ಮನೆ ತಲುಪಿಸಿದ
ಅಜ್ಜ-ಅಜ್ಜಿ
ಸುಮಾರು 22 ವರ್ಷಗಳ ಹಿಂದಿನ ಘಟನೆ. ನಾನು ಆಗ ಪ್ರೈಮರಿ ಸ್ಕೊಲ್ ನಲ್ಲಿ
ಓದ್ತಾ ಇದ್ದೆ. ಒಂದು ದಿನ ಕೋ ಕೋ ಪ್ರಾಕ್ಟೀಸ್ ಮುಗುಸಿ ಮನೆಗೆ ಬರ್ತಾ ಇದ್ದೆ.
ಸ್ವಲ್ಪ ಲೇಟ್ ಆಗಿತ್ತು. ಸ್ಕೊಲ್ ನಿಂದ ನಮ್ಮ ಮನೆಗೆ ಬರಬೇಕಿದ್ದರೆ ಅರ್ಧ ಡಾಂಬರ್ ರೋಡ್ ಅಂದ್ರೆ
ಪೇಟೆ, ಇನ್ನು ಅರ್ಧ ಹಳ್ಳಿ ದಾರಿ. ಅರ್ಧ ದಾರಿಗೆ ಬರೋ ತನಕ ಹೆದರಿಕೆ ಶುರು ಆಯ್ತು. ನಮ್ಮೂರಿಗೆ ತಿರುಗೊ
ರಸ್ತೆ ಸೈಡ್ ನಿಂತೆ. ಅಮ್ಮಾ ಹೇಳಿದ್ದು ನೆನಪಾಯಿತು ಲೇಟ್ ಆದ್ರೆ ಒಬ್ಬಳೆ ಬರಬೇಡ ಯಾರಾದ್ರು ನಮ್ಮೂರವರು
ಬರುವವರು ಸಿಗ್ತಾರೆ ಅಂತ. ನನ್ನ ಗ್ರಹಚಾರಕ್ಕೆ ಆ ದಿನ ಒಂದು ನರ ಪಿಳ್ಳೆನು ಇಲ್ಲ. ಅಷ್ಟರಲ್ಲೇ ಒಂದು
ಕಾರು ನನ್ನ ಬಳಿ ಬಂತು. ಅದರಲ್ಲಿ ಸ್ವಲ್ಪ ವಯಸ್ಸಾದ ಅಜ್ಜ ಅಜ್ಜಿ ಇದ್ರು. ನನ್ನ ಬಳಿ ಆ ಅಜ್ಜ ಸುಬ್ರಮಣ್ಯ
ದೇವಸ್ಥಾನದ ದಾರಿ ಕೇಳಿದ್ರು. ನಾನು ಸ್ವಲ್ಪ ಟೇನ್ಶನ್ ನಲ್ಲಿ ಇದ್ರು ದಾರಿ ಹೇಳ್ದೆ. ಅಜ್ಜಿ ನನ್ನ
ಹತ್ರ ಕೇಳಿದ್ರು, ಯಾಕೆ ಈ ಮುರೂ ಸಂಜೆಲಿ ಒಬ್ಬಳೆ ಇಲ್ಲಿ ನಿಂತಿದೀಯಾ? ನಾನು ಇದ್ದ ವಿಷ್ಯ ಹೇಳ್ದೆ. ಆಗ ಅವ್ರು ಹೀಗೆಲ್ಲಾ ಒಬ್ಬಳೆ
ನಿಲ್ಲಬೇಡ ಬಾ…ನಿನ್ನ ಮನೆ ತೋರಿಸು ನಿನ್ನ ಮನೆಗೆ ಬಿಟ್ಟು ನಾವು ದೇವಸ್ಥಾನಕ್ಕೆ ಹೋಗ್ತಿವಿ ಅಂತ ನನ್ನ
ಮನೆ ತಲುಪಿಸಿ ಹೋದ್ರು. ನನಗೆ ಆಗ ಕಾಳಜಿ ತೋರಿಸಿದ ಅಜ್ಜ-ಅಜ್ಜಿ ಪರಿಚಯನು ಮಾಡ್ಕೊಂಡಿಲ್ಲಾ. ಆದ್ರೆ
ಆ ದಿನ ಅವ್ರು ಮಾಡಿದ ಉಪಕಾರ ಮತ್ತು ತೋರಿಸಿದ ಕಾಳಜಿ ನನಗೆ ನೆನಪಿದೆ. ಅಜ್ಜ-ಅಜ್ಜಿಯ ಮುಖ ಇನ್ನು ನನ್ನ ಮನಸ್ಸಿನಲ್ಲಿದೆ.
(ಉದಯ ವಾಣಿ ಮೂರು ನಿಮಿಷದ ಅತಿಥಿ ಕಾಲಮ್ ಗೆ ಬರೆದ ಲೇಖನ.)
No comments:
Post a Comment