Thursday, March 14, 2019

ತಪ್ಪಿದ ಅವಘಡ


                                              ತಪ್ಪಿದ ಅವಘಡ

ಬೆಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಗದ್ದೆನೆ ಕ್ರಿಕೆಟ್ ಮೈದಾನ.  ಒಮ್ಮೆ ಹೀಗೆ ಮಕ್ಕಳೆಲ್ಲ ಸೇರಿ ಕ್ರಿಕೆಟ್ ಆಡುತ್ತಾ ಇದ್ದರು. ಬಾಲ್ ಹೇಗೋ  ಅಲ್ಲೆ ಪಕ್ಕದಲ್ಲೆ ಹಾದು ಹೋಗುವ ರೈಲ್ವೆ ಹಳಿಯ ಬಳಿ ಹೋಯಿತು. ಬಾಲ್ ತಗೋಂಡ್ ಬರೋಕ್ ಹೋದ ರವಿಗೆ ರೈಲ್ವೆ ಹಳಿ ಬಿರುಕು ಬಂದದ್ದು ಕಾಣಿಸಿತು. ಅದನ್ನು ನೋಡಿದ ರವಿ ತನ್ನ ಬಾಕಿ ಗೆಳೆಯರನ್ನು ಉದ್ರೇಕದಲ್ಲಿ ಕರೆದ. ಎಲ್ಲರು ಆಶ್ಚರ್ಯದಿಂದ ಏನಾಗಿರ ಬೇಕು ಎಂದು ಅಲ್ಲಿಗೆ ಓಡಿ ಬಂದರು. ಅಲ್ಲಿ ರೈಲು ಹಳಿಯ ಜೋಡಣೆ ಕಳಚಿತ್ತು. ಇದನ್ನು ನೋಡಿ  ಈ ಹಳಿಯಲ್ಲಿ ರೈಲು ಬಂದರೆ ಅಪಘಾತ ಆಗುವುದು ಎಂದು ಮಾತಾಡುಕೊಂಡರು. ಸುಮಾರು ತಾವು ಶಾಲೆಯಿಂದ ಬರೋ ವೆಳೆಗೆ ರೈಲು ಬರೋದು ದಿನ ನೋಡುತ್ತಿದ್ದರು. ಇನ್ನೇನು ರೈಲು ಬರೋ ಸಮಯವಾಯಿತು,ಹೇಗಾದರು ಮಾಡಿ ಈ ಅವಘಡ ತಪ್ಪಿಸ ಬೇಕು ಎಂದು ಎಲ್ಲರು ಮಾತಾಡಿಕೊಂಡರು. ಹೀಗೆ ಯೋಚಿಸುತ್ತಿದ್ದಾಗ ಒಬ್ಬ ಹುಡುಗನಿಗೆ ಅಲ್ಲೆ ಐಸ್ ಕ್ರೀಮ್ ಮಾರುವ ರಾಮು ಚಾಚ ಕಂಡನು. ಅವನು ತಲೆಗೆ ಕೆಂಪು ರುಮಾಲು ಸುತ್ತಿದ್ದನು. ಆ ಹುಡುಗ ತನ್ನ ಬೇರೆ ಸ್ನೇಹಿತರಿಗೆ ಅವನ ರುಮಾಲನ್ನು ಒಂದು ಕೋಲಿಗೆ ಕಟ್ಟಿ ಅದನ್ನು ರೈಲು ಬರೋ ಮುಂಚೆ ತೋರಿಸುವುದು. ತಮ್ಮ ಶಾಲೆಯ ಪಾಠದಲ್ಲಿ ಹೀಗೆ ಕೆಂಪು ಬಟ್ಟೆ ತೋರಿಸಿದರೆ ರೈಲು ಚಾಲಕನಿಗೆ ರೈಲು ನಿಲ್ಲಿಸುವ ಸೂಚನೆ ಸಿಕ್ಕಿದ ಹಾಗೆ ಎಂದು ಓದಿದ್ದು ನೆನಪು. ಎಲ್ಲರಿಗೂ ಇದು ಸರಿ ಎಂದೆನಿಸಿ ರಾಮು ಚಾಚನ ಬಳಿ ಹೋದರು. ಅಲ್ಲಿ ಒಬ್ಬ ಹುಡುಗ , ರಾಮು ಚಾಚಾ ನೀವ್ ಇವತ್ತು  ನಮ್ಗೆ ನಿಮ್ ತಲೆಗೆ ಕಟ್ಟಿದ ಆ ಕೆಂಪು ಟುವಾಲ್ ಕೊಡ್ತಿರಾ, ನಾವ್ ಆಮೇಲ್ ನಿಮ್ಗೆ ಬಂದ್ ಕೊಡ್ತೀವಿ”  ಅಂತ ಹೇಳಿದ. ಇವನ ಮಾತಿಗೆ ರಾಮು ಚಾಚಾನಿಗೆ ರೇಗಿ ಹೋಯಿತು. ಆತ ಮಕ್ಕಳಿಗೆ, “ಏನ್ರೋ ಇಷ್ಟು ದಿನ ಖಾಸ್ ಇಲ್ಲದೆ ಐಸ್ ಕ್ರೀಮ್ ಕೇಳ್ತಿದ್ರಿ. ಇವತ್ತು ನನ್ನ ರುಮಾಲ್ ಮೇಲ್ ಕಣ್ಣ್ ಬಿತ್ತೆನ್ರೋ….? ಮೊದ್ಲು ನಡಿರಿ ಇಲ್ಲಿಂದ. ಇಲ್ಲ ಅಂದ್ರೆ ನಿಮ್ ಮಾಸ್ತರ್ ಗೆ ಪೋನ್ ಮಾಡ್ತೀನಿ ನೋಡಿ. ಮುಂದ್ ಸ್ಕೂಲ್ ಶುರು ಆದಾಗ ನಿಮ್ ಗ್ರಾಚಾರ ಬಿಡ್ಸ್ ಬೇಕು” ಅಂದನು. ಆಗ ಮಕ್ಕಳೆಲ್ಲ ಸಪ್ಪೆ ಮುಖ ಮಾಡಿಕೊಂಡರು. ಅದರಲ್ಲಿ ಒಬ್ಬ, “ಇಲ್ಲ ರಾಮು ಚಾಚಾ ನಾವೆನ್ ಬೇಕಂತನೆ ನಿಮ್ ಟುವಾಲ್ ಕೇಳ್ತಾ ಇಲ್ಲ. ಅದೆನ್ ಆಯ್ತು ಅಂದ್ರೆ….” ಇದ್ದ ವಿಷಯ ಹೇಳಿದ. ಆಗ ರಾಮು ಚಾಚಾನಿಗೆ  ಮಕ್ಕಳ ಮಾತು ಸರಿ ಏನಿಸಿತು. ನೂರಾರು ಪ್ರಯಾಣಿಕರು ಖುಶಿಯಿಂದ ತಮ್ಮ ತಮ್ಮ ಊರಿಗೆ ಹೋಗುವಾಗ ಏನು ಅವಘಡ ಆಗ ಬಾರದು ಎಂದು ತನ್ನ ಕೆಂಪು ರುಮಾಲನ್ನು ಮಕ್ಕಳಿಗೆ ಕೊಟ್ಟ. ಮಕ್ಕಳು ಅಲ್ಲೆ ಒಂದು ಕೋಲಿಗೆ ಕಟ್ಟಿ ಬಿರಿದ ಹಳಿಗಿಂತ ಮುಂದೆ ಹೋಗಿ ಕೋಲನ್ನು ಹಿಡಿದರು. ಅದು ಅಲ್ಲದೆ ರಾಮು ಚಾಚಾ ತನ್ನ ಮೊಬೈಲ್ ನಿಂದ ತನ್ನ ಪರಿಚಯದ ರೈಲ್ವೆ ನಿರ್ವಾಹಕನಿಗೆ ಪೋನ್ ಮಾಡಿ ತಿಳಿಸಿದ. ಅವರು ತಕ್ಷಣ ಅಲ್ಲಿಗೆ ಬಂದು ಕಂಬಿಯನ್ನು ರಿಪೇರಿ ಮಾಡಿದರು. ತಪ್ಪಿದ ಅನಾಹುತಕ್ಕೆ ಮಕ್ಕಳಿಗೆ ಎಲ್ಲರಿಂದ ಶಭಾಶ್ ಗಿರಿ ಸಿಕ್ಕಿತು. ರಾಮು ಚಾಚಾ ಖಾಸಿಲ್ಲದೆ ಮಕ್ಕಳಿಗೆ ಐಸ್ ಕ್ರೀಮ್ ಕೊಟ್ಟ,

No comments: