೋಗ್ತಾನೆ. ಬಾಕಿ ಮಕ್ಕಳು ಅಲ್ಲೆ ಸೈಡ್  ಅಲ್ಲಿ ಕುಳಿತಿರ್ತಾರೆ. ಅವನು ಬಂದು ಐರಿನ್  ಗೆ ಬಾಕ್ಸ್ ಕೊಡ್ತಾನೆ. ಬಿದ್ದ ಹುಡುಗಿಗೆ ವಾಟರ್ ಬಾಟಲ್ ಕೊಡ್ತಾನೆ. ಅವಳು ಇನ್ನೇನು ನೀರು ಕುಡಿತಾಳೆ. ಅವಳ ಕೈ/ಬಾಟಲ್ ಕ್ಯಾಪ್ ಗೆ ತಾಗಿ  ಒಂದು ಹಲ್ಲು ಬಿಳತ್ತೆ.  ಅವ್ಳು ಆ ಹಲ್ಲನ್ನು ಬಾಯಿಯಿಂದ ಕೈ ಯಲ್ಲಿ ಹಿಡಿದು ಶಾಕ್ ನಲ್ಲಿ ನೋಡ್ತಾ…
ಪ್ರಾರ್ಥನಾಃ
ಅಯ್ಯೊ..ಇದ್ ಏನು ತುಂಬಾ ದಿನದಿಂದ ಈ ಟೀತ್ ಶೇಕ್ ಆಗ್ತಾ ಇತ್ತು. ಈಗ್ಲೇ ಈ  ಟೀತ್ ಬೇರೆ ಬಿದ್ದೊಯ್ತಲ್ಲಾ. ನಾನ್ ಇನ್ನು ಬಿಸ್ಕೆಟ್ ಲೇಸ್ ಎಲ್ಲಾ  ಹೇಗ್ ತಿನ್ಲಿ.
ಎಲ್ಲಾ ಮಕ್ಳು ಅವಳನ್ನು ಕೂತುಹಲದಿಂದ ನೋಡ್ತಾ ಅವಳು  ಹೇಳೋದನ್ನೇ ಕೇಳ್ತಾರೆ. ಅಲ್ಲೇ ಐರಿನ್  ಅವಳನ್ನಾ ಸಮಾಧಾನ ಮಾಡ್ತಾ…
ಐರಿನ್ಃ
ಯಾಕ್ ಹಾಗೆ ಟೆನ್ಷನ್ ಮಾಡ್ಕೊಳ್ತೀಯಾ.  ಇದು ನಿನ್ನ ಮಿಲ್ಕ್ ಟೀತ್ ಅಲ್ವಾ. ಇದು ಬಿದ್ದೆ ಬಿಳತ್ತೆ. ನಮ್ಮ ಜನ್ರಲ್ ಸೈನ್ಸ್ ನಲ್ಲಿ ಬಂದಿಲ್ವಾ. ಇದು ಬಿದ್ದು ಹೊಸ ಟಿತ್ ಬೇರೆ ಬರತ್ತೆ ಅಂತಾ…
ಇನ್ನೊಂದು  ಹುಡುಗಿಃ(ಉತ್ಸಾಹದಲ್ಲಿ)
ಏಯ್..ಯಾಕ್  ಹೀಗ್ ಬೇಸರ ಮಾಡ್ಕೋಳ್ತಿಯಾ? ಈ ಟೀತ್ ಹಾಗೆ ಪಿಲ್ಲೋ ಕೆಳಗೆ ಇಟ್ಗೋಂಡು ಇರು. ನಾವು ಮಲ್ಗಿದ್ದಾಗ ಟೂತ್ ಫೇರಿ ಬಂದು ನಿನ್ಗೆ ಗಿಫ್ಟ ಕೊಟ್ಟು ಹೋಗತ್ತೆ.
ಪ್ರಾರ್ಥನಾಃ(ಖುಷಿಯಿಂದ)
ವಾವ್…ಗಿಫ್ಟಾ. ನನ್ಗೆ ಫುಲ್ ಚಾಕ್ಲೇಟ್ ಬೇಕು.  ಹಾಗೆ ಕ್ರಯೋನ್ಸ್ ಗ್ಲಿಟರ್ ಪೆನ್  ಎಲ್ಲಾ ಕೊಡ್ತಾಳಾ?
