ವಾಟ್ಸ್ ಅಪ್ ಗ್ರೂಪ್ ;
ಯೋಗಾ ಗ್ರೂಪ್ ;
ಗ್ರೂಪ್ ಅಡ್ಮಿನ್ ; ಪ್ರೇಮಾ, ಜಯಶ್ರೀ, ಶಹಿಸ್ಥಾ,
ರೂಪಾ, ವಿನುತಾ.
ನಮ್ಮನೆ
ದಿನಸಿ ಲಿಸ್ಟ ಬಯಲಾದಾಗ.
ಮನೆಲಿ ಒಬ್ಬರೆ ಯೋಗ
ಮಾಡಲು ಯಾಕೋ ಬೆಸರ ಎಂದು ನಾವು ಐದು ಜನ ಗೆಳತಿಯರು ಸೇರಿ ಯೋಗಾ ಮಾಡಲು ನಿರ್ಧಾರ ಮಾಡಿದೆವು. ಎಲ್ಲರಿಗೂ
ವಾರಕ್ಕೆ ಎಳು ದಿನವಾದರೆ ನಮಗೆ ನಾಲ್ಕೆ ದಿನ. ಯೋಗ ಇವತ್ತು ಇದಿಯೋ-ಇಲ್ಲವೋ ಅಂತ ತಿಳಿದು ಕೊಳ್ಳವುದಕ್ಕೊಸ್ಕರವೆ
ಒಂದು ಯೋಗಾ ಗ್ರೂಪ್ ಮಾಡಿದೆವು. ಅದರಲ್ಲಿ ಯೋಗಕ್ಕೆ
ಸಂಭಂದ ಪಟ್ಟ ವಿಚಾರಗಳು, ಡಯಟ್ ಆಹಾರದ ಬಗ್ಗೆ ಹೀಗೆ
ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆವು.
ನಾನು ನನ್ನ ಅನುಕೂಲಕ್ಕೊಸ್ಕರ
ನನ್ನದೆ ಒಂದು ಸೆಲ್ಪ್ ಅನ್ನೋ ಪೊಲ್ಡ್ ರ್ ಕ್ರಿಯೆಟ್ ಮಾಡಿದ್ದೆ. ಅಲ್ಲಿ ನಾನು ನನ್ನ ಅನುಕೂಲಕ್ಕೊಸ್ಕರ
ಕೆಲವು ಕೆಲಸಗಳನ್ನು, ಮಗಳ ಸ್ಕೂಲಿನ ಪೊಜಕ್ಟ ಒಪ್ಪಿಸುವ ದಿನಾಂಕ, ಸೆಮಿನಾರ್ ದಿನಾಂಕ, ಹಾಗೂ ನಮ್ಮನೆ ದಿನಸಿ ಸಾಮಾನಿನ ಲಿಸ್ಟ್ ಕೂಡ ಅದರಲ್ಲಿ ಇರುತಿತ್ತು.
ಹೀಗೆ ಒಮ್ಮೆ ನಾನು ಲಿಸ್ಟ್ ಮಾಡುವಾಗ ಚಿಕ್ ಪಿಸ್ (ಕಾಬೂಲ್ ಕಡಲೆ) ಬರೆಯಲು ಹೋಗಿ ಚಿಕನ್ ಪಿಸ್ ಬರೆದೆ. ಅದು ನಾನು ಸೆಲ್ಪ್ ಪೊಲ್ಡ್ ರ್ ಗೆ
ಕಳುಹಿಸುವ ಬದಲು ಯೊಗಾ ಗ್ರೂಪ್ ಗೆ ಕಳುಹಿಸಿದೆ. ಅಲ್ಲೆ ಎಡವಟ್ಟಾಗಿದ್ದು. ಪಕ್ಕ ಸಸ್ಯಹಾರಿಯಾದ ನನಗೆ
ಮರುದಿನ ಯೋಗ ಗ್ರುಪ್ ನಲ್ಲಿ ಚಿಕನ್ ಪಿಸ್ ವಿಷಯ ತಗೊಂಡ್ ಕಾಲ್ ಎಳೆದದ್ದೆ ಎಳೆದದ್ದು. ನನ್ಗೂ ಕ್ಲಾಸ್
ಗೆ ಹೋದ ಮೇಲೆ ನಾನ್ ಮಾಡಿದ ಸ್ಪೆಲಿಂಗ್ ಮಿಸ್ಟೆಕ್ ಗೊತ್ತಾಗಿದ್ದು. ಎಲ್ಲರಿಗೂ ಎಷ್ಟೆ ಹೇಳಿದ್ರು
ಕೆಲವೊಮ್ಮೆ ಚಿಕನ್ ಪಿಸ್ ತಂದ್ರಾ…ಚನ್ನಾಗಿದಿಯಾ? ಅಂತ ಇವತ್ತಿಗೂ ಆಡ್ಕೊಳ್ಳೊರು.
ಇದು ಉದಯವಾಣಿ ಜೋಶ್ ಪುರವಣಿಗೆಗೆ ಬರೆದ ಲೇಖನ.
No comments:
Post a Comment