ಸ್ನೇಹ
ಸ್ನೇಹವಾಗಿಯೇ…..
ಸುರೇಶನಿಗೆ ಮದುವೆ
ವಯಸ್ಸಾದರು ತನ್ನೆರಡು ತಂಗಿಯಂದಿರು ಪರಿಮಳ ಮತ್ತು ಪರಿಣಿತನ ಸಲುವಾಗಿ ತನ್ನ ಮದುವೆಗೆ ಹಿಂದೇಟು ಹಾಕಿದ,
ಸುರೇಶನ ತಾಯಿಗು ಅಪ್ಪ ಇಲ್ಲದ ತನ್ನ ಹೆಣ್ಣು ಮಕ್ಕಳಿಗೆ ಅಣ್ಣನೆ ಮುಂದೆನಿಂತು ಮದುವೆ ಮಾಡಿ ತಾನು
ಮದುವೆ ಆಗಲಿ ಎಂದು ಮನಸ್ಸಿನಲ್ಲಿತ್ತು. ತಂಗಿಯಂದಿರ
ಮದುವೆಗೆ ಸ್ವಲ್ಪ ದುಡ್ಡು ಹೊಂದಿಸುವ ಅನಿವಾರ್ಯತೆ ಇತ್ತು. ಸುರೇಶನ ಒಳ್ಳೆ ಸಂಬಳ ಮತ್ತು ಅವನ ಅಚ್ಚು
ಕಟ್ಟಾದ ಜೀವನದಲ್ಲಿ ಉಳಿತಾಯ ಮಾಡಬಹುದು.
ಸುರೇಶನ ತಾಯಿ ಸಾವಿತ್ರಮ್ಮ
ತನ್ನ ಹೆಣ್ಣು ಮಕ್ಕಳ ಮದುವೆಗೊಸ್ಕರ ತನ್ನ ಬಳಗದವರ ಹತ್ತಿರ ಆಗಾಗ ಹೇಳುತ್ತಿದ್ದಳು. ಸುರೇಶನು ತನ್ನ
ಪರಿಚಯದವರ ಹತ್ತಿರ ತಂಗಿಯಂದಿರ ಜಾತಕ ಕೊಡುತ್ತಿದ್ದ. ಇದರ ಪರಿಣಾಮವಾಗಿ ಕೆಲವು ಸಂಭಂದಗಳು ಬಂದವು.
ಅಕ್ಕ-ತಂಗಿ ಇಬ್ಬರಿಗೂ ಒಂದೆ ದಿನ ಜೋಡ್ ಮದುವೆ ಮಾಡಲಾಯಿತು. ಸುರೇಶನಿಗೆ ಅಪ್ಪ ಇಲ್ಲದ ಕಾರಣ ಗಂಡಿನವರ
ಒಪ್ಪಿಗೆ ಮೇರೆಗೆ ಎಲ್ಲವು ಸುಸುತ್ರವಾಗಿ ನಡೆಯಿತು.
ಪರಿಮಳನ ,ಮನೆಯಲ್ಲಿ
ಎರಡು ಗಂಡು ಮಕ್ಕಳು. ಹಿರಿಯವಳೆ ಇವಳ ಗಂಡ. ಎರಡನೆಯವನು ಆನಂದ ಒಳ್ಳೆ ಕೆಲಸದಲ್ಲಿ ಇದ್ದ. ಪರಿಣಿತನ ಮನೆಯಲ್ಲಿ ಒಂದೇ ಮಗ. ಅವಳಿಗೊಂದು ನಾದಿನಿ ಸ್ನೇಹಾ
ಬಿ.ಸಿ.ಎ. ಮಾಡುತ್ತಿದ್ದಳು. ನೋಡಲು ಚನ್ನಾಗಿದ್ದಳು. ಹಾಗೆ ಲವಲವಿಕೆಯಿಂದ ಇರುತ್ತಿದ್ದಳು. ಜೋಡಿ
ಮದುವೆಯಲ್ಲಿ ಅವಳದ್ದೆ ಓಡಾಟ. ಮದುವೆಗೆ ಲೈನ್ ಕ್ಲಿಯರ್ ಆದ ಸುರೇಶ ಮತ್ತು ಆನಂದ ಇಬ್ಬರಿಗೂ ಮದುವೆಯಲ್ಲಿ
ಇವಳ ಮೇಲೆ ಏನೋ ಆಸಕ್ತಿ. ಯಾರು ತೋರಿಸಿಕೊಳ್ಳದೆ ತಮ್ಮಷ್ಟಕ್ಕೆ ತಾವು ಮನಸ್ಸಿನಲ್ಲಿ ಪ್ರೀತಿ ಹೆಣೆದರು.
ಸ್ನೇಹಾ ಸ್ವಲ್ಪ
ಸೋಶಿಯಲ್ ಹುಡುಗಿ. ಎಲ್ಲರಲ್ಲೂ ಚನ್ನಾಗಿ ಮಾತಾಡಿಕೊಂಡು ಇರುವವಳು. ಕೆಲವರು ಇದನ್ನು ತಪ್ಪು ಭಾವಿಸಿದ್ದು ಇದೆ. ಆದ್ರೆ ಸ್ನೇಹಾ ತನ್ನ ಲಿಮಿಟ್ ನಲ್ಲಿ
ಇರುವಳು. ಇವಳಿಗೆ ಮನೆಗೆ ಬಂದ ಅತ್ತಿಗೆ ಪರಿಣಿತ ಒಳ್ಳೆ ಗೆಳತಿಯಾದಳು. ಇಬ್ಬರು ಅತ್ತಿಗೆ- ನಾದಿನಿ
ತರ ಇಲ್ಲದೆ ಒಳ್ಳೆ ಗೆಳತಿ ತರ ಇದ್ದರು. ಈ ಕಾರಣದಿಂದ ಮನೆಯ ಶಾಂತಿಗು ಭಂಗ ಆಗಲಿಲ್ಲ. ಕೆಲವೊಮ್ಮೆ
ಪರಿಣಿತ ಅಮ್ಮನ ಮನೆಗೆ ಹೋಗುವಾಗ ಸ್ನೇಹಾಳನ್ನು ಕರೆದುಕೊಂಡು ಹೋಗುತ್ತಿದ್ದಳು. ಅವಳಿಗು ಒಂದು ಬದಲಾವಣೆ
ಆಗಲಿ ಎಂಬ ಉದ್ದೇಶದಿಂದ. ಇದು ಸುರೇಶನಿಗೆ ಸ್ವಲ್ಪ ಅನುಕೂಲವಾಯಿತು. ಮದುವೆ ಮನೆಯಲ್ಲಿ ಅಷ್ಟಾಗಿ ಮಾತಾಡದೆ
ದೂರ ಇದ್ದ ಸುರೇಶ ಈಗ ಸ್ನೇಹಳ ಜೊತೆ ಸ್ವಲ್ಪ ಮಾತಾಡಲು ಶುರು ಮಾಡಿದ. ಸ್ನೇಹಳು ಸಹಜವಾಗಿ ಹರಟೆ ಹೊಡೆಯುತ್ತಿದ್ದಳು.
ಒಮ್ಮೆ ಮೊದಲ ವರ್ಷದ
ಯುಗಾದಿ ಹಬ್ಬಕ್ಕೆ ಸುರೇಶನ ತಾಯಿ ತನ್ನ ಹೆಣ್ಣು ಮಕ್ಕಳ ಜೊತೆ ಎರಡು ಮನೆಯವರನ್ನು ಊಟಕ್ಕೆ ಕರೆದಳು.
ಪರಿಮಳನ ಮನೆಯವರ ಜೊತೆ ಆನಂದನು ಬಂದ. ಅವನಿಗೆ ಸ್ನೇಹ ಬರ್ತಾಳೆ ಎಂಬ ಸಂಬ್ರಮ. ಅದು ಅಲ್ಲದೆ ಸುರೇಶ
ಮತ್ತು ಆನಂದ ನ ಆಫೀಸ್ ಅಕ್ಕ-ಪಕ್ಕ ಆದ ಕಾರಣ ಇಬ್ಬರು ಅಪರೂಪಕ್ಕೆ ಬೇಟಿ ಆಗ್ತಾ ಇದ್ದರು. ಕೆಲವೊಮ್ಮೆ
ಅಮ್ಮ ಮಗಳಿಗಾಗಿ ಏನಾದರು ಪಾರ್ಸಲ್ ಕಳಿಸುತ್ತಿದ್ದಳು. ಇದು ಸುರೇಶನಿಂದ ಆನಂದ, ಆನಂದನಿಂದ ಮಗಳಿಗೆ
ತಲುಪುತಿತ್ತು. ಒಟ್ಟಿನಲ್ಲಿ ಸುರೇಶ ಮತ್ತು ಆನಂದನ ಮದ್ಯೆ ಒಳ್ಳೆ ಗೆಳೆತನವಿತ್ತು. ಒಟ್ಟಿನಲ್ಲಿ ಯುಗಾದಿ
ಗೆ ಎಲ್ಲರು ಸೇರಿದರು. ಸ್ನೇಹ ತನ್ನ ಡಿಗ್ರಿ ಯ ಸೆನ್ಡ್ ಅಪ್ ಪಾರ್ಟಿ ಗೆ ಉಟ್ಟ ಗುಲಾಬಿ ಬಣ್ಣದ ವರ್ಕ
ಸೀರೆ ಉಟ್ಟು ಚನ್ನಾಗಿ ಕಾಣುತ್ತಿದ್ದಳು. ಉಟಕ್ಕೆ ಸ್ವಲ್ಪ ಸಮಯ ಇರೋ ಕಾರಣ ವರಾಂಡದಲ್ಲಿ ಸ್ನೇಹ ಸುರೇಶ,
ಭಾವಂದಿರು, ಮತ್ತು ಆನಂದ ಹೀಗೆ ಹರಟೆ ಹೊಡೆಯುತ್ತಿದ್ದರು.
ಹೀಗೆ ಮಾತಿನ ಮದ್ಯೆ ಸ್ನೇಹ ಕೆಲಸಕ್ಕೆ ಸೇರುವ ವಿಚಾರ ಹೇಳಿದಳು. ಸ್ನೇಹಳ ಅಪ್ಪ ಆನಂದ ನ ಹತ್ತಿರ ನಿಮ್ಮ
ಸಾಪ್ಟ್ ವೇರ್ ಕಂಪನಿಯಲ್ಲಿ ವೆಕೆನ್ಸಿ ಇದಿಯಾ ಎಂದು ಆನಂದನಲ್ಲಿ ಕೇಳಿದರು. ಆನಂದ ಸ್ನೇಹಾಳಿಗೆ ನಿನ್ನ ಬಯೋಡಾಟ ತಗೊಂಡು ಆಪೀಸ್ ಗೆ ಬಂದು ತನ್ನ
ನೋಡು ಎಂದು ವಿಳಾಸ ಮತ್ತು ಪೋನ್ ನಂಬರ್ ಕೊಟ್ಟ. ಸ್ನೇಹಾ
ಮರುದಿನ ಬಂದು ಬೇಟಿ ಆಗುವ ಸೂಚನೆ ಇಟ್ಟಳು. ಆನಂದನಿಗೆ ಏನೋ ಖುಶಿ. ಈ ನೆಪದಲ್ಲಿ ಅವಳ ಗೆಳೆತನ ಸಂಪಾದಿಸಬಹುದು
ಎಂದು. ಹೀಗೆ ಹಬ್ಬದ ಊಟ ಮಾಡಿ ಎಲ್ಲ ಮನೆಗೆ ಹೊರಟರು.
ಸ್ನೇಹಾ ಹೇಳಿದ ಹಾಗೆ
ಮರುದಿನ ಆನಂದನ ಆಫೀಸ್ ಗೆ ಹೋಗಿ ಅವನನ್ನು ಬೇಟಿ ಆದಳು. ಆನಂದ ಅವನ ಪ್ರಾಜಕ್ಟ್ ಮ್ಯಾನೆಜರ್ ಹತ್ತಿರ ಮಾತಾಡಿ ಪ್ರೇಶರ್ ಆದ ಕಾರಣ
ಯಾವುದೊ ಒಂದು ಪ್ರಾಜಕ್ಟ್ ಗೆ ಫಿಟ್ ಮಾಡಿದ. ಇವಳಿಗೂ
ಹಣದ ಅವಶ್ಯಕತೆ ಇಲ್ಲದಿದ್ದರು ಕೆಲಸ ಕಲಿಯುವ ಮತ್ತು ವರ್ಕ ಎಕ್ಸಪೀರಿಯನ್ಸ್ ಬೇಕಿತ್ತು. ಖುಶಿಯಿಂದಲೆ
ಒಪ್ಪಿದಳು. ಹೀಗೆ ಆನಂದ ಮತ್ತು ಸ್ನೇಹಾಳ ಗೆಳೆತನ ಶುರುವಾಯಿತು.
ಸುರೇಶನ್ ಆಪೀಸ್
ಆನಂದನ ಆಪೀಸ್ ಒಂದೆ ಟೆಕ್ ಪಾರ್ಕನಲ್ಲಿ ಇದ್ದ ಕಾರಣ ಕೆಲವೊಮ್ಮೆ ಊಟಕ್ಕೆ ಹೋದಾಗ ಅಥವಾ ಟೀ ಸಮಯದಲ್ಲಿ
ಬೇಟಿ ಆಗ್ತಾ ಇದ್ದರು. ಆನಂದ ಸ್ನೇಹಾ ತನ್ನ ಆಪೀಸಿಗೆ ಸೇರಿದ ವಿಚಾರ ಹೇಳಿದ. ಅದು ಅಲ್ಲದೆ ಮಾತಿಗ್
ಒಮ್ಮೆ ಸ್ನೇಹಾಳ ವಿಚಾರ ಹೇಳುತ್ತಿದ್ದ. ಆಗ ಸುರೇಶನಿಗೆ
ಸ್ವಲ್ಪ ಮನಸ್ಸಿಗೆ ಹಿಂಸೆ ಆಗ್ತಾ ಇತ್ತು. ಆನಂದ ನು ಸ್ನೇಹಳನ್ನು ಇಷ್ಟ ಪಡ್ತಾನಾ ಅನ್ನೊ ಗುಮಾನಿ
ಶುರು ಆಯಿತು. ಹೀಗೆ ಇರುವಾಗ ಸ್ನೇಹ ಆಪೀಸಿನ ಕ್ಯಾಂಪಸ್ ನಲ್ಲಿ ಸುರೇಶನಿಗೂ ಕೆಲವೊಮ್ಮೆ ಸಿಗ್ತಾ ಇದ್ದಳು.
ಆಗ ಮೊದಲಿನ ತರವೆ ಮಾತಡ್ತಾ ಇದ್ದಳು. ಯಾವಗಲು ಆನಂದನ ವಿಚಾರ ಹೇಳಲಿಲ್ಲ. ಸುರೇಶನಿಗೆ ಮನಸ್ಸಿನಲ್ಲೆ
ಸ್ವಲ್ಪ ಗೊಂದಲ ಶುರುವಾಯಿತು. ಸ್ನೇಹ ಮತ್ತು ಸುರೇಶನ ಆಪೀಸ್ ಅಕ್ಕ-ಪಕ್ಕ ಅಂತ ತಿಳಿದ ಸುರೇಶನ ತಂಗಿ
ಪರಿಣಿತ ಅಣ್ಣನಿಗೊಸ್ಕರ ಎಕ್ಸ್ ಟ್ರಾ ಒಂದು ಬಾಕ್ಸ್ ಕೊಡುತ್ತಿದ್ದಳು. ಹಾಗೆ ಸುರೇಶನ ಅಮ್ಮ ಏನಾದರು
ಮಾಡಿದ್ರೆ ತನ್ನ ಹೆಣ್ಣು-ಮಕ್ಕಳೀಗೊಸ್ಕರ ಎಕ್ಸ್ ಟ್ರಾ
ಬಾಕ್ಸ್ ಕೊಟ್ಟು ಕಳಿಸುತ್ತಿದ್ದಳು. ಇದು ಸುರೇಶನ
ಅಮ್ಮನಿಗೆ ಮೊದಲಿನಿಂದಬಂದ ಅಬ್ಯಾಸ. ಮೊದಲು ಆನಂದನ ಕೈಗೆ ಕೊಡುವುದಾಗಿತ್ತು. ಈಗ ಸ್ನೇಹ ಮತ್ತು ಆನಂದ
ಇಬ್ಬರಿಗೂ ಕೊಡ್ತಾ ಇದ್ದ, ಎರಡು ಹೆಣ್ಣು ಮಕ್ಕಳಿಗೂ ಅಮ್ಮನ ಕೈ ರುಚಿ ಮಿಸ್ ಆಗಲಿಲ್ಲ. ಈ ಕಾರಣದಿಂದ
ಆನಂದ ಮತ್ತು ಸುರೇಶ ಗೆಳೆಯರಾಗಿದ್ದು. ಈಗ ಅಕ್ಕ-ತಂಗಿಯರು ಏನಾದರು ಇದ್ದರೆ ನಾದಿನಿ- ಮೈದುನ ಇವರ ಸಹಾಯ ಕೇಳುತ್ತಿದ್ದರು. ಒಟ್ಟಿನಲ್ಲಿ ಮೂವರಲ್ಲು ಒಳ್ಳೆ
ಗೆಳೆತನ ಇತ್ತು.
ಮೂವರು ಆಗಾಗ ಸಿಗ್ತಾ
ಇದ್ದರು ಮತ್ತು ಮಾತಾಡ್ತಾ ಇದ್ರು. ಸೂಕ್ಷ್ಮ್ ಅರಿತ ಸ್ನೇಹಳಿಗೆ ಆನಂದ ಮತ್ತು ಸುರೇಶನಲ್ಲಿ ಆದ ಬದಲಾವಣೆ
ಸ್ವಲ್ಪ ಸ್ವಲ್ಪ ವಾಗಿ ಅವರ ಮಾತಿನ ದಾಟಿಯಲ್ಲಿ ಅರಿವಾಗುತ್ತಾ ಬಂತು. ಸ್ನೇಹ ಇಬ್ಬರನ್ನು ಸಂಭದಿಕರು
ಮತ್ತು ಗೆಳೆಯರೆಂದೆ ಭಾವಿಸಿದ್ದಳು. ಅವಳ ಮನಸ್ಸಿನಲ್ಲಿ ಯಾವಾಗಲು ಪ್ರೀತಿ ಪ್ರೇಮಕ್ಕೆ ಜಾಗ ಇಲ್ಲ.
ಕಾಲೇಜಿನ ದಿನದಿಂದಲು ಅವಳು ಈ ವಿಚಾರದಲ್ಲಿ ಯಾವಗಲು ಮನಸ್ಸನ್ನು ಹಗುರ ಬಿಡಲಿಲ್ಲ. ಇಬ್ಬರ ಮನಸ್ಸನ್ನು
ಅರಿತ ಸ್ನೇಹ ತಾನೆ ಮೊದಲು ಇದಕ್ಕೆ ಏನಾದರು ಉಪಾಯ ಮಾಡಬೇಕು ತನ್ನಿಂದ ಸಂಭಂದ ಹಾಳಾಗಬಾರದೆಂದು ಯೋಚಿಸಿದಳು.
ಒಮ್ಮೆ ಸ್ನೇಹಾಳ
ಅಪ್ಪ ಅವಳ ಮದುವೆ ವಿಚಾರ ಮಾತಾಡಿದ. ಓದು ಮತ್ತು ಕೆಲಸ ಸಿಕ್ಕ ಸ್ನೇಹಳಿಗೆ ಮದುವೆ ವಿಚಾರಕ್ಕೆನು ಅಡ್ಡಿ
ಇಲ್ಲವಾಗಿತ್ತು. ಸರಿಯಾದ ವಯಸ್ಸಿಗೆ ಮದುವೆ ಆಗೋ ಆಸೆ ಕೂಡ ಇತ್ತು. ಸ್ನೇಹ ಅಪ್ಪನ ಹತ್ತಿರ ತನ್ನ ಅಡ್ಡಿ
ಏನು ಇಲ್ಲ. ಸರಿಯಾದ ಹುಡುಗ ಸಿಕ್ಕಿದರೆ ನೀವು ನೋಡಿದ್ದೆ ಆಗುವೆ ತನ್ನ ಮನಸ್ಸಿನಲ್ಲಿ ಯಾರು ಇಲ್ಲ
ಅಂದಳು. ಹಾಗೆ ಸ್ನೇಹಾಳ ಅಪ್ಪ ತನ್ನ ಪರಿಚಯದವ್ರ ಹತ್ತಿರ ಅವಳ ಜಾತಕ ಕೊಟ್ಟು ವರಾನ್ವೇಷಣೆ ಮಾಡಿದ.
ಒಳ್ಳೆ ಗಂಡು ಸಿಗುವುದು ಅವಳಿಗೆ ಕಷ್ಟದ ವಿಷಯವೇನಲ್ಲ. ಹಾಗೆ ಸ್ನೇಹಳ ನೋಡಲು ಒಂದು ಗಂಡು ಬರುವ ವಿಚಾರ
ಹೇಳಿದ. ಒಳ್ಳೆ ಕೆಲಸ ಮತ್ತು ಮನೆತನದವರೆಂದು ನಿನಗೆ ಒಪ್ಪಿದರೆ ಮದುವೆ ಮಾಡುವುದೆಂದು ಹೇಳಿದರು. ಈ
ಯಾವ ವಿಚಾರವು ಸುರೇಶ ಮತ್ತು ಆನಂದನ ಕಿವಿಗೆ ಬಿಳಲಿಲ್ಲ. ಹೆಣ್ಣು ನೋಡಿ ನಿಶ್ಛಿತಾರ್ಥ ದ ದಿನಾಂಕ
ನಿಗದಿ ಆದಾಗ ಸ್ನೇಹ ಆಪೀಸಿನಲ್ಲಿ ಆನಂದ ಮತ್ತು ಸುರೇಶನನ್ನು ತಾನೆ ಕಾಫಿಗೆ ಕರೆದಳು. ಇಬ್ಬರು ಕುತುಹಲದಲ್ಲಿ
ಬಂದರು.
ಕಾಫಿ ಕುಡಿತಾ ಸ್ನೇಹ
ಬಂದ ವಿಚಾರ ಹೇಳಿದಳು. ಮುಂದಿನ ಭಾನುವಾರ ತನ್ನ ನಿಶ್ಚುತಾರ್ಥ ಮತ್ತು ತನ್ನ ಅಣ್ಣ-ಅತ್ತಿಗೆ ನಿಮ್ಮಿಬ್ಬರ
ಮನೆಗೂ ಬಂದು ಕರೆಯುವ ವಿಚಾರ ತಿಳಿಸಿದಳು. ಇಬ್ಬರಿಗೂ ಒಮ್ಮೆ ಶಾಕ್ ಆಯಿತು. ಯಾರು ತೋರಿಸಿಕೊಳ್ಳದೆ
ಮಾತಾಡಿದರು. ಸ್ನೇಹಳೆ ತನ್ನ ಮಾತನ್ನು ಮುಂದುವರೆಸಿ ತನಗೆ ಯಾವಾಗಲು ಅರೆಂಜ್ ಮ್ಯಾರೆಜ್ ಇಷ್ಟ. ತಾನು
ಮೊದಲಿನಿಂದಲು ಸ್ನೇಹಕ್ಕೆ ಬೆಲೆ ಕೊಡುವವಳು ಪ್ರೀತಿ-ಪ್ರೇಮಕ್ಕಲ್ಲ ಎಂದು ಬೆಣ್ಣೆಯಿಂದ ಕೂದಲು ತೆಗೆಯುವ
ಹಾಗೆ ಇಬ್ಬರ ಮನಸ್ಸಿಗೂ ಅರ್ಥ ಆಗುವಂತೆ ಹೇಳಿದಳು. ಸುರೇಶ ಮತ್ತು ಆನಂದ ಇಬ್ಬರಲ್ಲು ಮೌನ ಆವರಿಸಿತು.
ಇಬ್ಬರು ಅವಳಿಗೆ ಶುಭಾಶಯ ಕೊರಿ ನಿಶ್ಚಿತಾರ್ಥಕ್ಕೆ ಬರುವುದಾಗಿ ಹೇಳಿದರು.
2 comments:
Spr akka
Post a Comment