ಎಮ್ಮ
ಮನೆಯಂಗಳದಿ ಬೆಳೆದಂತ ಹೂವನ್ನು….
ಕುಲವಧು ಕನ್ನಡ ಸಿನಿಮಾದಲ್ಲಿ ಬಂದಂತ ಈ ಹಾಡು ಬಿ.ಸಿತಾರಾಮಯ್ಯನವರ ಅದ್ಬುತವಾದ ರಚನೆ. ಜಾನಕಿ ಅಮ್ಮನವರು
ಅಷ್ಟೇ ಚನ್ನಾಗಿ ಹಾಡಿದ್ದಾರೆ. ಈ ಹಾಡನ್ನು ಕೇಳಿದವರ
ಕಣ್ಣಲ್ಲಿ ನೀರು ಬರದೆ ಹೋಗಲ್ಲ. ಇದರ ರಚನೆಯೇ ಹಾಗೆ. ಒಮ್ಮೆ ರವಿ ಬೆಳೆಗೆರೆಯವರು ಎಂದು ಮರೆಯದ ಹಾಡು
ಪ್ರೋಗ್ರಾಮ್ ನಲ್ಲಿ ಹೇಳಿದ್ರು...”ಈ ಹಾಡ್ ಕೇಳಿ ಮದುವೆ ಮನೆಲಿ ಕಣ್ಣೀರ್ ಇಡ್ದೆ ಎದ್ದು ಹೋದ್ರು
ಅಂದ್ರೆ ಅವ್ರು ವಾಲಗದವರು ಆಗಿರಲ್ಲಾ…” ಎಂದು. ಹೌದು ಅದು ಅಕ್ಷರಶ ನಿಜ. ಹೂವಂತೆ ಬೆಳೆದ ಮಗಳನ್ನು
ಇನ್ನೊಬ್ಬರಿಗೆ ಕನ್ಯಾ ದಾನ ಮಾಡಿ ಕೊಡಬೇಕಿದ್ದರೆ ಆ ಅಪ್ಪ-ಅಮ್ಮನ ಮನಸ್ಥಿತಿ ಹೇಗಿರಬೇಡ.
ಈಗಿನ ಕಾಲದಲ್ಲಿ ಹೆಣ್ಣೋ ಗಂಡೋ ಎಲ್ಲಾ ಮಕ್ಕಳನ್ನು ಸಮನಾಗಿ ಬೆಳೆಸಿರುತ್ತಾರೆ.
ಮಗನಿಗೆ ಕೊಡೊ ಸ್ವಾತಂತ್ರ ಮಗಳಿಗೂ ಕೊಟ್ಟಿರುತ್ತಾರೆ. ನಿಜ ಹೇಳಬೇಕೆಂದರೆ ಮಗನಿಗಿಂತ ಮಗಳನ್ನೇ ಈಗಿನ
ಕಾಲದ ಅಪ್ಪ-ಅಮ್ಮ ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ. ಮಗಳಲ್ಲಿ ಏನೋ ಒಂದು ತರ ಸಲುಗೆ ಪ್ರೀತಿ ಇದ್ದೆ
ಇರತ್ತೆ. ಮದುವೆ ಯಾದರು ಮಗಳು ತಮ್ಮ ಮನೆಯ ಒಂದು ಭಾಗವೆ ಆಗಿರುತ್ತಳೆ. “ಕೊಟ್ಟ ಹೆಣ್ಣು ಕುಲಕ್ಕೆ
ಹೊರಗೆ” ಗಾದೆ ಮಾತು ಇದೇಯೆ ಹೊರತು ಈಗ ಯಾವ ಅಪ್ಪ-ಅಮ್ಮನಲ್ಲು ಈ ತರಹದ ಭಾವನೆ ಇಲ್ಲ. ತವರು ಮನೆಯಲ್ಲಿ ಅವಳ ಜಾಗ ಅವಳಿಗೆ
ಇದ್ದೆ ಇರತ್ತೆ. ಮೊದಲಿನ ಕಾಲದ ಹಾಗೆ ಡಜನ್ ಹೆಣ್ಮಕ್ಕಳು ಈಗೀನವರಿಗೆ ಇಲ್ಲದೆ ಇರೋ ಕಾರಣಕ್ಕೆನೋ ಈ
ಎಲ್ಲ ವ್ಯವಸ್ಥೆ ಈಗೀನ ಹೆಣ್ಣು ಮಕ್ಕಳಿಗೆ.
