ಸಂದರ್ಭಃ ಗಂಡನ ಕಳೆದುಕೊಂಡ ಸುಮಾಳ ಮಾನಸಿಕ ತೊಳಲಾಟ.
ಸುಮಾ ಸುಮ್ನೆ ಮಂಕಾಗಿ ಪೇಪರ್ ಓದ್ತಾ ಇರ್ತಾಳೆ. ಅಲ್ಲೆ ಮಗಳು(ಸುಮಾರು
೭-೮ ವರ್ಷ) ತನ್ನ ಪಾಡಿಗೆ ಹೋಮ್ ವರ್ಕ ಮಾಡ್ತಾ ಇರ್ತಾಳೆ. ಅಷ್ಟರಲ್ಲೆ ಕಾಲಿಂಗ್ ಬೆಲ್ ಆಗತ್ತೆ.
ಬಾಗಿಲ ತೆಗಿಯೋ ಸುಮಾ. ಬಾಗಿಲಲ್ಲಿ ನಿಂತಿರೋ ರಾಜೇಶ್.(ಕೈ
ಯಲ್ಲಿ ಸ್ವಲ್ಪ ಪೇಪರ್ಸ ಇರತ್ತೆ).
ಸುಮಾಃ (ಸಹಜವಾಗಿ)
ಬನ್ನಿ ರಾಜೇಶ್....ನಾನೇ
ನಿಮ್ಗೆ ಪೋನ್ ಮಾಡ್ಬೇಕು ಅಂತಾ ಇದ್ದೆ.
(ರಾಜೇಶ್ ಒಳಗೆ ಬರ್ತಾ ಸೋಫಾದ್ ಮೇಲ್ ಕುಳಿತುಕೊಳ್ತಾನೆ.)
ರಾಜೇಶಃ (ಸಹಜವಾಗಿ)
ಸಾರಿ..ಸುಮಾಅವ್ರೆ ಸ್ವಲ್ಪ ಲೇಟ್
ಆಯ್ತು. ಎಕ್ಸಡನ್ಟ ಮತ್ ಬೈಕ್ ಇನ್ಶುರನ್ಸ ಅಂತ ಏನೇನೊ formalities ಇತ್ತು. ಎಲ್ಲಾ ಕ್ಲಿಯರ್ ಮಾಡೋ ತನಕ ಇಷ್ಟು ಟೈಮ್ ಹಿಡಿತು.
ಸುಮಾಃ (ಸ್ವಲ್ಪ್ ಡಲ್ ಆಗಿ)
ಓ ಹೌದಾ,,.ಮುಗಿತಾ
ಇನ್ನೇನಾದ್ರು….
ರಾಜೇಶ್ಃ(ಸಹಜವಾಗಿ)
ಹಾಗೇನಿಲ್ಲಾ….ಎಲ್ಲಾ
ಕ್ಲಿಯರ್ ಆಯ್ತು. ಇನ್ನೇನ್ fifteen days ಗೆ ನಿಮ್ ಕೈ ಗೆ ಅಮೌನ್ಟ್ ಬರತ್ತೆ.
(ಸುಮಾ ಗಂಭಿರವಾಗ್ತಾಳೆ…ಏನೋ ಯೋಚ್ನೆಲಿ ಕಳ್ದೊಗ್ತಾಳೆ.
ಸುಮಾಳ ನೋಡ್ತಾ ರಾಜೇಶ್..)
ರಾಜೇಶಃ(ಬೇಸರ ಮತ್ತು ಗಂಭಿರ)
ನೋಡಿ ಸುಮಾ ಅವ್ರೆ
ನನ್ಗೆ ನಿಮ್ ಪರಿಸ್ಥಿತಿ ಅರ್ಥ ಆಗತ್ತೆ. ಶಿವು ನನ್ಗೆ ಮೊದ್ಲಿಂದನು ಗೊತ್ತು ಅವ್ನು ಯಾವಾಗ್ಲು ಸೆವಿಂಗ್ಸ್…ಫ್ಯುಚರ್
ನಲ್ಲಿ ಮುಖ್ಯಾ ಅಂತ ಹೇಳ್ತಾ ಇದ್ದ. ಇವತ್ತು ನಿಮ್ನಾ ನಿಮ್ ಮಗ್ಳನ್ನಾ ಅವ್ನು ಅರ್ಧಕ್ಕೆ ಬಿಟ್ಟು
ಹೋದ್ರು ಅವ್ನಾ ಆ ತೇರಿ ನಿಮ್ಮಾ ನಿಮ್ ಮಗ್ಳ ಜೀವ್ನಕ್ಕೆ ಹೆಲ್ಪ ಆಗಿದೆ. ನೀವ್ ಏನು ಚಿಂತೆ ಮಾಡ್ಬೇಡಿ. ಸುಮಾರು
80 /90 ಲಕ್ಷ ಸಿಗತ್ತೆ.
