ಸಂದರ್ಭಃ
ಸ್ಕೂಲ್ ನಿಂದ ಬಂದ ಮಗಳು ಅಪ್ಸೆಟ್ ಆಗಿರ್ತಾಳೆ. ಸಮಸ್ಯೆಯಿಂದ ಹೊರಗೆ ತರುವ ಅಮ್ಮಾ.
ಮನೆ ಕಾಲಿಂಗ್ ಬೆಲ್ ಆಗತ್ತೆ. ಬಾಗಿಲ ತೆಗೆಯುವ ಅಮ್ಮಾ. ಮಗಳು (ಸುಮಾರು ಏಳು/ಎಂಟನೇಯ ಕ್ಲಾಸ್) ಸ್ವಲ್ಪ ಡಲ್ ಆದ ಮುಖದಲ್ಲಿ ಒಳಗೆ ಬರ್ತಾಳೆ. ಅಮ್ಮಾ ಮಗಳ ಮುಖ ನೋಡ್ತಾ…
ಅಮ್ಮಾ;
( ವಿಚಾರುಸುವ ದ್ವನಿ)
ಯಾಕೆ ಚಿನ್ನಿ ಏನಾಯ್ತು? ಯಾಕ್ ಇಷ್ಟು ಡಲ್ ಆಗಿದಿಯಾ? ಸುಸ್ತಾ ಅಥ್ವಾ
ಯಾರಾದ್ರು ಏನಾದ್ರು ಅಂದ್ರಾ? ಮತ್ತೇನ್ ಆ ಅನಿತಾ ಆಂಟಿ ಮಗಳ್ ಹತ್ರ ಜಗಳಾ ಮಾಡ್ಕೊಂಡ್ಯಾ?
ಮಗಳು ಒಳಗೆ ಬರ್ತಾ ಬ್ಯಾಗ್ ಅಲ್ಲೆ ಸೋಫಾದ ಮೇಲೆ ಬಿಸಾಡ್ತಾಳೆ.
ಮಗಳುಃ
(ಉದಾಸೀನದಿಂದ)
ಹಾಗೆನಿಲ್ಲಮ್ಮಾ…ಸ್ವಲ್ಪ ಸುಸ್ತು. ಸ್ವಿಮಿಂಗ್ ಪಿರಿಯಡ್ ಬೇರೆ ಇತ್ತು.
ಅಮ್ಮಾಃ(ರಾಗವಾಗಿ)
ಓ…ಹಾಗಾ
ಅಮ್ಮಾ
ಬ್ಯಾಗ್ ನಾ ತನ್ನ ಕೈಗೆ ತಗೊಳ್ತಾ….ರೇಗೊ ದ್ವನಿಯಲ್ಲಿ
ಅಮ್ಮಾಃ
ಏನೇ ನೀನು ಈ ಸ್ವಿಮಿಂಗ್ ಡ್ರೆಸ್ ಹೇಗ್ ಬ್ಯಾಗ್ ನಲ್ಲಿ ಇಟ್ಗೊಂಡಿದೀಯಾ
ನೋಡು. ಸ್ವಲ್ಪ ಆದ್ರು ನೀಟ್ ಆಗಿ ಇಟ್ಗೊಂಡು ಗೊತ್ತಿದೀಯಾ. ಬೇರೆ ಕವರ್ ತಗೊಂಡು ಹೋಗಿಲ್ವಾ.
(ಅಮ್ಮಾ
ಬ್ಯಾಗ್ ಓಪನ್ ಮಾಡೊದನ್ನು ನೋಡಿ ಅಲ್ಲೆ ನೀರ್ ಕುಡಿತಾ
ಇರೋ ಮಗಳು ಗಾಬರಿಯಿಂದ ಓಡಿ ಬರ್ತಾಳೆ.)
ಮಗಳುಃ
(ಬ್ಯಾಗ್ ಎಳಿತಾ…ಗಾಬರಿಯಿಂದ)
ಅಮ್ಮಾ….ಪ್ಲೀಸ್ ನೀನು ನನ್ನ ಬ್ಯಾಗ್ ತೆಗೆದು ಆರ್&ಡಿ ಮಾಡ್ಬೇಡಾ. (ಬಾಯ್ ತಪ್ಪಿ
ಹೇಳೋ ತರ) ಸಫೋಸ್ ಏನಾದ್ರು ಸಿಕ್ಕಿದ್ರೆ ನೀನು ಅದನ್ನೆ ಇನ್ವೆಸ್ಟಿಗೇಶನ್ ಶುರು ಹಚ್ಗೊಳ್ತೀಯಾ.
ಅಮ್ಮಾಃ
(ಪ್ರಶ್ನಾರ್ಥಕವಾಗಿ)
ಏನಾದ್ರು ಸಿಕ್ಕಿದ್ರೆ ಅಂದ್ರೆ ಏನೇ ಅರ್ಥ. ಯಾಕ್ ಹಾಗ್ ಬ್ಯಾಗ್ ಎಳಿತಾ
ಇದೀಯಾ. ನಾನು ನಿನ್ನ ಅಮ್ಮಾ. ನಾನು ನೋಡ್ಬಾರ್ದು ಏನಿದೆ ಅದ್ರಲ್ಲಿ. ನಾನು ಗಮನಿಸ್ತಾ ಇದೀನಿ ನೀನು
ನನ್ನಿಂದ ಏನೋ ಮುಚ್ಚಿಡ್ತಾ ಇದೀಯಾ.
(ಮಗಳ
ಕೈ ಯಿಂದ ಬ್ಯಾಗ್ ತಗೊತಾಳೆ.)
ಮಗಳು;
( ತಡವರಿಸುತ್ತಾ…ಹುಳಿ ತಿಂದ ಮುಖ ಮಾಡಿ)
ಹಾಗೇನಿಲ್ಲಮ್ಮಾ…. ಹ್ಯಡ್ ಮಾಡೊವಂತದ್ದು ಏನು ಇಲ್ಲಾ. ಸುಮ್ನೆ ನನ್ನ ಬುಕ್ಸ್,
ಪ್ರೋಜಕ್ಟ್ ಪೇಪರ್ಸ್ ಎಲ್ಲಾ ಚಲ್ಲಾ ಪಿಲ್ಲಿ ಆಗಿ ಬಿದ್ದಿರತ್ತೆ. ಅದಿಕ್ಕು ನೀನು ಏನಾದ್ರು ಹೇಳ್ತಿಯಾ
ಅಂತಾ.
(ಅಮ್ಮಾ
ಬ್ಯಾಗ್ ನಿಂದ್ ಬುಕ್ಸ್ ತೆಗಿತಿರ್ತಾಳೆ. (ಏನೋ ಹುಡುಕೋ ಮುಖದಲ್ಲಿ) ಸಡನ್ನಾಗಿ ಒಂದು ಲೇಟರ್ ಕೆಳಗೆ
ಬಿಳತ್ತೆ. ಲೇಟರ್ ಮೇಲೆ ಹಾರ್ಟ ಶೆಪ್ ಬರೆದಿರ ಬೇಕು. ಅದು ಕೆಳಗೆ ಬಿದ್ದಾಗ ಮೇಲ್ಬಾಗ ದಲ್ಲಿ ಇರಬೇಕು.
ಅಮ್ಮಾ ಲೇಟರ್ ಕೈಗೆ ಎತ್ತುಗೊಳ್ತಾಳೆ. ಮಗಳು ಶಾಕ್ ನಲ್ಲಿ ನೋಡ್ತಾಳೆ.)
ಅಮ್ಮಾಃ
(ಗಾಬರಿ ಮತ್ತು ಪ್ರಶ್ನಾರ್ಥಕವಾಗಿ)
ಏನಿದು…ಹಾರ್ಟ ಶೆಪ್ ಬೇರೆ ಬರ್ದಿದೆ.
(ಮಗಳು
ಏನ್ ಮಾಡೋಕು ತೋಚದೆ ಸಡನ್ನಾಗಿ ಅಳೋಕೆ ಶುರು ಮಾಡ್ತಾಳೆ. ಒಂದೆ ಉಸಿರಲ್ಲಿ ಹೇಳ್ತಾಳೆ.)
ಮಗಳುಃ
ಅಮ್ಮಾಗಾಡ್ ಪ್ರಾಮಿಸ್
ಇದ್ರಲ್ಲಿ ನನ್ನದೇನು ತಪ್ಪಿಲ್ಲ. ನಾನು ನಿನ್ಗೆ ಹೇಳ್ ಬೇಕು ಅಂತ ಅಂದ್ಕೊಂಡಿದ್ದೆ. ಆದ್ರೆ ನೀನು…
(ಅಮ್ಮಾ
ಅರ್ದಕ್ಕೆ ತಡಿತಾಳೆ. ಮಗಳನ್ನು ಪ್ರೀತಿಯಿಂದ ತನ್ನ ಹತ್ತಿರ ಕುಳಿಸಿಕೊಳ್ತಾಳೆ.)
ಅಮ್ಮಾಃ
(ಸಮಾಧಾನದಿಂದ)
ಯಾಕೆ ಚಿನ್ನಿ ನಾನು ಹಾಗೆಲ್ಲಾ ಎಲ್ಲದಕ್ಕು ನಿನ್ನ ಹತ್ತಿರ ರೇಗ್ತಿನಾ.
ನಾನ್ ಕೂಡಾ ನಿನ್ನ ಏಜ್ ದಾಟೆ ಬಂದಿಲ್ವಾ. (ಪ್ರೀತಿಯಿಂದ ಅವಳ ಕಣ್ಣಿರು ಒರೆಸುತ್ತಾ) ಹೇಳು
ಏನಾಯ್ತು ಅಂತ್ ಡಿಟೇಲ್ ಆಗಿ ಹೇಳು.
ಮಗಳುಃ(
ಸಮಾಧಾನ ತಂದುಕೊಳ್ತಾ)
ಸರಿ ಅಮ್ಮಾ…ನನ್ಗೆ ನಿನ್ನ ಹತ್ರ ಹೈಡ್ ಮಾಡ್ಬೇಕು ಅಂತ ಇಲ್ಲಮ್ಮಾ….ಯಾಕೋ
ಭಯದ ಜೊತೆ ಸ್ವಲ್ಪ್ ಸಂಕೋಚನು ಆಯ್ತು.
ಅಮ್ಮಾಃ (ಪ್ರೇಂಡ್ಲಿಯಾಗಿ)
ಯಾಕ್ ಚಿನ್ನಿ ನನ್ನ ಜೊತೆ
ಭಯ ಸಂಕೋಚ…ಅದ್ ಯಾವುದು ಬೇಡ.ನಾನು ನಿನ್ನ ಪ್ರೇಂಡ್ ತರ. ಏನು ಸಂಕೋಚ ಇಲ್ಲದೆ ಹೇಳು.
ಮಗಳುಃ
(ಸಹಜವಾಗಿ)
ಅಮ್ಮಾ ಅದೇನಂದ್ರೆ ಎವ್ರಿ Monday ಗರ್ಲ್ಸ್ ಸ್ವಿಮಿಂಗ್ ಅಲ್ವಾ. ನಾವು ಗರ್ಲ್ಸ್ ಅಷ್ಟೆ ಸ್ವಿಮಿಂಗ್
ಗೆ ಹೋಗ್ತಿವಿ. ಆಗ ಕ್ಲಾಸ್ ನಲ್ಲಿ ಯಾರು ಇರಲ್ಲಾ. ನಮ್ ನಮ್ ಬ್ಯಾಗ್ ನಾವು ಕ್ಲಾಸ್ ನಲ್ಲೆ ಇಟ್ ಹೋಗ್ತಿವಿ.
ಕೆಲವೊಂದು ಸಲ ಕ್ಲಾಸ್ ನಲ್ಲಿ ಯಾರಾದ್ರು ಇರ್ತಾರೆ. ಬಟ್ ಅವ್ರು ಯಾರು ಅಂತ ನಮ್ಗೆ ಗೊತ್ತಾಗಲ್ಲಾ.
ಲಾಸ್ಟ್ ವೀಕ್ ಸ್ವಿಮಿಂಗ್ ಕ್ಲಾಸ್ ನಿಂದ ಬಂದಾಗ್ಲು ಇದೆ ತರ ಲೇಟರ್ ಬ್ಯಾಗ್ ನಲ್ಲಿ ಇತ್ತು. ಏನು
ಅಂತ ಓಪನ್ ಮಾಡಿದ್ರೆ ನಾನು ನಿನ್ನ ಲೈಕ್ ಮಾಡೊವ್ನು.
ನೀನ್ ನನ್ನ ಜೊತೆ wonder la ಕ್ಕೆ ಬರ್ತಿಯಾ….ಹೀಗೆ ಏನೇನೋ stupied ಆಗಿ ಬರ್ದಿತ್ತು. ಈ ಸಲ ನು…
(ಮಗಳಿಗೆ
ದುಖಃ ಬಂದು ಅಮ್ಮಾನ ಹಗ್ ಮಾಡ್ತಾಳೆ. ಸಮಾಧಾನದಿಂದ ಕೇಳ್ತಾ ಇರೋ ಅಮ್ಮಾ ಅವಳನ್ನಾ ಪ್ರೀತಿಯಿಂದ ಸಂತೈಸುತ್ತಾ…)
ಅಮ್ಮಾಃ
ಅಳ್ಬೇಡ ಚಿನ್ನಿ ಇದೆಲ್ಲಾ ಈ ಏಜ್ ನಲ್ಲಿ ಕಾಮನ್. ಇದೇನ್ ಬಾರಿ ದೊಡ್ಡ
ವಿಷ್ಯ ಅಲ್ಲಾ. ಇದಿಕ್ಕೆಲ್ಲಾ ನೀನು ತಲೆ ಕೆಡ್ಸ್ ಗೊಳ್ಳೊಕೆ ಹೋಗ್ಬೇಡ.
ಮಗಳುಃ
(ದುಖಃ)
ಆದ್ರು ಅಮ್ಮಾ ಪ್ಲೀಸ್ ಏನಾದ್ರು ಮಾಡು. ನನಗಂತು ತುಂಬಾ ಟೆನ್ಷನ್ ಆಗ್ತಾ
ಇದೆ. ನನ್ನ ಪ್ರೇಂಡ್ಸ್ ಗೆ ಗೊತ್ತಾದ್ರೆ ನನ್ಗೆ ಶೇಮ್ ಆಗತ್ತೆ. ಅವ್ರು ನನ್ನ ಆಡ್ಕೊಳ್ತಾರೆ. ಅದಿಕ್ಕೆ
ನಾನು ನಮ್ ಮ್ಯಾಮ್ ಹತ್ರನು ಹೇಳೊಕೆ ಹೋಗಿಲ್ಲಾ.
ಅಮ್ಮಾ;(ಸಹಜವಾಗಿ)
ಇಷ್ಟಕ್ಕೆಲ್ಲಾ ಯಾಕೆ ಟೆನ್ಶನ್ ಮಾಡ್ಕೊಳ್ಳೊದು. ಯಾರೋ ನಿಮ್ ಕ್ಲಾಸ್ ಬಾಯ್ಸ್
ತರ್ಲೆ ಮಾಡಿರ್ತಾರೆ. ಅವ್ರದ್ದು ಹುಡುಗ್ ಬುದ್ದಿ. ನಾನು ನಾಳೆ ನಿಮ್ಮ್ ಮಿಸ್ ಹತ್ರ ಮಾತಾಡ್ತೀನಿ.
ಮಗಳುಃ(ಸಡನ್ನಾಗಿ
ಹೆದರಿಕೆಯಿಂದ)
ಅಮ್ಮಾ ಪ್ಲೀಸ್ ನೀನು ಸ್ಕೂಲಿಗೆ ಬರ್ಬೇಡ. ನೀನು ಬಂದ್ರೆ ನನ್ನ ಪ್ರೇಂಡ್ಸ್
ನಂದಿತಾ, ಅವನಿ…ಎಲ್ಲರಿಗೂ ಗೊತ್ತಾಗತ್ತೆ. ಆಮೇಲೆ ಅವ್ರು ಟೀಸ್ ಮಾಡ್ತಾರೆ.
ಅಮ್ಮಾಃ(ಸಮಾಧಾನ
ಮಾಡ್ತಾ)
ಹಾಗೇನಾಗಲ್ಲಾ…ಹೇದ್ರ್ ಬೇಡಾ. ನಾಳೆ ನಾನು ನಿಮ್ ಸ್ಕೂಲ್ ಮುಗಿದ್ ಮೇಲೆ
ಸಪ್ರೇಟ್ ಆಗಿ ನಿಮ್ ಮಿಸ್ ಹತ್ರ ಮಾತಾಡ್ತೀನಿ. ನೀನ್ ಏನು ಟೆನ್ಶನ್ ತಗೊಳ್ಬೇಡಾ. ನೋಡು ಮುಖ ಹೇಗ್
ಆಗಿದೆ. ಹೋಗು ಪ್ರೇಶ್ ಆಗ್ ಬಾ. ಪಾವ್ ಬಾಜಿ ಮಾಡಿದೀನಿ. ತಿನ್ನುವಿಯಂತೆ.
(ಮಗಳು
ಮುಖದಲ್ಲಿ ಸ್ವಲ್ಪ ಸಮಾಧಾನ ತಂದುಕೊಳ್ತಾ ಸರಿ ಅನ್ನೋ ತರ ಮುಖದಲ್ಲಿ ನಗು ತಂದುಕೊಂಡು ಹೋಗ್ತಾಳೆ. ಅವಳನ್ನೇ ನೋಡ್ತಾ ನಿಟ್ಟುಸಿರು ಬಿಡೊ ಅಮ್ಮಾ…)
ಅಮ್ಮಾಃ(ತನ್ನಷ್ಟಕ್ಕೆ
ಯೋಚ್ನೆ ಮಾಡ್ತಾ)
ಯಪ್ಪಾ ಏನ್ ಕಾಲ ಬಂತು. ಹುಡುಗಾಟಿಕೆ ವಯಸ್ಸಿನಲ್ಲಿ ಲವ್ ಗಿವ್ ಅಂತ ಲೇಟರ್
ಬರಿಯೋ ಬುದ್ದಿ….ಏನೇ ಆಗ್ಲಿ ಸ್ವಲ್ಪ ಹುಷಾರಾಗೆ ಹ್ಯಾಂಡಲ್ ಮಾಡ್ಬೇಕು. ತೀರ ಚಿಕ್ಕ್ ಹುಡುಗಿನು ಅಲ್ಲಾ…ಇತ್ತ ತಿಳುವಳಿಕೆನು ಬಂದಿಲ್ಲಾ.
ಪ್ರೇಂಡ್ಸ ಮುಂದೆ ಅವಮಾನ ಆದ್ರೆ ಅದೇ ಮನಸ್ಸಿಗೆ ಹಚ್ಗೊಳ್ಳೋ ಚಾನ್ಸ್ ಇದೆ. ಹೇಳೋಕ್ ಆಗಲ್ಲಾ ಇಗಿನ್
ಕಾಲದ್ ಹುಡುಗ್ರು..ಏನೋ ಮಾಡೋಕ್ ಹೋಗಿ ಏನೋ ಆದ್ರೆ ಕಷ್ಟ. ಮೊದ್ಲು ಮೇಡಮ್ ಹತ್ರ ಮಾತಾಡ್ತೀನಿ. ಸುಮ್ನೆ
ಇದ್ರು ಕಷ್ಟ. ಏನೇ ಆಗ್ಲಿ ಸ್ವಲ್ಪ ಹುಷಾರಾಗೆ ಹ್ಯಾಂಡಲ್ ಮಾಡ್ಬೇಕು.
(ನಿಟ್ಟುಸಿರು
ಬಿಟ್ಟು ಅಡುಗೆ ಮನೆಗೆ ಹೋಗೋ ಅಮ್ಮಾ.)
ಕಟ್
No comments:
Post a Comment