ಕಾಲೇಜ್, ಫ್ರೇಂಡ್ಸ್, ಹೀಗೆ ಹುಡುಗಾಟಿಕೆಯಲ್ಲಿ ಬೆಳೆದ ಹೆಣ್ಣಿಗೆ ಮದುವೆ
ಆಗಿ ಬಂದ ಹೊಸ ಪರಿಸರಕ್ಕೆ ಮತ್ತು ಒಂದು ಜೀವನ ಶೈಲಿಯಿಂದ ಇನ್ನೊಂದು ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ
ಸಮಯವೆ ಹಿಡಿಯತ್ತದೆ. ಇದನ್ನು ಆಕೆಯ ಗಂಡನ ಮನೆಯವರು ಅರ್ಥ ಮಾಡಿಕೊಳ್ಳ ಬೇಕು.
ಮದುವೆ ಆಗಿ ಬಂದ ಸೊಸೆ ತನ್ನ ಮಗನಿಗೆ ಮೊದಲು ಹೊಂದಿಕೊಳ್ಳಲಿ ಅನ್ನೊ ಭಾವನೆ
ಬಿಟ್ಟು ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ಆಕೆಯ ಮೇಲೆ ಹೊರಿಸುವುದಲ್ಲ. ಇನ್ನು ಗಂಡ ಹೆಂಡತಿ ಇಬ್ಬರೆ
ಇದ್ದರೆ ಆಯ್ತು ಮನೆ ತುಂಬಾ ಜನ ಇದ್ದು ತಲೆಗೆ ಒಂದೊಂದು ಮಾತಾಡುವರಾದರೆ ಆ ಹೆಣ್ಣು ಮಗಳ ಪರಿಸ್ಥಿತಿ
ಏನಾಗ ಬೇಡ?
ಇನ್ನು ಅತ್ತೆಗೆ ತನಗೆ ಸಿಗದ ಸುಖ ಸಂತೋಷ ಇವಳಿಗೆ ಸಿಕ್ಕಿತೆಂಬ ಮನೋಭಾವನೆ
ಬೆಳೆಸಿಕೊಳ್ಳೊದಲ್ಲ. ಆಗಿನ ಕಾಲಕ್ಕು ಈಗಿನ ಕಾಲಕ್ಕು ಜೀವನ ಪದ್ದತಿಯಲ್ಲಿ ವ್ಯತ್ಯಾಸ ಇರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆ ಹೊರತು, ತನ್ನ ಅತ್ತೆಯ ಮೇಲಿನ ಸಿಟ್ಟು, ಆಕೆ ಕೊಟ್ಟ ನೋವು ತನ್ನ ಸೊಸೆಯ ಮೇಲೆ ತೋರಿಸಿ ರಿವೇನ್ಜ್ ತೀರಿಸಿಕೊಳ್ಳುವದಲ್ಲ. ಇನ್ನು ಮಾವನಿಗೆ ಅವನದ್ದೆ ಆದ ನಿಲುವು. ಈಗಿನ ಕಾಲದ ಗಂಧ
ಗಾಳಿ ತಿಳಿದೆ ತನ್ನದೆ ವಾದ ಮಾಡಿದರೆ ಯಾವ ಹೆಣ್ಣು ಮಗಳು ಸಹಿಸಿಕೊಳ್ಳುವದಿಲ್ಲ. ಈಗಿನ ಜನರೇಶನ್ಗೆ
ಸ್ವಲ್ಪ ವಾದರು ಹೊಂದಿಕೊಳ್ಳಲೆ ಬೇಕು. ಇನ್ನು ಮೈದುನ-ನಾದಿನಿಯರು ಇದ್ದರೆ ಅಣ್ಣನ ಪ್ರೀತಿ ಸಲುಗೆ
ಅತ್ತಿಗೆ ಕಿತ್ತು ಕೊಂಡಳು ಅನ್ನೋ ಭಾವನೆ. ಹೀಗಾದರೆ ಆ ಗಂಡನ ಪರಿಸ್ಥಿತಿ ಅಡಗತ್ತರಿಯಲ್ಲಿ ಸಿಕ್ಕ