ಇನ್ನೊದು ಹುಡುಗಿಃ(ಬೇಸರದಲ್ಲಿ)
ಛೇ…ನನ್ಗೆ ಇದೆಲ್ಲಾ ಗೊತ್ತೆ ಇಲ್ಲಾ. ನಾನು ನನ್ನ ಮಿಲ್ಕ್ ಟೀತ್ ಬಿತ್ತು. ಅಮ್ಮಾ ಅದ್ರನ್ನಾ ಡಸ್ಟಬಿನ್ಗೆ ಹಾಕಿದ್ಲು. ನನ್ಗೆ ಗಿಫ್ಟ ಮಿಸ್ ಆಗೊಯ್ತು.
ಚಿಕ್ಕ ಹುಡುಗಿಃ(ಮುಗ್ದವಾಗಿ)
ನನ್ನ ಒಂದ್ ಟೀತ್  ಶೇಕ್ ಆಗ್ತಾ ಇದೆ. ಅದ್ ಬಿದ್ರೆ ನಾನು ಮಮ್ಮಿಗೆ ಹೇಳೋಕೆ ಹೋಗಲ್ಲಾ. ಸುಮ್ನೆ ಪಿಲ್ಲೊ ಕೆಳಗೆ ಬಚ್ಚಿಡ್ತಿನಿ. (ನಗ್ತಾಳೆ) ನನ್ಗೆ  ಟೂತ್ ಫೇರಿಯಿಂದ  ಗಿಫ್ಟ್ ಸಿಗತ್ತೆ.
ಎಲ್ಲಾ ಮಕ್ಕಳು ತುಂಬಾ ಕುತೂಹಲ ದಿಂದ ಇರ್ತಾರೆ.  
ಐರಿನ್ ;(ತಿಳಿಸಿ ಹೇಳೋ ತರ)
ಯಾಕ್ ಎಲ್ಲಾ ಗಿಫ್ಟ್ ಸಿಗೋದ್ರ ಮೇಲೆ ಯೋಚ್ನೆ ಮಾಡ್ತಾ ಇದ್ದೀರಾ? ನೋಡಿ ನೀವು ಅಂದ್ಕೋಂಡ್ ತರ ಟೂತ್ ಫೇರಿ ಇಲ್ಲಾ. It is just a fantacy figure.  ಕಾರ್ಟುನ್ ನಲ್ಲಿ ನೋಡೋದಲ್ಲಾ ರಿಯಲ್ ಆಗಿರಲ್ಲಾ. ಸಿಂನ್ಡ್ರೆಲಾ ಸ್ಟೋರಿ ನಲ್ಲಿ ಬರೋ ಫೇರಿ ಗಾಡ್ ಮದರ್ ಹೇಗೊ ಇದು ಅದೇ ತರ. ಯಾವ್ ಟೂತ್ ಫೇರಿನು ನಮ್ಗೆ ಬಂದು ಗಿಫ್ಟ ಕೊಡಲ್ಲಾ. ನಾವು ಇದನ್ನೆಲ್ಲಾ ಬ್ಲೈನ್ಡ್ ಆಗಿ ನಂಬಲೆ ಬಾರ್ದು.
ಎಲ್ಲಾ ಮಕ್ಕಳು ಡಲ್ ಆಗಿ ಅವ್ಳು ಹೇಳೋದನ್ನೇ ಕೇಳ್ತಾರೆ. ಹಾಗಿದ್ರೆ ಗಿಫ್ಟ್ ಅಂತ ರಾಗ್ವಾಗಿ ಕೇಳ್ತಾರೆ.
ಐರಿನಃ (ತಿಳಿಸಿ ಹೇಳೊ ತರ)
ಯಾಕ್ರೋ ಹಾಗ್ ಗಿಫ್ಟ ಇಲ್ಲಾ ಅಂತ ಸ್ಯಾಡ್ ಆಗಿದ್ದೀರಾ? ನಮ್ಗೆ ನಮ್ಮ ಮಮ್ಮಿ/ಡ್ಯಾಡಿನೆ ಟೂತ್ ಫೇರಿ…ಫೇರಿ ಗಾಡ್ ಮದರ್ ಎಲ್ಲಾ. ನಮ್ ಬರ್ತ ಡೆ ಗೆ ಹಬ್ಬಕ್ಕೆ ಗಿಫ್ಟ್ಸ್ ಕೊಡ್ಸಲ್ವಾ. ಇವೆಲ್ಲಾ ಪೋಕ್ ಸ್ಟೋರಿಸ್. ಕಾರ್ಟೂನ್ ನಲ್ಲಿ ನೋಡೊದು ಅಷ್ಟೇ. ನಾವು ಇದೆಲ್ಲಾ ರಿಯಲ್ ಅಂತ ತಿಳಿಬಾರ್ದು ಅಷ್ಟೇ. ನಮ್ಗೆ ನಮ್ಮ್ ಟೀತ್ ಬಿದ್ದಾಗ ಬೇಸರ ಆಗತ್ತೆ ಅಲ್ವಾ…ಅದಿಕ್ಕೆ ನಮ್ಗೆ ಹ್ಯಾಪಿ ಆಗ್ಲಿ ಅಂತ ಈ ತರ ಸ್ಟೋರಿಸ್ ಬಿಲ್ಡ್ ಮಾಡಿದ್ದಾರೆ.