(ಸುಮಾ ಶಾಕ್ ಆಗಿ ನೋಡ್ತಾಳೆ. ಏನ್ ಹೇಳ್ಬೇಕು ಅಂತ ತೋಚದೆ ಸುಮ್ನೆ ಇರ್ತಾಳೆ.)
ರಾಜೇಶಃ(ಸಹಜವಾಗಿ)
ಸಾರಿ ಹೀಗ್ ಹೇಳ್ತೀನಿ
ಅಂತ ತಪ್ಪು ತಿಳ್ಕೋ ಬೇಡಿ. ಶಿವು ನಿಮ್ ಜೀವ್ನದಲ್ಲಿ ಎಷ್ಟು ಮುಖ್ಯ ಅಂತ ನನ್ಗೆ ಗೊತ್ತು. ಏನೋ ವಿಧಿ
ಆಟ ಆಗ್ಬಾರದ್ದು ಆಗ್ ಹೋಯ್ತು. ಅವ್ನು ಇಲ್ದೆ ಇದ್ರು ಫೈನಾನ್ಶಿಯಲ್ ಸಪೊರ್ಟ್ ನಿಮ್ಗೆ ಸಿಗ್ತಾ ಇದೆ.
ನೀವ್ ಮನ್ಸ್ ಗಟ್ಟಿ ಮಾಡ್ಕೊಂಳ್ಬೇಕು. ನನ್ನ್ ಅಮ್ಮಾನು ಹೀಗೆ ಹೇಳ್ತಾ ಇದ್ರು. ಮೋಸ್ಟಲಿ ನಾಳೆ ನಾಡಿದ್
ಹಾಗೆ ಇಲ್ಲಿಗೆ ಬರ್ಬಹುದು
ಸುಮಾಃ(ಗಂಭಿರವಾಗಿ..ನಿಟ್ಟುಸಿರು ಬಿಡ್ತಾ)
ಏನೋ…ಯೋಚ್ನೆ ಮಾಡಿದಷ್ಟು
ತಲೆ ಕೆಡತ್ತೆ. ಇನ್ಶುರನ್ಸ್ ದಲ್ಲಾ ನೀವ್ ನೋಡ್ಕೊಂಡಿದಕ್ಕೆ ತುಂಬಾ ಥ್ಯಾಂಕ್ಸ್. ಇಲ್ಲಾ ಅಂದ್ರೆ
ನನ್ಗೆ ಕಷ್ಟ ಆಗ್ತಿತ್ತು.
ರಾಜೇಶಃ(ಸಹಜವಾಗಿ)
ಇದಿಕ್ಕೆಲ್ಲಾ ಯಾಕ್
ಥ್ಯಾಂಕ್ಸ್….ಅವ್ನ ಫ್ರೇಂಡ್ ಆಗಿ ಇಷ್ಟು ಮಾಡ್ದೆ ಇದ್ರೆ ಹೇಗೆ. ಇನ್ನೇನಾದ್ರು ಹೆಲ್ಪ್ ಬೇಕಿದ್ರೆ
ನನ್ ಕೇಳಿ..ಸಂಕೋಚ ಮಾಡ್ಕೊಳ್ ಬೇಡಿ. ಸರಿ…ನಾನ್ ಇನ್ನು ಬರ್ತಿನಿ.
ಸುಮಾಃ(ಅವ್ರನ್ನಾ ತಡಿಯೋ ತರ)
ಅಯ್ಯೋ ತಾಳಿ ನಿಮ್ಗೆ
ಒಂದ್ ಕಾಫಿ ನು ಕೇಳ್ಲೇ ಇಲ್ಲಾ. ಒಂದ್ ನಮಿಷ ಕುತ್ಗೊಳಿ. ಕಾಫಿ ಮಾಡ್ತೀನಿ.
ರಾಜೇಶ್ಃ(ನಿರಾಕರಿಸುವ ರೀತಿ)
ಬೇಡ..ಬರ್ಬೇಕಿದ್ರಷ್ಟೆ
ಎಲ್ಲಾ ಮುಗ್ಸಗೊಂಡು ಬಂದೆ. (ಹೊರ್ಡೊ ರೀತಿ..ಸೋಫಾದಿಂದ
ಏಳ್ತಾ) ಸರಿ ಇನ್ನು ನಾನ್ ಬರ್ತಿನಿ.
(ಅಲ್ಲೆ ಕುಳಿತಿರೋ ಮಗುಗೆ ಬೈ ಮಾಡ್ತಾ) ಬರ್ತಿನಿ.. ಪುಟ್ಟಿ…
( ಮಗಳು ಅವನಿಗೆ ಬೈ ಮಾಡ್ತಾಳೆ. ರಾಜೇಶ್ ಅಲ್ಲಿಂದ
ಹೋರ್ಡ್ತಾನೆ. ಸುಮಾ ಬಾಗಿಲ ಹಾಕಿ ಓಳಗೆ ಬರ್ತಾಳೆ. ಮಂಕಾಗಿ ಕುಳಿತುಕೊಳ್ತಾಳೆ. ಸೋಫಾಕೆ ತಲೆ ಒರಗಿ
ಕುಳಿತುಕೊಳ್ತಾ.)
ಸುಮಾಃ(ತನ್ನಷ್ಟಕ್ಕೆ)
ಗಂಡ ಸತ್ತ ಅಂತ ಬೇಸರ
ಪಡ್ಲೋ ಅಥ್ವಾ…ಕೋಟಿ ದುಡ್ಡು ಬಂದಿದ್ದಕ್ಕೆ ಖುಷಿ ಪಡ್ಲೋ…. ಹತ್ತು ಹತ್ತ್ ರೂಪಾಯಿಗೂ ಲೆಕ್ಕ ಕೇಳೊ
ಇವ್ರಿಗೆ ನೀವ್ ಸತ್ ಮೇಲ್ ಕೋಟಿ ತಗೊಂಡು ಹೋಗ್ತಾ ಇದ್ರಾ ಅಂತ ಕೇಳ್ತಿದ್ದೆ.…ಆದ್ರೆ ಕೋಟಿ ನನ್ಗೊಸ್ಕರ
ಬಿಟ್ ಹೋಗಿದಾರೆ. ಯಾಕ್ರೀ…ಇದ್ದಾಗ್ ಒಂದ್ ದಿನ ನೆಮ್ದಿ ಇಂದ ಒಂದ್ ದಿನ್ ಉಂಡ್ಕೊಂಡ್ ತಿಂದ್ಕೊಂಡ್
ಇಲ್ಲಾ…ಇಗ್ ನಮ್ನಾ ನಿಮ್…
(ಒಂದೆ ಸಲಕ್ಕೆ ಜೋರಾಗಿ ಅಳು ಬರತ್ತೆ. ಮಗಳು ಅಲ್ಲಿಗೆ
ಬರ್ತಾಳೆ.)
ಮಗಳು;(ಮುಗ್ದವಾಗಿ)
ಯಾಕಮ್ಮಾ…ಅಳ್ತಾ
ಇದೀಯಾ. ಯಾಕ್ ಪಪ್ಪಾ ನೆನ್ಪ್ ಆದ್ರಾ..(ಅಮ್ಮನ ಮುದ್ದು
ಮಾಡೊ ತರ) ಅಳ್ಬೇಡಾ…ಅಜ್ಜಿ ಹೇಳಿದಾರೆ ಪಪ್ಪಾ ಭೂಮಿ ಋಣ ತೀರ್ಸಗೊಂಡು ಸ್ವರ್ಗಕ್ಕೆ ಹೊಗಿದಾರೆ
ಅಲ್ಲಿಂದನೆ ನಮ್ಮನ್ನಾ ನೋಡ್ತಾರೆ ಅಂತ. ನಾವ್ ಇಲ್ಲಿ ಖುಶಿ ಯಿಂದ ಇದ್ರೆ ಪಪ್ಪಾನು ಅಲ್ಲಿ ಖುಶಿ ಇಂದ
ಇರ್ತಾರಂತೆ. ಅಳ್ಬೇಡಾ ಅಮ್ಮಾ…ಆಮೇಲ್ ಪಪ್ಪಾನು ಅಳ್ತಾರೆ.
(ಮಗಳ ಮಾತನ್ನು ಕೇಳಿ ಭಾವುಹಳಾಗೋ ಸುಮಾ. ಮಗಳನ್ನಾ
ಮುದ್ದು ಮಾಡ್ತಾಳೆ.ದುಖಃ ಬರತ್ತೆ. ಅಳು ಕಂಟ್ರೊಲ್ ಮಾಡ್ಕೊಳ್ತಾ)
ಸುಮಾಃ
ಪುಟಾ…ನಾನ್ ಅಳಲ್ಲಾ
ನನ್ಗೆ ..ನೀನ್ ಇದೀಯಾ….ನಿನ್ನ ಮುದ್ದಾದ್ ಮಾತು ಆಟ…(ಅವ್ಳ
ಗಲ್ಲ ಹಿಡಿತಾ) ನಾನ್ ಯಾವಾಗ್ಲು ಅಳಲ್ಲಾ…ನೀನು ಯಾವಾಗ್ಲು ಅಳ್ಬೇಡಾ..ಹೋಗು ನೀನು ಚನಾಗ್ ಓದು.
ನನ್ಗೆ ಅಷ್ಟೆ ಸಾಕು ಪುಟ್ಟಿ.
(ಸರಿ ಅನ್ನೋ ತರ ಮಗಳು ಅಲ್ಲಿಂದ ಹೋಗ್ತಾಳೆ. ಸುಮಾ ಅವಳು ಹೋಗಿದ್ದು ನೋಡ್ತಾ…ಭಾವುಕಳಾಗಿ ..)
ಸುಮಾಃ(ಸ್ವಗತ)
ಹ್ಮ್…ನಿಮ್ ಅಜ್ಜಿ
ಹೇಳಿದ್ದು ನಿಜ. ಅವ್ರು ಮೇಲಿಂದ ನೋಡ್ತಾ ಇರೋದು…ನಾವು ಖುಶಿ ಇಂದ ಇರ್ಲಿ ಅಂತಾನೆ ದೇವ್ರು ಅವ್ರ ಬೇಗ
ಕರ್ಸಗೊಂಡಿದ್ದಾ….ಅಥ್ವಾ…ಸದ್ಯಾ ನಾನೆ ಅವ್ರಿಂದ ಬೇರೆ ಹೋಗ್ತಿದ್ನಾ….ನಾನೆ ಬೇರೆ ಹೋದ್ರೆ ನನ್ಗೆ
ಈಗ್ ಸಿಗೋ ಸಿಂಪತಿ ಸಿಗ್ತಾ ಇತ್ತಾ…ಅಥ್ವಾ…ದಿಮಾಕಿನ್ ಹೆಂಗ್ಸು ಅನ್ನೊ ಪಟ್ಟ ಕಡ್ತಿದ್ರಾ…ಇನ್ನು ಮಗ್ಳು….ಹ್ಮ್….ತ್ರಿಶಂಕು
ಸ್ಥಿತಿನಾ.
(ಸುಮಾ ಸೋಫಾದಿಂದ ಏಳ್ತಾಳೆ…ಅತ್ತ ಇತ್ತ ಓಡಾಡ್ತಾಳೆ.
ತಲೆಯಲ್ಲಿ ಏನೇನೋ ಯೋಚ್ನೆ ಬಂದ ತರ ಕೈ ಕಣ್ಣಿನ ಮೇಲೆ ಇಡ್ತಾ ನಿಲ್ತಾಳೆ.)
ಸುಮಾಃ(ತನ್ನಷ್ಟಕ್ಕೆ)
ರಾಜೇಶ್ ಹೇಳಿದ್
ಹಾಗೆ ಜೀವ್ನಕ್ಕೆ ತೊಂದ್ರೆ ಇಲ್ಲಾ. ಪೈನಾನ್ ಶಿಯಲ್ ಸಫೊರ್ಟ ಸಿಕ್ಕಿದೆ. ಆದ್ರೆ ಇದು ನನ್ಗೆ ಮತ್
ನನ್ ಮಗಳಿನ ಭವಿಷ್ಯಕ್ಕೆನಾ…ಅಥ್ವಾ ಇದಿಕ್ಕೆ ಇನ್ನೆರಡು ಕೈ ಸೇರತ್ತಾ. ಇದು ಮೇಲಿಂದ ನೀವ್ ನೋಡಿದ್ರು
ಒಂದೆ.…ಇಲ್ಲಿದ್ದಾಗ ನೀವ್ ನೋಡ್ದಾಗ ಆಗಿದ್ದು ಒಂದೇ…
(ಅಷ್ಟರಲ್ಲೆ ಕೈ ನಲ್ಲಿದ್ದ ಮೊಬೈಲ್ ರಿಂಗ್ ಆಗತ್ತೆ.
ಕೈ ನಲ್ಲಿ ಇದ್ದ ಮೊಬೈಲ್ ನೋಡತ್ತಾಳೆ. ಅತ್ತೆ ಅಂತ ಡಿಸ್ ಪ್ಲೇ ಬರತ್ತೆ. ಮೊಬೈಲ್ ನೋಡ್ತಾ ವ್ಯಂಗ ನಗೊ ಸುಮಾ.)
ಕಟ್
No comments:
Post a Comment