ಅಡಿಕೆ ಅಗುವುದು ಗ್ಯಾರಂಟಿ. ಈ ಸೂಕ್ಷವಾದ ವಿಚಾರವನ್ನು ಮೊದಲೆ ಅವರ ಅಪ್ಪ-ಅಮ್ಮ ಹೇಳಿರ ಬೇಕು. ಇದೆಲ್ಲವು ಒಮ್ಮೆಲೆ ಮದುವೆ ಆಗಿ ಹೋದ ಮಗಳಿಗೆ ಸಿಕ್ಕರೆ ಅಲ್ಲಿ ಅವಳ ಪರಿಸ್ಥಿತಿ
ಏನಾಗ ಬೇಡ. ಡೆಲ್ಲಿ ಸಿಕ್ಸ್ ಎಂಬ ಹಿಂದಿ ಸಿನಿಮಾದಲ್ಲಿ ಒಂದು ಸಾಂಗ್ ಇದೆ…ಪಲ್ಲವಿಯ ಕೊನೆಯಲ್ಲಿ
“ಸಸುರಾಲ್ ಗೇಂಡಾ ಫೂಲ್.” ಅಂತ ಬರುವುದು. ಈ ಸಾಲು ತುಂಬಾ ಅರ್ಥ ಗರ್ಭಿತವಾಗಿದೆ. ದೂರದಿಂದ ನೋಡಲು
ಸುಂದರ…ಹತ್ತಿರ ಬಂದರೆ ಪರಿಮಳ ಇಲ್ಲದ ಕ್ರತಕ ಹೂ. ಇದು ಯಾವ ಹೆಣ್ಣಿನ ಜೀವನದಲ್ಲು ಆಗ್ಬಾರದು.
ಇದು ನಾಣ್ಯದ ಒಂದು ಮುಖ. ಒಂದೇ ಕೋನದಿಂದ ನೋಡದೆ ಗಂಡನ ಮನೆಯವರ ದ್ರಷ್ಟಿಯಿಂದಲು
ನೋಡಬೇಕು. ಮದುವೆ ಆಗಿ ಹೋದ ಮಗಳು ತನ್ನ ಅತ್ತೆ ಮನೆಯನ್ನು ತನ್ನ ತವರು ಮನೆಯವರಂತೆ ನೋಡಿಕೊಳ್ಳ ಬೇಕು.
ಹೆಣ್ಣನ್ನು ಬಣ್ಣಿಸುವ ಕೆಲವು ಗುಣಗಳು ಅವಳಲ್ಲಿ ಇನ್ನು
ಇರಬೇಕು. ಈಗೀನ ಕಾಲದವರಾದರು ಎಷ್ಟೆ ಮೊಡ್ ಆದರು ಹೆಣ್ಣು ತನ್ನ ಕೆಲವು ಗುಣಗಳನ್ನು ಬಿಡಬಾರದು. ಹೆಣ್ಣಿಗೆ ಪ್ರೀತಿ, ವಾತ್ಸಲ್ಯ, ಕಾಳಜಿಯಿಂದ ನೋಡಿಕೊಳ್ಳುವ ಗುಣ ದೈವದತ್ತವಾಗಿ ಬಂದಿರುವುದು. ಇದರಿಂದ ತಾನು ತನ್ನದು ಮತ್ತು ತನ್ನ ತವರು ಮನೆಯೆ ತನ್ನದು ಅನ್ನೊ ಭಾವನೆ ಬಿಟ್ಟು ಎಲ್ಲರಲ್ಲು
ಹೊಂದಿಕೊಡು ಹೋಗಬೇಕು. ಒಂದೆ ಕೈ ಯಿಂದ ಚಪ್ಪಾಳೆ ಹೇಗೆ ಆಗುವುದಿಲ್ಲವೋ ಹಾಗೆ ಒಬ್ಬರಿಂದಲೇ ತಪ್ಪು
ಆಗುವುದಿಲ್ಲ. ಇಬ್ಬರಲ್ಲು ಹೊಂದಿಕೊಂಡು ಹೋಗೋ ಗುಣ ಗಳಿದ್ದರೆ ಯಾವ ಸಮಸ್ಯೆಯು ಬರುವುದಿಲ್ಲ. ಮತ್ತು ಸುಂದರ
ಸಂಸಾರವಾಗಿರತ್ತೆ. ವ್ರದ್ದಾಶ್ರಮದ ಅವಶ್ಯಕತೆ ಮತ್ತು ಕೌಂಟುಂಬಿಕ ನ್ಯಾಯಲಯದ ಅವಶ್ಯಕಥೆ ನಮ್ಮ ಸಮಾಜಕ್ಕೆ ಇರುವುದಿಲ್ಲ.
No comments:
Post a Comment