ಎಲ್ಲಾ ಮಕ್ಕಳು ಬೇಸರದಲ್ಲೇ ತಲೆ ಅಲ್ಲಾಡಿಸುತ್ತಾರೆ.
ಪ್ರಾರ್ಥನಃ (ಏನು ತೋಚದೆ)
ಹಾಗಿದ್ರೆ ನಾನು ಈ ಟೀತ್ ಏನ್ ಮಾಡ್ಲಿ.
ಐರಿನ್ಃ(ಸಹಜವಾಗಿ)
ನೀನು ಈ ತರ ಸ್ಟೋರಿಸ್ ಯಾವುದು ನಂಬಲೇ ಬೇಡ ಸರೀನಾ. ಅಲ್ಲೇ ಏಸ್ದ ಬಿಡು
ಬೇರೆ ಮಕ್ಕಳ ನ್ನೆಲ್ಲಾ ನೋಡ್ತಾ ಅವರಿಗೂ..
ಐರಿನ್ ;(ತಿಳಿಸಿ ಹೇಳೋ ತರ)
ನೋಡಿ ನೀವು ಅಷ್ಟೇ ಈ ತರದ್ದೇಲ್ಲಾ ನಂಬ್ಲೆ ಬೇಡಿ. ಸುಮ್ನೇ ಟಿ.ವಿ. ನಲ್ಲಿ ನೋಡಿ ಬಿಟ್ ಬಿಡ್ ಬೇಕು.
ಎಲ್ಲಾ ಮಕ್ಕಳು ಸರಿ ಅಕ್ಕಾ ಅಂತ ಒಂದೇ ಸಲಕ್ಕೆ ಹೇಳ್ತಾರೆ.  ಎಲ್ಲಾ ಸೇರಿ  ಅವಳ ಕಾಲಿಗೆ ಫಸ್ಟ್ ಎಡ್ ಮಾಡಿ ಅವಳನ್ನಾ ಮೇಲೆ ಎಬ್ಬಿಸುತ್ತಾರೆ.
ಐರಿನ್ ;(ಕಾಳಜಿಯಿಂದ)
ಒ.ಕೆ. ಪ್ರಾರ್ಥನಾ..ಯು ಕ್ಯಾನ್ ವಾಕ್.
ಪ್ರಾರ್ಥನಾ ಹೌದು ಅಂತ ತಲೆ ಯಾಡಿಸುತ್ತಾಳೆ.
ಐರಿನ್ ;
ಸರಿ ಹಾಗಿದ್ರೆ already six o clock  ಆಯ್ತು. ನಾವೆಲ್ಲಾ ಇವಾಗ್ ಮನೆಗೆ ಹೋಗೋಣ.
ಇನ್ನೊಂದು ಮಗುಃ
ಸರಿ..ಪ್ರಾರ್ಥನಾ ಬಿದ್ದಿರೋದು ಮನೆಲಿ ಹೇಳೋದ್ ಬೇಡ. ನಾಳೆ ಮಿಸ್ ಮಾಡ್ದೆ ಎಲ್ಲಾ ಹೊಸ ಗೇಮ್ ಆಡಿದ್ರಾಯ್ತು…ಓ.ಕೆ. ನಾ…
ಎಲ್ಲಾ ಓ. ಕೆ ಅಂತ ಹೇಳ್ತಾರೆ. ಬೈ..ಮಾಡ್ತಾ ಒಂದೊಂದು ದಿಕ್ಕಿಗೆ ಹೋಗೋ ಮಕ್ಕಳು.

ಕಟ್





No comments: